Don't Miss!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದೇ ಒಂದು ರಿಮೇಕ್ ಚಿತ್ರವನ್ನೂ ಮಾಡಿಲ್ಲ ಈ ಇಬ್ಬರು ನಟರು; ತೆಲುಗಿನಲ್ಲಿ ಹೆಚ್ಚು ರಿಮೇಕ್ ಮಾಡಿದ ನಟ ಯಾರು?
ರಿಮೇಕ್ ಚಿತ್ರಗಳಿಗೆ ಈಗಿನ ಚಿತ್ರರಂಗಗಳಲ್ಲಿ ಬೆಲೆ ಇಲ್ಲ. ಈ ವರ್ಷ ಬಿಡುಗಡೆಗೊಂಡ ಹಲವಾರು ಚಿತ್ರಗಳು ಮಕಾಡೆ ಮಲಗಿವೆ. ಇನ್ನು ತೆಲುಗು ಚಿತ್ರರಂಗದಲ್ಲಿ ಈ ವರ್ಷ ರಿಮೇಕ್ ಚಿತ್ರಗಳ ಸಂಖ್ಯೆ ತುಸು ಹೆಚ್ಚೇ ಇತ್ತು ಎಂದು ಹೇಳಬಹುದು. ಬೇರೆ ಇಂಡಸ್ಟ್ರಿಗಳಲ್ಲಿ ಹಿಟ್ ಆದ ಚಿತ್ರಗಳನ್ನು ಆರಿಸಿ ರಿಮೇಕ್ ಮಾಡಿದ ತೆಲುಗು ನಿರ್ದೇಶಕರಿಗೆ ಈ ವರ್ಷ ಸಿಹಿ ಸಿಕ್ಕಿದ್ದು ಕಡಿಮೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ರಿಮೇಕ್ ಚಿತ್ರ ಗಾಡ್‌ಫಾದರ್ ಕೂಡ ಶೇರ್ ವಿಷಯದಲ್ಲಿ ನಷ್ಟ ಉಂಟು ಮಾಡಿತು.
ಒಬ್ಬ ದಿಗ್ಗಜ ನಟ ನಟಿಸಿದರೂ ಸಹ ನಷ್ಟ ಅನುಭವಿಸುವ ಮಟ್ಟಕ್ಕೆ ರಿಮೇಕ್ ಚಿತ್ರಗಳನ್ನು ತಿರಸ್ಕರಿಸಲು ಆರಂಭಿಸಿಬಿಟ್ಟಿದ್ದಾರೆ ಸಿನಿ ಪ್ರೇಕ್ಷಕರು. ಇನ್ನು ಈ ರೀತಿಯ ಬೆಳವಣಿಗೆಗೆ ಕಾರಣ ಪ್ಯಾನ್ ಇಂಡಿಯಾ ಅಬ್ಬರ ಎಂದೇ ಹೇಳಬಹುದು. ಈಗ ಮೂಲೆಗುಂಪಾಗಿರುವ ರಿಮೇಕ್ ಚಿತ್ರಗಳು ಈ ಹಿಂದೆ ಸೂಪರ್ ಹಿಟ್, ಬ್ಲಾಕ್‌ಬಸ್ಟರ್ ಚಿತ್ರಗಳಾಗಿ ದೊಡ್ಡ ಲಾಭ ತಂದುಕೊಟ್ಟ ಹಲವಾರು ಉದಾಹರಣೆಗಳಿವೆ.
'ಕಾಂತಾರ'
ಹೊಡೆತಕ್ಕೆ
ಸಿಕ್ಕ
'ಗಾಡ್‌ಫಾದರ್'
ಟೋಟಲ್
ಕಲೆಕ್ಷನ್
ಎಷ್ಟು,
ಉಂಟಾದ
ನಷ್ಟವೆಷ್ಟು?
ಹೀಗಾಗಿಯೇ ಎಲ್ಲಾ ಚಿತ್ರರಂಗಗಳಲ್ಲೂ ಈ ಹಿಂದೆ ಬಹುತೇಕ ನಟರು ರಿಮೇಕ್ ಚಿತ್ರಗಳನ್ನು ಮಾಡ್ತಿದ್ರು. ಸ್ವಮೇಕ್ ಚಿತ್ರಗಳು ಕೈಹಿಡಿಯದೇ ಇದ್ದಾಗ ಸ್ಟಾರ್ ನಟರು ರಿಮೇಕ್ ಚಿತ್ರಗಳ ಹಿಂದೆ ಬಿದ್ದದ್ದೂ ಸಹ ಇದೆ. ಇನ್ನು ತೆಲುಗು ಚಿತ್ರರಂಗದಲ್ಲೂ ಕೂಡ ನಟರು ರಿಮೇಕ್ ಚಿತ್ರಗಳನ್ನು ಮಾಡಿದ್ದಾರೆ. ಈಗಲೂ ಪವನ್ ಕಲ್ಯಾಣ್, ಚಿರಂಜೀವಿ ರೀತಿಯ ಸ್ಟಾರ್ ನಟರು ರಿಮೇಕ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ಆದರೆ ತೆಲುಗಿನ ಇಬ್ಬರು ನಟರು ಮಾತ್ರ ಒಂದೇ ಒಂದು ರಿಮೇಕ್ ಚಿತ್ರದಲ್ಲೂ ನಟಿಸದೇ ಸ್ವಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗು ಚಿತ್ರರಂಗದಲ್ಲಿ ಯಾವ ನಟ ಅತಿಹೆಚ್ಚು ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾನೆ ಎಂಬ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು, ಈ ಕುರಿತಾದ ಮಾಹಿತಿ ಕೆಳಕಂಡಂತಿದೆ..

ವಿಕ್ಟರಿ ವೆಂಕಟೇಶ್ ರಿಮೇಕ್ ಕಿಂಗ್
ತೆಲುಗು ಚಿತ್ರರಂಗದಲ್ಲಿ ಸದ್ಯ ನಟನೆಯಲ್ಲಿ ಸಕ್ರಿಯರಾಗಿರುವ ನಟರ ಪೈಕಿ ಅತಿಹೆಚ್ಚು ರಿಮೇಕ್ ಚಿತ್ರಗಳಲ್ಲಿ ನಟಿಸಿರುವುದು ವಿಕ್ಟರಿ ವೆಂಕಟೇಶ್. ಸುಮಾರು 25 ರಿಮೇಕ್ ಚಿತ್ರಗಳಲ್ಲಿ ವಿಕ್ಟರಿ ವೆಂಕಟೇಶ್ ನಟಿಸಿದ್ದು, ತೆಲುಗು ಚಿತ್ರರಂಗದ ರಿಮೇಕ್ ಕಿಂಗ್ ಎನಿಸಿಕೊಂಡಿದ್ದಾರೆ. ಇನ್ನು ವಿಕ್ಟರಿ ವೆಂಕಟೇಶ್ ನಟಿಸಿದ ರಿಮೇಕ್ ಚಿತ್ರಗಳ ಪೈಕಿ ಹಿಟ್ ಎನಿಸಿಕೊಂಡ ಚಿತ್ರಗಳೇ ಹೆಚ್ಚಿವೆ.

ತೆಲುಗು ನಟರು ಹಾಗೂ ಅವರ ರಿಮೇಕ್ ಚಿತ್ರಗಳ ಸಂಖ್ಯೆ
ವಿಕ್ಟರಿ ವೆಂಕಟೇಶ್ - 25 ಚಿತ್ರಗಳು
ಚಿರಂಜೀವಿ - 17 ಚಿತ್ರಗಳು
ಬಾಲಕೃಷ್ಣ - 12 ಚಿತ್ರಗಳು
ನಾಗಾರ್ಜುನ - 12 ಚಿತ್ರಗಳು
ಪವನ್ ಕಲ್ಯಾಣ್ - 11 ಚಿತ್ರಗಳು
ರವಿತೇಜಾ - 5 ಚಿತ್ರಗಳು
ರಾಮ್‌ಚರಣ್ - 2 ಚಿತ್ರಗಳು
ಪ್ರಭಾಸ್ - 2 ಚಿತ್ರಗಳು
ಎನ್‌ಟಿಆರ್ - 1 ಚಿತ್ರ

ರಿಮೇಕ್ ಮುಟ್ಟದ ನಟರಿವರು
ಇನ್ನು ಈ ಮೇಲ್ಕಂಡ ತೆಲುಗು ನಟರು ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದರೆ, ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ತಮ್ಮ ಸಿನಿ ಕೆರಿಯರ್‌ನಲ್ಲಿ ರಿಮೇಕ್ ಚಿತ್ರಗಳಲ್ಲಿ ನಟಿಸಿಯೇ ಇಲ್ಲ ಎಂಬ ವಿಶೇಷ ದಾಖಲೆಯನ್ನು ಹೊಂದಿದ್ದಾರೆ. ಇಲ್ಲಿಯವರೆಗೂ ಒಂದೇ ಒಂದು ರಿಮೇಕ್ ಚಿತ್ರವನ್ನೂ ಮಾಡದ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಸದ್ಯ ರಿಮೇಕ್ ಕ್ರೇಜ್ ಕಡಿಮೆಯಾಗಿರುವುದರಿಂದ ಇನ್ನುಮುಂದೆಯೂ ರಿಮೇಕ್ ಚಿತ್ರಗಳನ್ನು ಮಾಡುವುದೇ ಇಲ್ಲ ಎನ್ನಬಹುದು.