Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಹಣ ಬಾಚಿದ ತೆಲುಗು ಚಿತ್ರಗಳ ಟಾಪ್ 10 ಪಟ್ಟಿ
2022ರಲ್ಲಿ ಬಾಲಿವುಡ್ ಚಿತ್ರಗಳಿಗಿಂತ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳೇ ಹೆಚ್ಚಿನ ಕಲೆಕ್ಷನ್ ಮಾಡಿರುವುದು ವಿಶೇಷ. ಇಷ್ಟು ವರ್ಷಗಳ ಕಾಲ ಬಾಲಿವುಡ್ ಚಿತ್ರಗಳು ಕೋಟಿ ಕೋಟಿ ಬಾಚಿದರೆ ಈ ವರ್ಷ ದಕ್ಷಿಣ ಭಾರತದ ಚಿತ್ರರಂಗಗಳ ಚಿತ್ರಗಳು ಕೋಟ್ಯಂತರ ರೂಪಾಯಿಗಳನ್ನು ಬಾಚಿವೆ. ಈ ವರ್ಷ ನೂರು ಕೋಟಿ ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಸಿಂಹಪಾಲನ್ನು ದಕ್ಷಿಣ ಭಾರತದ ಚಿತ್ರರಂಗದ ಚಿತ್ರಗಳು ಹೊಂದಿವೆ.
ಕೆಜಿಎಫ್ ಚಾಪ್ಟರ್ 2 ಹಾಗೂ ಆರ್ ಆರ್ ಆರ್ ಚಿತ್ರಗಳು ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಚಿತ್ರಗಳು ಎನಿಸಿಕೊಂಡರೆ, ಕಾಂತಾರ, ವಿಕ್ರಮ್ ಹಾಗೂ ಪೊನ್ನಿಯಿನ್ ಸೆಲ್ವನ್ ಚಿತ್ರಗಳೂ ಸಹ ಭರ್ಜರಿ ಕಲೆಕ್ಷನ್ ಮಾಡಿ ಅಬ್ಬರಿಸಿವೆ. ಇನ್ನು ತೆಲುಗು ಚಿತ್ರರಂಗದ ಚಿತ್ರಗಳೂ ಸಹ ಇಷ್ಟು ವರ್ಷಗಳ ಹಾಗೆ ಈ ವರ್ಷವೂ ಸಹ ಒಳ್ಳೆಯ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿವೆ.
ಈ ವರ್ಷ ತೆಲುಗಿನ ಒಟ್ಟು 28 ಚಿತ್ರಗಳು ಬ್ಲಾಕ್‌ಬಸ್ಟರ್, ಹಿಟ್, ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ ಎಂಬ ಫಲಿತಾಂಶವನ್ನು ಪಡೆದುಕೊಂಡಿವೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನೂ ಸಹ ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲೂ ಸಹ ತೆಲುಗು ಚಿತ್ರಗಳು ಒಳ್ಳೆಯ ಗಳಿಕೆ ಮಾಡಿವೆ. ಹಾಗಿದ್ದರೆ ಈ ವರ್ಷ ರಾಜ್ಯದಲ್ಲಿ ತೆಲುಗಿನ ಯಾವ ಚಿತ್ರಗಳು ಅಧಿಕ ಕಲೆಕ್ಷನ್ ಮಾಡಿವೆ ಎಂಬುದರ ಕುರಿತಾದ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..

ಕರ್ನಾಟಕದಲ್ಲಿ 2022ರಲ್ಲಿ ಅತಿಹೆಚ್ಚು ಗಳಿಸಿದ ತೆಲುಗು ಚಿತ್ರಗಳು
1. ಆರ್ ಆರ್ ಆರ್ : 79 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
2. ಭೀಮ್ಲಾ ನಾಯಕ್: 12.23 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
3. ಸರ್ಕಾರು ವಾರಿ ಪಾಟ: 11.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
4. ಸೀತಾ ರಾಮಮ್: 7.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
5. ರಾಧೆ ಶ್ಯಾಮ್ : 7.3 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
6. ಕಾರ್ತಿಕೇಯ 2 : 6.45 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
7. ಗಾಡ್ ಫಾದರ್ : 5.95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
8. ಆಚಾರ್ಯ : 4.6 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
9. ಹಿಟ್ ದ ಸೆಕೆಂಡ್ ಕೇಸ್ : 4.47 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
10. ಮೇಜರ್ - 4.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ಮಿಶ್ರ ಪ್ರತಿಕ್ರಿಯೆಯೊಂದಿಗೆ ಸರ್ಕಾರು ವಾರಿ ಪಾಟ ಒಳ್ಳೆಯ ಗಳಿಕೆ
ಇನ್ನು ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಹಾಗೂ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಚಿತ್ರಗಳು ಒಳ್ಳೆಯ ಗಳಿಕೆ ಮಾಡಿವೆ. ಚಿತ್ರಗಳಿಗೆ ಒಳ್ಳೆಯ ವಿಮರ್ಶೆ ಬಂದಿದ್ದರೆ ಇನ್ನೂ ಹೆಚ್ಚಿನ ಗಳಿಕೆ ಮಾಡುತ್ತಿದ್ದವು. ಇನ್ನುಳಿದಂತೆ ಈ ಪಟ್ಟಿಯಲ್ಲಿ ನಟ ಅಡಿವಿ ಸೇಷ್ ನಟನೆಯ ಎರಡು ಚಿತ್ರಗಳು ಸ್ಥಾನ ಪಡೆದುಕೊಂಡಿರುವುದು ವಿಶೇಷ. ಊಹೆಯಂತೆ ಈ ಬಾರಿ ಆರ್ ಆರ್ ಆರ್ ಚಿತ್ರ ರಾಜ್ಯದಲ್ಲಿ ಅತಿಹೆಚ್ಚು ಗಳಿಕೆ ಕಂಡ ತೆಲುಗು ಚಿತ್ರ ಎನಿಸಿಕೊಂಡಿದೆ.

ಗೆದ್ದ ತೆಲುಗು ಚಿತ್ರಗಳು
ಈ ವರ್ಷ ತಮ್ಮ ಥಿಯೇಟ್ರಿಕಲ್ ಹಕ್ಕಿಗಿಂತ ಹೆಚ್ಚು ಹಣ ಗಳಿಸಿ ಗೆದ್ದ ತೆಲುಗು ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..
ಸೂಪರ್ ಹಿಟ್/ ಬ್ಲಾಕ್‌ಬಸ್ಟರ್ ಚಿತ್ರಗಳು:
1. ಬಂಗಾರ್ರಾಜು
2. ಡಿಜೆ ಟಿಲ್ಲು
3. ಆರ್ ಆರ್ ( ಈ ವರ್ಷ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ )
4. ಕೆಜಿಎಫ್ ಚಾಪ್ಟರ್ 2 ( ಡಬ್ ) ( ಸೂಪರ್ ಬ್ಲಾಕ್‌ಬಸ್ಟರ್ )
5. ಮೇಜರ್ ( ಡಬಲ್ ಬ್ಲಾಕ್‌ಬಸ್ಟರ್ )
6. ವಿಕ್ರಮ್ ( ಡಬ್ ) ( ಹಿಟ್ )
7. ಬಿಂಬಿಸಾರ ( ಡಬಲ್ ಬ್ಲಾಕ್‌ಬಸ್ಟರ್ )
8. ಕಾರ್ತಿಕೇಯ 2 ( ಸೂಪರ್ ಬ್ಲಾಕ್‌ಬಸ್ಟರ್ )
9. ಕಾಂತಾರ ( ಡಬ್ ) ( ಸೂಪರ್ ಬ್ಲಾಕ್‌ಬಸ್ಟರ್ )
10. ಮಸೂದ ( ಬ್ಲಾಕ್ ಬಸ್ಟರ್ )
11. ಲವ್ ಟುಡೇ ( ಡಬ್ , ಹಿಟ್ )
12. ಹಿಟ್ ದ ಸೆಕೆಂಡ್ ಕೇಸ್ ( ಹಿಟ್ )
13. ಸೀತಾ ರಾಮಮ್ ( ಡಬಲ್ ಬ್ಲಾಕ್ ಬಸ್ಟರ್ )
14. ಅವತಾರ್ ದ ವೇ ಆಫ್ ವಾಟರ್ ( ಸೂಪರ್ ಬ್ಲಾಕ್ ಬಸ್ಟರ್ )
15. ಧಮಾಕಾ ( ಸೂಪರ್ ಹಿಟ್ )
ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ ಎನಿಸಿಕೊಂಡ ಚಿತ್ರಗಳು:
1. ರೌಡಿ ಬಾಯ್ಸ್
2. ಭೀಮ್ಲಾ ನಾಯಕ್
3. ಅಶೋಕವನಂಲೋ ಅರ್ಜುನ ಕಲ್ಯಾಣಂ
4. ಡಾನ್ ( ಡಬ್ )
5. ಎಫ್ 3
6. 777 ಚಾರ್ಲಿ ( ಡಬ್ )
7. ವಿಕ್ರಾಂತ್ ರೋಣ ( ಡಬ್ )
8. ಒಕೆ ಒಕ ಜೀವಿತಮ್
9.ಬ್ರಹ್ಮಾಸ್ತ್ರ ( ಡಬ್ )
10. ಸರ್ಕಾರು ವಾರಿ ಪಾಟ
11. ಪೊನ್ನಿಯಿನ್ ಸೆಲ್ವನ್ 1 ( ಡಬ್ )
12. ಸರ್ದಾರ್ ( ಡಬ್ )
13. ಗಾಲೋಡು