For Quick Alerts
  ALLOW NOTIFICATIONS  
  For Daily Alerts

  ಪ್ರಿನ್ಸ್ ಫ್ಯಾನ್ಸ್‌ಗೆ ಸರ್‌ಪ್ರೈಸ್ ನ್ಯೂಸ್: ಆ ಡೇಟ್‌ ಮೇಲೆ ಟವೆಲ್ ಹಾಕಿದ ತ್ರಿವಿಕ್ರಮ್!

  |

  ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಈಗಾಗಲೇ ಇವರಿಬ್ಬರು ಸೇರಿ 'ಅತಡು' ಹಾಗೂ 'ಖಲೇಜಾ' ಸಿನಿಮಾಗಳನ್ನು ಮಾಡಿದ್ದರು. 3ನೇ ಚಿತ್ರಕ್ಕೆ ಇದೀಗ ವೇದಿಕೆ ಸಿದ್ಧವಾಗಿದೆ.

  ಈ ವರ್ಷ 'ಸರ್ಕಾರುವಾರಿ ಪಾಟ' ಸಿನಿಮಾ ಮೂಲಕ ಮಹೇಶ್‌ ಬಾಬು ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಇದೀಗ ತ್ರಿವಿಕ್ರಮ್‌ ಶ್ರೀನಿವಾಸ್ ಚಿತ್ರದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಮಹರ್ಷಿ' ಚಿತ್ರದಲ್ಲಿ ಸೂಪರ್ ಸ್ಟಾರ್ ಜೋಡಿಯಾಗಿ ಗೆದ್ದ ಪೂಜಾ ಹೆಗ್ಡೆ ಮತ್ತೊಮ್ಮೆ ಈ ಚಿತ್ರದಲ್ಲಿ ಜೊತೆಯಾಗುತ್ತಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಸಿನಿಮಾ ಮುಹೂರ್ತ ನೆರವೇರಿತ್ತು. ಆದರೆ ಶೂಟಿಂಗ್‌ ಇನ್ನು ಶುರುವಾಗಿಲ್ಲ. ಕ್ಯಾಮರಾ ಸ್ವಿಚ್‌ ಆನ್ ಮಾಡುವುದಕ್ಕೂ ಮೊದಲೇ ರಿಲೀಸ್ ಡೇಟ್ ಘೋಷಿಸಿ ಚಿತ್ರತಂಡ ಅಚ್ಚರಿ ಮೂಡಿಸಿದೆ. ಹೇಳಿದ ಸಮಯಕ್ಕೆ ಸಿನಿಮಾ ನಿಜವಾಗಿಯೂ ರಿಲೀಸ್ ಆಗುತ್ತಾ ಅಂತ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

  ಪ್ರಭಾಸ್ ಮದುವೆ ಮಾಡಿಕೊಂಡರೆ ಸಮಸ್ಯೆ; ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!ಪ್ರಭಾಸ್ ಮದುವೆ ಮಾಡಿಕೊಂಡರೆ ಸಮಸ್ಯೆ; ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!

  ದೊಡ್ಡ ಸಿನಿಮಾಗಳಿಗೆ ರಿಲೀಸ್ ಡೇಟ್ ಬಹಳ ಮುಖ್ಯ. ಬೇರೆ ಯಾವುದೇ ಸಿನಿಮಾಗಳ ಜೊತೆ ಕ್ಲ್ಯಾಶ್ ಆಗದಂತೆ ನೋಡಿಕೊಂಡು ಸಿನಿಮಾ ರಿಲೀಸ ಮಾಡಬೇಕು. ಇದೇ ಕಾರಣಕ್ಕೆ ಒಳ್ಳೆ ವೀಕೆಂಡ್ ನೋಡಿ ಮೊದಲೇ ರಿಲೀಸ್ ಡೇಟ್ ಫಿಕ್ಸ್ ಮಾಡಿಬಿಡ್ತಾರೆ. ಇತ್ತೀಚೆಗಷ್ಟೆ ಹೊಂಬಾಳೆ ಸಂಸ್ಥೆ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಘೋಷಿಸಿತ್ತು. ಇದು ಮಹೇಶ್ ಬಾಬು ನಟನೆಯ 28ನೇ ಸಿನಿಮಾ. ಟೈಟಲ್‌ ಸಿಗದ ಕಾರಣ #SSMB28 ಅನ್ನುವ ಟೆಂಟೆಟೀವ್ ಟೈಟಲ್‌ನಲ್ಲಿ ಸಿನಿಮಾ ಶುರುವಾಗಿದೆ. 'ಅಲಾ ವೈಕುಂಠಪುರಂ ಲೋ' ನಂತರ ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

   ಏಪ್ರಿಲ್ 28ಕ್ಕೆ #SSMB28 ರಿಲೀಸ್

  ಏಪ್ರಿಲ್ 28ಕ್ಕೆ #SSMB28 ರಿಲೀಸ್

  ಮಹೇಶ್‌ ಬಾಬು ಹಾಗೂ ತ್ರಿವಿಕ್ರಮ್ ಕ್ರೇಜಿ ಕಾಂಬಿನೇಷನ್‌ ಚಿತ್ರವನ್ನು ಎಸ್. ರಾಧಾಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಫ್ಯಾಮಿಲಿ ಆಕ್ಷನ್ ಡ್ರಾಮಾ ಸಿನಿಮಾಗಳನ್ನು ಕಟ್ಟಿಕೊಟ್ಟುವುದರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಸಿದ್ದಹಸ್ತರು. ಇನ್ನು ಮಾತಿನಲ್ಲೇ ಮನೆಕಟ್ಟಿ ಪ್ರೇಕ್ಷಕರನ್ನು ರಂಜಿಸುವುದು ಅವರ ಟ್ರೇಡ್‌ ಮಾರ್ಕ್. ಈ ಬಾರಿ ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲೂ ಅಂಥದ್ದೇ ಭರ್ಜರಿ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ. ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್‌ ಭರದಿಂದ ಸಾಗುತ್ತಿದೆ.

   'ಪೋಕಿರಿ' ದಾಖಲೆ ರಿಪೀಟ್ ಆಗುತ್ತಾ?

  'ಪೋಕಿರಿ' ದಾಖಲೆ ರಿಪೀಟ್ ಆಗುತ್ತಾ?

  ಏಪ್ರಿಲ್ 28 ಅಂದಾಕ್ಷಣ ಮಹೇಶ್ ಬಾಬು ಅಭಿಮಾನಿಗಳಿಗೆ 'ಪೋಕಿರಿ' ಸಿನಿಮಾ ನೆನಪಾಗುತ್ತದೆ. 2006 ಏಪ್ರಿಲ್ 28ರಂದು ಪೂರಿಜಗನ್ನಾಥ್ ಹಾಗೂ ಮಹೇಶ್ ಬಾಬು ಜೋಡಿಯ 'ಪೋಕಿರಿ' ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಂದಿನ ಕಾಲಕ್ಕೆ ಎಲ್ಲಾ ಟಾಲಿವುಡ್ ಸಿನಿಮಾಗಳ ಬಾಕ್ಸಾಫೀಸ್ 'ಪೋಕಿರಿ' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೀಗ ಮತ್ತೆ ಏಪ್ರಿಲ್ 28ಕ್ಕೆ #SSMB28 ಸಿನಿಮಾ ಬರ್ತಿದ್ದು ಗೆಲ್ಲೋದು ಗ್ಯಾರೆಂಟಿ ಎನ್ನುತ್ತಿದ್ದಾರೆ ಅಭಿಮಾನಿಗಳು.

   ಹ್ಯಾಟ್ರಿಕ್ ಹಿಟ್ ಹಿಟ್‌ಗಾಗಿ ಕರಸತ್ತು

  ಹ್ಯಾಟ್ರಿಕ್ ಹಿಟ್ ಹಿಟ್‌ಗಾಗಿ ಕರಸತ್ತು

  17 ವರ್ಷಗಳ ಹಿಂದೆ ತ್ರಿವಿಕ್ರಮ್‌ ಶ್ರೀನಿವಾಸ್ ನಿರ್ದೇಶನದಲ್ಲಿ ಬಂದಿದ್ದ 'ಅತಡು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ನಂತರ ಬಂದ 'ಖಲೇಜಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಅಭಿಮಾನಿಹಳ ಮನಗೆದ್ದಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಗರಿಗೆದರಿದೆ. ಅಷ್ಟೇ ಅಲ್ಲ ಚಿತ್ರತಂಡದ ಮೇಲೆ ಒತ್ತಡ ಕೂಡ ಇದೆ. ಅದೆಲ್ಲವನ್ನು ಮೀರಿ ಹಿಟ್ ಸಿನಿಮಾ ಕೊಡಲು ತ್ರಿವಿಕ್ರಮ್ ಶ್ರೀನಿವಾಸ್ ಪ್ರಯತ್ನ ಮಾಡ್ತಿದ್ದಾರೆ.

   ಸ್ಟೀವೆನ್ಸ್ ಗರಡಿಯಲ್ಲಿ ಪ್ರಿನ್ಸ್ ಕರಸತ್ತು

  ಸ್ಟೀವೆನ್ಸ್ ಗರಡಿಯಲ್ಲಿ ಪ್ರಿನ್ಸ್ ಕರಸತ್ತು


  ಸೆಲೆಬ್ರೆಟಿ ಫಿಸಿಕಲ್ ಟ್ರೈನರ್ ಲಾಯ್ಡ್ ಸ್ಟೀವೆನ್ಸ್ ಮಾರ್ಗದರ್ಶನದಲ್ಲಿ ಮಹೇಶ್ ಬಾಬು ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಪ್ರಿನ್ಸ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಜೊತೆ ಲಾಯ್ಡ್ ಸ್ಟೀವೆನ್ಸ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದರು. #SSMB28 ಸಿನಿಮಾ ಮುಗಿಸಿ ಮಹೇಶ್‌ ಬಾಬು, ರಾಜಮೌಳಿ ನಿರ್ದೇಶನದ ಚಿತ್ರಕ್ಕೆ ತಯಾರಾಗಬೇಕಿದೆ. ಹಾಗಾಗಿ ಆದಷ್ಟು ಬೇಗ ತ್ರಿವಿಕ್ರಮ್ ಪ್ರಾಜೆಕ್ಟ್ ಮುಗಿಸುವ ಧಾವಂತದಲ್ಲಿದ್ದಾರೆ.

  English summary
  Mahesh Babu 28th Movie With Director Trivikram Srinivas Gets A Release Date. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X