twitter
    For Quick Alerts
    ALLOW NOTIFICATIONS  
    For Daily Alerts

    BREAKING: ಮಾ ಚುನಾವಣೆ: ಪ್ರಕಾಶ್ ರೈಗೆ ಸೋಲು

    |

    ತೆಲುಗು ಸಿನಿಮಾ ರಂಗದ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಯ ಫಲಿತಾಂಶ ಹೊರಗೆ ಬಿದ್ದಿದ್ದು, ಮಂಚು ವಿಷ್ಣು ವಿರುದ್ಧ ಪ್ರಕಾಶ್ ರೈ ಸೋಲುಂಡಿದ್ದಾರೆ.

    ಮಾ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು ಹಾಗೂ ಪ್ರಕಾಶ್ ರಾಜ್ ಸ್ಪರ್ಧಿಸಿದ್ದು ಮಂಚು ವಿಷ್ಣು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಚು ವಿಷ್ಣು ಸುಮಾರು 400 ಮತಗಳ ಅಂತರದಲ್ಲಿ ಪ್ರಕಾಶ್ ರೈ ಅವರನ್ನು ಸೋಲಿಸಿದ್ದಾರೆ.

    ಸಿಂಡಿಕೇಟ್ ಮಾದರಿಯಲ್ಲಿ ಚುನಾವಣೆ ನಡೆದಿದ್ದು, ಮಂಚು ವಿಷ್ಣು ಸಿಂಡಿಕೇಟ್‌ನಿಂದ ಸ್ಪರ್ಧಿಸಿದ್ದವರಿಗೆ ಹೆಚ್ಚು ಮಂದಿಗೆ ಗೆಲುವು ದೊರಕಿದೆ. ಆದರೆ ಉಪಾಧ್ಯಕ್ಷ ಸ್ಥಾನವನ್ನು ಪ್ರಕಾಶ್ ರೈ ಸಿಂಡಿಕೇಟ್‌ನಿಂದ ಸ್ಪರ್ಧಿಸಿದ್ದ ಶ್ರೀಕಾಂತ್‌ ಗೆದ್ದುಕೊಂಡಿದ್ದಾರೆ.

    ಪ್ರಕಾಶ್ ರೈ ಪ್ಯಾನಲ್‌ನಿಂದ ಸ್ಪರ್ಧಿಸಿದ್ದ ಜೀವಿತಾ ರಾಜಶೇಖರ್ ಸೋತಿದ್ದಾರೆ. ಜೀವಿತಾ ವಿರುದ್ಧ ರಘುಬಾಬು ಗೆಲುವು ಸಾಧಿಸಿದ್ದಾರೆ. ಬ್ಯಾನರ್ಜಿ ವಿರುದ್ಧ ಮದ್ದಾಲ ರವಿ ಗೆಲುವು ಸಾಧಿಸಿದ್ದಾರೆ. ಮಂಚು ವಿಷ್ಣು ಪ್ಯಾನೆಲ್‌ನ 11 ಮಂದಿ ಗೆಲುವು ಸಾಧಿಸಿದ್ದು ಮಾ ಗದ್ದುಗೆ ಮಂಚು ವಿಷ್ಣುಗೆ ಪ್ಯಾನೆಲ್‌ಗೆ ದೊರಕುವುದು ಖಾತ್ರಿಯಾಗಿದೆ.

    MAA Election: Prakash Raj Lost Against Manchu Vishnu

    ಪ್ರಕಾಶ್ ರೈ ಪ್ಯಾನಲ್‌ನಿಂದ ಸ್ಪರ್ಧಿಸಿದ್ದ ಅನುಸೂಯಾ, ಸುರೇಶ್ ಕೊಂಡೇಟಿ, ಶಿವಾರೆಡ್ಡಿ, ಕೌಶಿಕ್ ಗೆಲುವು ಸಾಧಿಸಿದ್ದಾರೆ. ಮಂಚು ವಿಷ್ಣು ಪ್ಯಾನಲ್‌ನಿಂದ ಸ್ಪರ್ಧಿಸಿದ್ದ 11 ಮಂದಿ ಗೆಲುವು ಸಾಧಿಸಿದ್ದಾರೆ.

    ಮಾ ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧೆ ಮಾಡಿದಾಗಿನಿಂದಲೂ ಲೋಕಲ್ ಮತ್ತು ನಾನ್‌ ಲೋಕಲ್ ಚರ್ಚೆ ಜೋರಾಗಿ ನಡೆಯುತ್ತಿತ್ತು. ಪ್ರಕಾಶ್ ರೈ ಸ್ಥಳೀಯರಲ್ಲ ಅವರನ್ನು ಗೆಲ್ಲಿಸಬಾರದು ಎಂದು ಮಂಚು ವಿಷ್ಣು ಪ್ಯಾನೆಲ್‌ನವರು ವಾಗ್ದಾಳಿ ನಡೆಸಿದ್ದರು. ಆ ನಂತರ ಹಲವರು ಇದನ್ನು ವಿರೋಧಿಸಿದರಾದರೂ, ಮತದಾನದ ದಿನ ಅದೇ ವಿಷಯವೇ ಮುಖ್ಯ ಪಾತ್ರವಹಿಸಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ಭಾರಿ ಅಂತರದಿಂದಲೇ ಪ್ರಕಾಶ್ ರೈ ಸೋತಿದ್ದು, ಮಂಚು ವಿಷ್ಣು ಗೆಲುವು ಸಾಧಿಸಿದ್ದಾರೆ.

    ಮಂಚು ವಿಷ್ಣು ತಂದೆ ಮೋಹನ್‌ಬಾಬು ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕರಾಗಿದ್ದಾರೆ. ಮಗನ ಪರವಾಗಿ ಹಿನ್ನೆಲೆಯಲ್ಲಿ ಮೋಹನ್‌ಬಾಬು ಬಹಳ ಕೆಲಸ ಮಾಡಿದ್ದಾರೆ, ಮಂಚು ವಿಷ್ಣು ಗೆಲುವಿನಲ್ಲಿ ಅದೂ ಒಂದು ಪ್ರಮುಖ ಕಾರಣವಾಗಿದೆ.

    ಪ್ರಕಾಶ್ ರೈಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಬೆಂಬಲ ದೊರೆತಿದ್ದಾದರೂ ಪ್ರಕಾಶ್ ರೈ ಸ್ಥಳೀಯರಲ್ಲ ಎಂಬ ಕಾರಣದಿಂದ ಸೋಲಾಗಿದೆ. ಪ್ರಕಾಶ್ ರೈ ತಮ್ಮ ಪ್ಯಾನೆಲ್‌ಗೆ ಸರಿಯಾದವರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬುದು ಸಹ ಸೋಲಿಗೆ ಕಾರಣವಾಗಿದೆ. ಮೆಗಾಸ್ಟಾರ್ ಚಿರಂಜೀವಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಜೀವಿತಾ ರಾಜಶೇಖರ್ ಅನ್ನು ಪ್ಯಾನೆಲ್‌ಗೆ ಸೇರಿಸಿಕೊಂಡಿದ್ದನ್ನು ಚಿರಂಜೀವಿ ಅಭಿಮಾನಿಗಳೇ ವಿರೋಧಿಸಿದ್ದರು.

    ಚುನಾವಣೆ ಆರಂಭವಾದಾಗಿನಿಂದಲೂ ಎರಡೂ ಪ್ಯಾನೆಲ್‌ಗಳ ನಡುವೆ ಅತಿಯಾದ ವಾಗ್ದಾಳಿಗಳು ನಡೆದಿದ್ದವು. ಮಂಚು ವಿಷ್ಣು ಬಳಗದವರು ಪ್ರಕಾಶ್ ರೈ ಅನ್ನು, ಪ್ರಕಾಶ್ ರೈ ಬಳಗದವರನ್ನು ಮೂದಲಿಸಿದ್ದರು. ಇವರು ಅವರನ್ನು ಮೂದಲಿಸಿದ್ದರು. ಪ್ರಕಾಶ್ ರೈ ಸಹ ಪವನ್ ಕಲ್ಯಾಣ್ ವಿಷಯ ಚರ್ಚೆಗೆ ಬಂದಾಗ ಮಂಚು ವಿಷ್ಣುವನ್ನುದ್ದೇಶಿಸಿ, 'ನಿನ್ನ ಸಿನಿಮಾದ ಒಟ್ಟು ಬಜೆಟ್, ಪವನ್ ಕಲ್ಯಾಣ್ ಸಿನಿಮಾದ ಮೊದಲ ದಿನದ ಕಲೆಕ್ಷನ್' ಎಂದು ಟಾಂಗ್ ನೀಡಿದ್ದರು. ಚಿರಂಜೀವಿ ಸಹೋದರ ನಾಗಬಾಬು ಸಹ ಮಂಚು ವಿಷ್ಣು ವಿರುದ್ಧ ವಾಗ್ದಾಳಿ ಮಾಡಿದ್ದರು. ಈಗ ಮಂಚು ವಿಷ್ಣುವೇ ಗೆದ್ದು ಬೀಗುತ್ತಿದ್ದಾರೆ.

    ಮಂಚು ವಿಷ್ಣು ಗೆಲುವು ಘೋಷಣೆ ಆಗುತ್ತಿದ್ದಂತೆ ಮಂಚು ವಿಷ್ಣು ಪ್ಯಾನೆಲ್‌ನ ಎಲ್ಲರೂ ಸಂಭ್ರಮಿಸಿದ್ದಾರೆ. ಪರಸ್ಪರ ಅಪ್ಪಿಕೊಂಡು ಅಭಿನಂದಿಸಿದ್ದಾರೆ. ಮಂಚು ವಿಷ್ಣು ಅಭಿಮಾನಿಗಳು, ಮೋಹನ್‌ ಬಾಬು ಅಭಿಮಾನಿಗಳು ಫಲಿತಾಂಶ ಘೋಷಣೆಯಾದ ಸ್ಥಳಕ್ಕೆ ದೌಡಾಯಿಸಿ ಪಟಾಕಿಗಳನ್ನು ಹೊಡೆದು ಮಂಚು ವಿಷ್ಣು ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ.

    English summary
    Prakash Raj lost against Manchu Vishnu in MAA election. Prakash Raj's Syndicate member Srikanth won vice president election.
    Monday, October 11, 2021, 10:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X