Just In
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸಬರ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ ಮಹೇಶ್ ಬಾಬು
ನಟ ಮಹೇಶ್ ಬಾಬು ಇತರರ ಸಿನಿಮಾಗಳನ್ನು ಅತಿಯಾಗಿ ನೊಡುತ್ತಾರೆ. ತಾವು ಹೆಚ್ಚು, ಸಿನಿಮಾ, ವೆಬ್ ಸರಣಿಗಳನ್ನು ನೋಡುವುದಾಗಿ ಲಾಕ್‌ಡೌನ್ ಸಮಯದಲ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ತಾವು ನೋಡಿದ ಒಳ್ಳೆಯ ಸಿನಿಮಾ, ವೆಬ್ ಸರಣಿ ಬಗ್ಗೆ ಟ್ವಿಟ್ಟರ್‌ನಲ್ಲಿ ಒಳ್ಳೆಯ ಮಾತುಗಳನ್ನು ಬರೆದು ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡುತ್ತಾರೆ ಮಹೇಶ್ ಬಾಬು. ಇದೀಗ ಹೊಸಬರ ತೆಲುಗು ಸಿನಿಮಾ ಒಂದರ ಬಗ್ಗೆ ಬಹು ಒಳ್ಳೆಯ ಮಾತುಗಳನ್ನಾಡಿದ್ದಾರೆ ಮಹೇಶ್ ಬಾಬು.
ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ ಪಡೆದ ಮಹೇಶ್ ಬಾಬು, ಅಲ್ಲು ಅರ್ಜುನ್
ನಿರ್ದೇಶಕ ಬುಚ್ಚಿಬಾಬು ಸನಾ ಅವರ ಮೊದಲ ತೆಲುಗು ಸಿನಿಮಾ 'ಉಪ್ಪೆನ' ಸಖತ್ ಹಿಟ್ ಆಗಿದೆ. ಸಿನಿಮಾದ ನಾಯಕ ವೈಷ್ಣವ್ ತೇಜ್, ನಾಯಕಿ ಕೀರ್ತಿ ಗೆ ಸಹ ಇದು ಮೊದಲ ಸಿನಿಮಾ. ಈ ಸಿನಿಮಾ ನೋಡಿರುವ ಮಹೇಶ್ ಬಾಬು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ ಮಹೇಶ್.

ನಿರ್ದೇಶಕನನ್ನು ಕೊಂಡಾಡಿದ ಮಹೇಶ್ ಬಾಬು
'ಬುಚ್ಚಿಬಾಬು ಸನಾ ನೀವೊಂದು ಅತ್ಯದ್ಭುತ ಸಿನಿಮಾ ಮಾಡಿದ್ದೀರಿ. ಇದೊಂದು ಕ್ಲಾಸಿಕ್ ಸಿನಿಮಾ, ನೀವು ಮಾಡಿರುವ ಈ ಸಿನಿಮಾಕ್ಕೆ ಸಾವಿಲ್ಲ, ಇದೊಂದು ಟೈಮ್‌ಲೆಸ್ ಸಿನಿಮಾ' ಎಂದಿದ್ದಾರೆ ಮಹೇಶ್ ಬಾಬು.

ಸಿನಿಮಾದ ಹೃದಯ ಅದರ ಸಂಗೀತ: ಮಹೇಶ್ ಬಾಬು
'ಉಪ್ಪೆನ' ಸಿನಿಮಾದ ಹೃದಯವೆಂದರೆ ಸಂಗೀತ ನಿರ್ದೇಶಕ ದೇವಿಪ್ರಸಾದ್. ಈ ಸಿನಿಮಾದ ಹಾಡುಗಳು ಇತಿಹಾಸದಲ್ಲಿ ದಾಖಲಾಗುತ್ತವೆ. ಈವರೆಗೆ ನಿಮ್ಮ ಅತ್ಯುತ್ತಮ ಹಾಡುಗಳು ಮತ್ತು ಸಂಗೀತ 'ಉಪ್ಪೆನ' ಸಿನಿಮಾದ್ದು ಎಂದು ಹೊಗಳಿದ್ದಾರೆ ಮಹೇಶ್ ಬಾಬು.
ದಟ್ಟ ಅರಣ್ಯಕ್ಕೆ ನುಗ್ಗಲಿದ್ದಾರೆ ರಾಜಮೌಳಿ-ಮಹೇಶ್ ಬಾಬು

ಹೊಸಬರಾದ ವೈಷ್ಣವ್ ತೇಜ್-ಕೀರ್ತಿ ಶೆಟ್ಟಿ ಉತ್ತಮ ನಟನೆ
ಹೊಸಬರಾದರೂ ವೈಷ್ಣವ್ ತೇಜ್ ಹಾಗೂ ಕೀರ್ತಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ ಎಂದಿರುವ ಮಹೇಶ್ ಬಾಬು, ನಿರ್ಮಾಪಕರಾದ ಸುಕುಮಾರ್ ಹಾಗೂ ಮೈತ್ರಿ ಸಿನಿಮಾಗೆ ಸಹ ಅಭಿನಂದನೆ ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಉಪ್ಪೆನ ಸಿನಿಮಾ ಗಳಿಕೆಯಲ್ಲಿ ದಾಖಲೆಯನ್ನೇ ನಿರ್ಮಿಸಿದೆ.

ನೆಟ್‌ಫ್ಲಿಕ್ಸ್‌ಗೆ ಬರಲಿದೆ 'ಉಪ್ಪೆನ'
'ಉಪ್ಪೆನ' ಸಿನಿಮಾವು ಕೆಲವೇ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸಹ ಬಿಡುಗಡೆ ಆಗಲಿದೆ. ಏಪ್ರಿಲ್ 11 ರಂದು ಈ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಭಾರಿ ದೊಡ್ಡ ಮೊತ್ತಕ್ಕೆ ಉಪ್ಪೆನ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ಹೊಸಬರ ಸಿನಿಮಾ ಆದರೂ ಭಾರಿ ಹಿಟ್ ಆಗಿದೆ ಸಿನಿಮಾ.