For Quick Alerts
  ALLOW NOTIFICATIONS  
  For Daily Alerts

  ತಾಯಿ ನೆನಪಿನಲ್ಲಿ ಮಹೇಶ್‌ ಬಾಬು: ಅತ್ತೆಯ ನೆನೆದು ನಮ್ರತಾ ಭಾವುಕ

  |

  ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ಅವರ ತಾಯಿ ಇಂದಿರಾ ದೇವಿ ನಿನ್ನೆ(ಸಪ್ಟೆಂಬರ್ 28) ರಂದು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇಂದಿರಾ ದೇವಿ ಅವರು ಅನಾರೋಗ್ಯದ ಕಾರಣ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಸಪ್ಟೆಂಬರ್ 28) ಬೆಳಗಿನ ಜಾವ 4 ಗಂಟೆಗೆ ಇಂದಿರಾ ದೇವಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಮಹೇಶ್‌ ಬಾಬು ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.

  ಮಹೇಶ್​ ಬಾಬು ತಂದೆ ಕೃಷ್ಣ ಅವರು ಟಾಲಿವುಡ್​ನಲ್ಲಿ ಸೂಪರ್ ಸ್ಟಾರ್​ ಆಗಿ ಮಿಂಚಿದ್ದರು. ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಟಾಲಿವುಡ್‌ ಚಿತ್ರರಂಗದ ಜೊತೆ ಉತ್ತಮ ಬಾಂಧವ್ಯ ಹಿಂದಿದ್ದರು. ಇಂದಿರಾ ದೇವಿ ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಪಾರ ಪ್ರಮಾಣದ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

  ತಾಯಿಯನ್ನು ಕಳೆದುಕೊಂಡು ನೋವಿನಲ್ಲಿರುವ ಮಹೇಶ್‌ ಬಾಬು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ತಾಯಿಯ ಫೋಟೋ ಹಂಚಿಕೊಂಡು ನೋವು ತೋಡಿಕೊಂಡಿದ್ದಾರೆ. ತಮ್ಮ ತಾಯಿ ಇಂದಿರಾ ದೇವಿಯವರ ಬ್ಲ್ಯಾಕ್‌ ಆ್ಯಂಡ್ ವೈಟ್‌ ಫೋಟೋವೊಂದನ್ನು ಹಂಚಿಕೊಂಡಿರುವ ಮಹೇಶ್‌ ಬಾಬು ತಾಯಿಗೆ ಅತೀವ ಪ್ರೀತಿ ತೋರಿಸುವ ಇಮೋಜಿ ಬಳಸಿದ್ದಾರೆ. ಮಹೇಶ್‌ ಬಾಬು ಅವರ ಪೋಸ್ಟ್ ನೋಡಿದ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಮಹೇಶ್‌ ಬಾಬುಗೆ ಸಮಾಧಾನ ಹೇಳಿದ್ದಾರೆ.


  ಇಂದಿರಾ ದೇವಿ ಅವರು ಮಕ್ಕಳ ಪ್ರೀತಿಯ ಅಮ್ಮನಷ್ಟೇ ಅಲ್ಲ, ಮಹೇಶ್‌ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರ ಮೆಚ್ಚಿನ ಅತ್ತೆಯಾಗಿದ್ದಾರೆ. ಪ್ರೀತಿಯ ಅತ್ತೆಯ ಅಗಲಿಕೆ ನೋವನ್ನು ನಮ್ರತಾ ಶಿರೋಡ್ಕರ್ ತೋಡಿಕೊಂಡಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಇಂದಿರಾ ದೇವಿ ಅವರ ಫೋಟೋ ಹಂಚಿಕೊಂಡಿರುವ ನಮ್ರತಾ ಶಿರೋಡ್ಕರ್, ನಾವು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ. ನೀವು ನನ್ನ ನೆನಪಿನಲ್ಲಿ ಶಾಶ್ವತವಾಗಿದ್ದೀರಿ. ನೀವು ನನಗೆ ಎಲ್ಲಾ ರೀತಿಯ ಪ್ರೀತಿಯನ್ನು ನೀಡಿದ್ದೀರಿ. ನೀವು ನೀಡಿರುವ ಪ್ರೀತಿಯನ್ನು ನಿಮ್ಮ ಮಗ ಹಾಗೂ ಮೊಮ್ಮಕ್ಕಳಿಗೂ ನೀಡುತ್ತೇನೆ. ನಾವು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತೇವೆ ಅಮ್ಮಾ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

  ಮಹೇಶ್ ಬಾಬು, ಅವರ ಪತ್ನಿ ಹಾಗೂ ಮಕ್ಕಳು ಇಂದಿರಾ ದೇವಿ ಅವರೊಂದಿಗೆ ಬಹಳ ಆತ್ಮೀಯರಾಗಿದ್ದು, ಮಹೇಶ್‌ ಬಾಬು ಪುತ್ರಿ ಸಿತಾರ ಘಟ್ಟಮನೇನಿ ತಮ್ಮ ಅಜ್ಜಿಯೊಂದಿಗೆ ಕಳೆದ ಕ್ಷಣಗಳನ್ನು ನೆನೆದು ಭಾವುಕಳಾಗಿದ್ದಾಳೆ. ಇಂದಿರಾ ದೇವಿ ಅವರ ಅಂತ್ಯ ಸಂಸ್ಕಾರದ ವೇಳೆ ಸಿತಾರ ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು. ಇಂದು ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಅಜ್ಜಿಯೊಂದಿಗಿನ ಮುದ್ದಾದ ಫೋಟೋ ಹಂಚಿಕೊಂಡಿರುವ ಸಿತಾರಾ ನಾವು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ. ಮತ್ತೆ ಬನ್ನಿ ಎಂದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾಳೆ.

  ಇನ್ನು ತೆಲುಗು ಚಿತ್ರರಂಗದ ನಟರಾದ ಜೂನಿಯರ್‌ ಎನ್‌ಟಿಆರ್‌, ರವಿ ತೇಜ, ರಾಮ್‌ ಚರಣ್‌, ಅಕ್ಕಿನೇನಿ ನಾಗಾರ್ಜುನ್‌, ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಹೇಶ್‌ ಬಾಬು ತಾಯಿ ಇಂದಿರಾ ದೇವಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

  English summary
  Mahesh Babu And Namrata Shirodkar Pay Emotional Tribute to Indira Devi
  Thursday, September 29, 2022, 22:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X