For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು-ಕೀರ್ತಿ ಸುರೇಶ್ ನಟನೆಯ ಹೊಸ ಚಿತ್ರದ ಮುಹೂರ್ತ

  |

  ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರದ ಮುಹೂರ್ತ ನವೆಂಬರ್ 21 ರಂದು ನೆರವೇರಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ಭಾರಿ ಸದ್ದು ಮಾಡಿರುವ ಈ ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ.

  ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಮಹೇಶ್ ಬಾಬು ಭಾಗಿಯಾಗಿಲ್ಲ. ಆದ್ರೆ, ಚಿತ್ರದ ಮೊದಲ ದೃಶ್ಯಕ್ಕೆ ಪ್ರಿನ್ಸ್ ಮಗಳು ಸಿತಾರ ಕ್ಲಾಪ್ ಮಾಡಿದರು. ಮಹೇಶ್ ಬಾಬು ಪತ್ನಿ ನಮ್ರತಾ ಕ್ಯಾಮೆರಾಗೆ ಚಾಲನೆ ನೀಡಿದರು.

  ಚಿತ್ರೀಕರಣಕ್ಕೆ ಮುಂಚೆಯೇ ಮಹೇಶ್ ಬಾಬು ತಮಿಳು ಚಿತ್ರಕ್ಕೆ ಭಾರಿ ಬೇಡಿಕೆ!

  ಪರುಶರಾಮ್ ಈ ಚಿತ್ರ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕುತ್ತಿದ್ದಾರೆ. ಚಿತ್ರದ ಮುಹೂರ್ತ ಫೋಟೋಗಳನ್ನು ಮೈತ್ರಿ ಮೂವಿ ಮೇಕರ್ಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾ 2021ರ ಜನವರಿಯಲ್ಲಿ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದೆ ಚಿತ್ರತಂಡ.

  'ಸೂರರೈ ಪೊಟ್ರು' ಚಿತ್ರವನ್ನು ಹಾಡಿ ಹೊಗಳಿದ ಮಹೇಶ್ ಬಾಬು: ಸೂರ್ಯ ನಟನೆಗೆ ಫಿದಾ ಆದ ಪ್ರಿನ್ಸ್

  ಮಹೇಶ್ ಬಾಬು ನಾಯಕನಾಗಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಸಲ ಈ ಕಾಂಬಿನೇಷನ್‌ ತೆರೆಮೇಲೆ ಬರ್ತಿದೆ. ಇನ್ನುಳಿದಂತೆ ಎಸ್ ತಮನ್ ಸಂಗೀತ ಇದೆ. ರಾಮ್-ಲಕ್ಷ್ಮಣ್ ಮಾಸ್ಟರ್ ಸಾಹಸ ನಿರ್ದೇಶನವಿದೆ.

  English summary
  Super star mahesh babu and Keerthy suresh starrer Sarkaru Vaari Paata Pooja took place today. Regular shoot commences from 1st Week of Jan 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X