For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರ ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಂಡ ಮಹೇಶ್ ಬಾಬು ಮತ್ತು ನಾನಿ

  |

  67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ನಿನ್ನೆ (ಮಾರ್ಚ್ 22) ಘೋಷಣೆ ಆಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸಿನಿಮಾ ಉತ್ಪಾದಿಸುವ ಭಾರತದಲ್ಲಿ ಹಲವಾರು ಸಿನಿಮಾ ಸಂಬಂಧಿ ಪ್ರಶಸ್ತಿಗಳಿವೆ ಆದರೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ವಿಶೇಷ ಗೌರವಿದೆ.

  ಕಳೆದ ವರ್ಷವೇ ಅನೌನ್ಸ್ ಆಗಬೇಕಿತ್ತು. ಆದರೆ ಕೋವಿಡ್ ಕಾರಣ ಮುಂದೂಡಲಾಗಿತ್ತು. ಅತ್ಯುತ್ತಮ ನಟ ಪ್ರಶಸ್ತಿ ಮನೋಜ್ ಬಾಜಪೇಯಿ ಮತ್ತು ಧನುಷ್ ಪಾಲಾದರೆ ಅತ್ಯುತ್ತಮ ನಟಿ ಪ್ರಶಸ್ತಿ ಕಂಗನಾ ರಣಾವತ್ ಪಾಲಾಗಿದೆ. ಕಂಗನಾ 4ನೇ ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

  67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ ಇಲ್ಲಿದೆ

  ಪ್ರಶಸ್ತಿ ಗೆದ್ದ ಖುಷಿಯನ್ನು ಕಲಾವಿದರು ಮತ್ತು ಸಿನಿಮಾತಂಡ ಹಂಚಿಕೊಳ್ಳುತ್ತಿದ್ದಾರೆ. ತೆಲುಗು ನಟ ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರಕ್ಕೆ ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆ ವಿಭಾಗದಲ್ಲೂ ಪ್ರಶಸ್ತಿ ಗೆದ್ದುಕೊಂಡಿದೆ.

  ತಮ್ಮ ಸಿನಿಮಾಗೆ ಎರಡು ಪ್ರಶಸ್ತಿ ಬಂದಿರುವ ಬಗ್ಗೆ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ ಮಹರ್ಷಿ ವಿಶೇಷ ಸಿನಿಮಾವಾಗಿದೆ ಎಂದು ಹೇಳಿದ್ದಾರೆ. ಪ್ರತಿಷ್ಠಿತ ಮನ್ನಣೆ ಪಡೆದಿದ್ದಕ್ಕೆ ಗೌರವ ಎಂದಿದ್ದಾರೆ. ನಿರ್ದೇಶಕ ವಂಶಿ, ಇಡೀ ಮಹರ್ಷಿತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

  ಮಗಳ ಜೋಶ್ ನೋಡಿ ಕಣ್ಣೀರಿಟ್ಟ ಸಿಂಪಲ್ ಬೆಡಗಿ ಶ್ವೇತ | Daughter Ashmitha | Filmibeat Kannada

  ಇನ್ನು ಜರ್ಸಿ ಸಿನಿಮಾಗೆ ಪ್ರಶಸ್ತಿ ಬಂದ ಸಂತಸವನ್ನು ನಾನಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಶ್ಯಾಮ್ ಸಿಂಗ ರಾಯ್ ಸಿನಿಮಾ ಚಿತ್ರೀಕರಣದಲ್ಲಿದ್ದ ನಾನಿ, 'ನಮ್ಮ ನಿರ್ಮಾಣದಲ್ಲಿ ಬಂದ Awe ಸಿನಿಮಾ ರಾಷ್ಟ್ರಪ್ರಶಸ್ತಿ ಗೆದ್ದಿತ್ತು. ಈಗ ಜರ್ಸಿಗೆ ಬಂದಿರುವುದು ಮತ್ತಷ್ಟು ಕಿಕ್ ನೀಡಿದೆ. ಮುಂಬರುವ ವರ್ಷಗಳಲ್ಲಿ ತೆಲುಗು ಚಿತ್ರರಂಗ ಹೆಚ್ಚಿನ ಪ್ರಶಸ್ತಿ ಗೆಲ್ಲಬೇಕೆಂದು ಬಯಸುತ್ತೇನೆ' ಎಂದು ಹೇಳಿದ್ದಾರೆ.

  English summary
  Telugu Actors Mahesh Babu and Nani share happy about their film bagged national award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X