Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್: ಅಪ್ಪು ಮೆಚ್ಚಿದ್ದ ಸಿನಿಮಾ ಇದು!
ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಕರಿಯರ್‌ಗೆ ದೊಡ್ಡ ತಿರುವು ಕೊಟ್ಟ ಸಿನಿಮಾ 'ಒಕ್ಕಡು'. 2003ರಲ್ಲಿ ತೆರೆಕಂಡಿದ್ದ ಸಿನಿಮಾ ಹೊಸ ದಾಖಲೆ ಬರೆದಿತ್ತು. ಮಹೇಶ್ ಬಾಬು ಮಾಸ್ ಹೀರೊ ಆಗಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆಯಲು ಕಾರಣವಾಗಿತ್ತು. ಈ ಚಿತ್ರವನ್ನು ಮತ್ತೆ ರೀ ರಿಲೀಸ್ ಮಾಡಲಾಗ್ತಿದೆ.
'ಒಕ್ಕಡು' ಚಿತ್ರ 20 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ನಿರ್ಮಾಪಕರು ಈ ಚಿತ್ರವನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಜನವರಿ 7ಕ್ಕೆ ಚಿತ್ರವನ್ನು ಆಯ್ದು ಥಿಯೇಟರ್‌ಗಳಲ್ಲಿ 4K ವರ್ಷನ್ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಈ ವರ್ಷ ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಪೋಕಿರಿ' ಸಿನಿಮಾ ರಿಲೀಸ್ ರಿಲೀಸ್ ಆಗಿ ಸದ್ದು ಮಾಡಿತ್ತು. ನಂತರ ಪವನ್ ಕಲ್ಯಾಣ್ ನಟನೆಯ 'ಜಲ್ಸಾ' ಸಿನಿಮಾ ಕೂಡ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿತ್ತು.
'ಪುಷ್ಪ-
2'
ಚಿತ್ರೀಕರಣ
ಆರಂಭ..
ಮೇಕಿಂಗ್
ಸ್ಟಿಲ್
ಲೀಕ್:
ಸರ್‌ಪ್ರೈಸ್
ಟೀಸರ್
ರಿಲೀಸ್
ಪ್ಲ್ಯಾನ್
ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಅದೇ ಸಾಲಿಗೆ ಈಗ 'ಒಕ್ಕಡು' ಕೂಡ ಸೇರಿಕೊಳ್ತಿದೆ. ಗುಣಶೇಖರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಭೂಮಿಕಾ ಚಾವ್ಲಾ ನಾಯಕಿಯಾಗಿ ಮಿಂಚಿದ್ದರು. ಪ್ರಕಾಶ್ ರಾಜ್ ವಿಲನ್ ಆಗಿ ಅಬ್ಬರಿಸಿದ್ದರು. ಕಬ್ಬಡ್ಡಿ ಕ್ರೀಡೆಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಚಿತ್ರವನ್ನು ಬಹಳ ಸೊಗಸಾಗಿ ಡಿಸೈನ್ ಮಾಡಿದ್ದರು. ಮಣಿಶರ್ಮ ಮ್ಯೂಸಿಕ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಅವತ್ತಿನ ಕಾಲಕ್ಕೆ ಸಿನಿಮಾ ವಿತರಕರಿಗೆ 30 ಕೋಟಿ ರೂ. ಶೇರ್ ತಂದುಕೊಟ್ಟಿತ್ತು.

'ಒಕ್ಕಡು' ಸಿನಿಮಾ ಸಕ್ಸಸ್ ಕ್ರೇಜ್ ಹೇಗಿತ್ತು ಅಂದರೆ ಮುಂದೆ ಈ ಸಿನಿಮಾ ತಮಿಳು, ಕನ್ನಡ, ಬೆಂಗಾಳಿ, ಹಿಂದಿ, ಒಡಿಯಾ ಭಾಷೆಗಳಿಗೆ ರೀಮೆಕ್ ಆಗಿತ್ತು. ತಮಿಳಿನಲ್ಲಿ ದಳಪತಿ ವಿಜಯ್ 'ಗಿಲ್ಲಿ' ಹೆಸರಿನಲ್ಲಿ ಸಿನಿಮಾ ಮಾಡಿ ಗೆದ್ದರು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ 'ಅಜಯ್' ಆಗಿ ಬಂದರು. ಆದರೆ ಅಷ್ಟಾಗಿ ಸಕ್ಸಸ್ ಸಿಕ್ಕಿರಲಿಲ್ಲ. ವಿಶೇಷ ಅಂದರೆ ಕನ್ನಡ ಹಾಗೂ ತಮಿಳಿನಲ್ಲೂ ಪ್ರಕಾಶ್ ರಾಜ್ ವಿಲನ್ ಆಗಿ ನಟಿಸಿದ್ದರು. ಒಟ್ಟಾರೆ 'ಒಕ್ಕಡು' ಸಿನಿಮಾ ರೀ ರಿಲೀಸ್ ವಿಚಾರ ಅಭಿಮಾನಿಗಳಿಗೆ ಸಂತಸ ತಂದಿದೆ.