Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬು-ರಾಜಮೌಳಿ ಸಿನಿಮಾ: ಒಂದಲ್ಲ ಎರಡು!
ಇತ್ತಿಚೆಗೆ ಸೀಕ್ವೆಲ್ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದ ಮೂಲಕ ಈ ಟ್ರೆಂಡ್ ಹೆಚ್ಚು ಪ್ರಚಲಿತಕ್ಕೆ ಬಂತು. ಇದೀಗ ಸ್ವತಃ ರಾಜಮೌಳಿ ಮತ್ತೊಂದು ಸೀಕ್ವೆಲ್ ಸಿನಿಮಾಕ್ಕೆ ಕೈ ಹಾಕಿದ್ದಾರೆ.
'RRR' ಸಿನಿಮಾ ನಿರ್ದೇಶಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಹೊಡೆದಿರುವ ರಾಜಮೌಳಿ 'RRR' ಸಿನಿಮಾಕ್ಕೆ ಆಸ್ಕರ್ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಇದರ ಬೆನ್ನಲ್ಲೆ ಮಹೇಶ್ ಬಾಬು ಜೊತೆಗೆ ಹೊಸದೊಂದು ಸಿನಿಮಾವನ್ನು ರಾಜಮೌಳಿ ಘೋಷಿಸಿದ್ದಾರೆ.
ರಾಜಮೌಳಿ-ಮಹೇಶ್ ಬಾಬು ಸಿನಿಮಾವು ಅರಣ್ಯದಲ್ಲಿ ನಡೆಯುವ ಸಾಹಸ ಕತೆಯನ್ನು ಒಳಗೊಂಡಿದೆ ಎಂದು ಈಗಾಗಲೇ ರಾಜಮೌಳಿ ಹಾಗೂ ಅವರ ಎಲ್ಲ ಸಿನಿಮಾಗಳಿಗೆ ಕತೆ ಬರೆದಿರುವ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಆದರೆ ಇದೀಗ ಹೊಸದಾಗಿ ಬಂದಿರುವ ಸುದ್ದಿಯೆಂದರೆ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಂತೆ!

ಎರಡು ಭಾಗಗಳಲ್ಲಿ ಸಿನಿಮಾ
ಹೌದು, ರಾಜಮೌಳಿಯ ತಂದೆ, ರಾಜಮೌಳಿಯ ಬಹುತೇಕ ಸಿನಿಮಾಗಳಿಗೆ ಕತೆ ಬರೆದಿರುವ ವಿಜಯೇಂದ್ರ ಪ್ರಸಾದ್ ಅವರು ಈ ವಿಷಯವನ್ನು ಬಹಿರಂಗಗೊಳಿಸಿದ್ದು, ಮಹೇಶ್ ಬಾಬು-ರಾಜಮೌಳಿ ಜೊತೆಗಿನ ಸಿನಿಮಾವು ಸಾಹಸಮಯ ಸಿನಿಮಾ ಆಗಿರಲಿದೆ. ಅಲ್ಲದೆ ಈ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಸಹ ಹೇಳಿದ್ದಾರೆ. ಈ ವಿಷಯವನ್ನು ನೀವು ಪತ್ರಿಕೆಗಳಲ್ಲಿ ಬರೆದುಕೊಳ್ಳಬಹುದು ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

ಬಾಹುಬಲಿಯ ಸೀಕ್ವೆಲ್ ಮಾಡಿದ್ದ ರಾಜಮೌಳಿ
ಈ ಹಿಂದೆ ರಾಜಮೌಳಿ 'ಬಾಹುಬಲಿ' ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಿಸಿದ್ದರು. ಅದು ಟ್ರೆಂಡ್ ಸೆಟ್ ಮಾಡಿತ್ತು. 'ಬಾಹುಬಲಿ' ಸಿನಿಮಾದ ಹಾದಿಯನ್ನೇ ತುಳಿದು ಹಲವಾರು ಸಿನಿಮಾಗಳು ಎರಡು ಭಾಗಗಳಲ್ಲಿ ಬಿಡುಗಡೆ ಆದವು. ಸೀಕ್ವೆಲ್ ಸಿನಿಮಾಗಳ ಹೊಸ ಟ್ರೆಂಡ್ ಅನ್ನೇ ರಾಜಮೌಳಿ ತಮ್ಮ 'ಬಾಹುಬಲಿ' ಸಿನಿಮಾದ ಮೂಲಕ ಸೃಷ್ಟಿಸಿದರು. ಇದೀಗ ಮತ್ತೊಮ್ಮೆ ಸೀಕ್ವೆಲ್ ಸಿನಿಮಾಕ್ಕೆ ರಾಜಮೌಳಿ ಕೈ ಹಾಕಿದ್ದು, ಈ ಬಾರಿಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಸಾಧ್ಯತೆ ಇದೆ.

'RRR' ಸಿನಿಮಾಕ್ಕೂ ಸೀಕ್ವೆಲ್
'RRR' ಸಿನಿಮಾವನ್ನು ಸಹ ಸೀಕ್ವೆಲ್ ಅನ್ನಾಗಿ ಪರಿವರ್ತಿಸಬಹುದು ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದರು. 'RRR' ಸಿನಿಮಾ ದೊಡ್ಡ ಹಿಟ್ ಆದ ಬಳಿಕ ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ವಿಜಯೇಂದ್ರ ಪ್ರಸಾದ್, ಖಂಡಿತವಾಗಿಯೂ 'RRR' ಸಿನಿಮಾವನ್ನು ಸೀಕ್ವೆಲ್ ಅನ್ನಾಗಿ ಮಾಡಬಹುದು. ಇಬ್ಬರು ನಾಯಕರು ವಿದೇಶಕ್ಕೆ ತೆರಳಿ ಅಲ್ಲಿ ಸಾಹಸವೊಂದರಲ್ಲಿ ಪಾಲ್ಗೊಳ್ಳುವಂತೆ ಕತೆಯನ್ನು ಕಟ್ಟಬಹುದು ಎಂದಿದ್ದಾರೆ. ಸ್ವತಃ ರಾಜಮೌಳಿ ಸಹ 'RRR' ಸಿನಿಮಾ ಸೀಕ್ವೆಲ್ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದು ಹೇಳಿದ್ದರು.

ನವೀನ ತಂತ್ರಜ್ಞಾನ ಬಳಕೆ
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್‌ನ ಸಿನಿಮಾ ಈ ವರ್ಷ ಆಗಸ್ಟ್ ವೇಳೆಗೆ ಶುರುವಾಗಲಿದೆ. ಸಿನಿಮಾದ ಚಿತ್ರೀಕರಣವು ಅಮೆಜಾನ್ ಕಾಡುಗಳಲ್ಲಿ ನಡೆಯಲಿದೆ. ಜೊತೆಗೆ ಹಲವು ವಿದೇಶಿ ಲೊಕೇಶನ್‌ಗಳಲ್ಲಿಯೂ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾವು 'ಇಂಡಿಯಾನಾ ಜೋನ್ಸ್' ಮಾದರಿಯ ಸಾಹಸ ಕತೆ ಆಗಿರಲಿದೆ ಎಂದು ರಾಜಮೌಳಿ ಈ ಹಿಂದೆಯೇ ಹೇಳಿದ್ದಾರೆ. ಸಿನಿಮಾಕ್ಕಾಗಿ ಈಗಾಗಲೇ ರಾಜಮೌಳಿ ತಯಾರಿ ಆರಂಭಿಸಿದ್ದು, ಹಲವು ವಿನೂತನ ತಂತ್ರಜ್ಞಾನಗಳನ್ನು ಈ ಸಿನಿಮಾಕ್ಕೆ ರಾಜಮೌಳಿ ಬಳಸಿಕೊಳ್ಳಲಿದ್ದಾರೆ. ಇದಕ್ಕಾಗಿ ಹಲವು ವಿದೇಶಿ ಸಂಸ್ಥೆಗಳೊಟ್ಟಿಗೆ ಚರ್ಚೆ, ಒಪ್ಪಂದಗಳನ್ನು ರಾಜಮೌಳಿ ಮಾಡಿಕೊಂಡಿದ್ದಾರೆ.