For Quick Alerts
  ALLOW NOTIFICATIONS  
  For Daily Alerts

  'ವಾಲ್ತೇರು ವೀರಯ್ಯ' ಕ್ರೇಜ್: 6000 ವಿದ್ಯಾರ್ಥಿಗಳಿಂದ ಚಿರಂಜೀವಿಗೆ ಮೆಗಾ ಟ್ರಿಬ್ಯೂಟ್!

  |

  ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ ಫಾಲೋಯಿಂಗ್ ಬಗ್ಗೆ ಹೊಸದಾಗಿ ಹೇಳೋದು ಬೇಕಾಗಿಲ್ಲ. ಟಾಲಿವುಡ್‌ನಲ್ಲಿ ಎನ್‌ಟಿಆರ್, ಎಎನ್‌ಆರ್ ನಂತರ ಆ ರೇಂಜಿಗೆ ಸೂಪರ್ ಸ್ಟಾರ್ ಆಗಿ ಬೆಳೆದ ನಟ ಚಿರಂಜೀವಿ. ಕೆಲ ವರ್ಷಗಳ ಹಿಂದೆ ಸಿನಿಮಾ ಬಿಟ್ಟು ರಾಜಕೀಯರಂಗ ಪ್ರವೇಶಿಸಿದ್ದ ಚಿರು 10 ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದರು. ಸದ್ಯ ಅಭಿಮಾನಿಗಳು ವಿಶಿಷ್ಟ ಪ್ರಯತ್ನದ ಮೂಲಕ ಅಭಿಮಾನ ಮೆರೆದಿದ್ದಾರೆ.

  150 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಚಿರಂಜೀವಿ ಟಾಲಿವುಡ್‌ನ ನಂಬರ್‌ ವನ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ವಯಸ್ಸು 60 ದಾಟಿದರೂ ಈ ವಯಸ್ಸಿನಲ್ಲೂ ಹೊಸ ಹೀರೊಗಳಿಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ 'ವಾಲ್ತೇರು ವೀರಯ್ಯ' ಆಗಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದ 'ಗಾಡ್‌ಫಾದರ್' ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ಒಂದು ರೇಂಜಿಗೆ ಸದ್ದು ಮಾಡಿತ್ತು. ಟೈಟಲ್‌ನಿಂದಲೇ 'ವಾಲ್ತೇರು ವೀರಯ್ಯ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

  ಹೈದರಾಬಾದ್‌ನಲ್ಲಿ ಕಾರ್ಮಿಕ ಇಲಾಖೆ ಸಚಿವ ಮಲ್ಲರೆಡ್ಡಿ ಸ್ಥಾಪಿಸಿದ ಮಲ್ಲರೆಡ್ಡಿ ವಿದ್ಯಾಸಂಸ್ಥೆಯ ಅಧೀನದಲ್ಲಿ ಇತ್ತೀಚೆಗೆ 'ಕ್ಯಾನರ್ಸ್ ಅವೇರ್ ನೆಸ್' ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಚಿರಂಜೀವಿ ಹಾಜರಾಗಿದ್ದರು. ಮೊದಲ ಬಾರಿಗೆ ಚಿರು ತಮ್ಮ ವಿದ್ಯಾಸಂಸ್ಥೆಗೆ ಬಂದಿದ್ದ ಕಾರಣ 6 ಸಾವಿರ ವಿದ್ಯಾರ್ಥಿಗಳು ಮೆಗಾಸ್ಟಾರ್ ಮೇಲೆ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ.

  ವಿದ್ಯಾರ್ಥಿಗಳೇ ಚಿರು ಭಾವಚಿತ್ರ ಆದರು!

  ವಿದ್ಯಾರ್ಥಿಗಳೇ ಚಿರು ಭಾವಚಿತ್ರ ಆದರು!

  ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ವಾಲ್ತೇರು ವೀರಯ್ಯ' ಚಿರು ರೂಪವನ್ನು ಕಾಲೇಜಿನ ಮೈದಾನದಲ್ಲಿ ಪ್ರದರ್ಶಿಸಿದ್ದಾರೆ. ಏರಿಯಲ್ ವ್ಯೂ ಮೂಲಕ ಆ ದೃಶ್ಯಕಾವ್ಯವನ್ನು ವೀಕ್ಷಿಸಿದ ಚಿರಂಜೀವಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿತ್ತು. ಅದರಲ್ಲಿ ಚಿರು ಲುಕ್ ಅಭಿಮಾನಿಗಳ ಮನ ಗೆದ್ದಿತ್ತು. ಅದೇ ಲುಕ್‌ನ ಮೈದಾನದಲ್ಲಿ ಮರು ಸೃಷ್ಟಿ ಮಾಡಿದ್ದರು. ಮೊದಲಿಗೆ ಚಿರು ಭಾವಚಿತ್ರದ ರೀತಿಯಲ್ಲಿ ಬರೆದು ನಂತರ ವಿದ್ಯಾರ್ಥಿಗಳೆಲ್ಲಾ ಬಂದು ಕೂತಿದ್ದಾರೆ. ಏರಿಯಲ್ ವೀವ್‌ನಲ್ಲಿ ನೋಡಿದರೇ ಥೇಟ್ ಚಿರು 'ವಾಲ್ತೇರು ವೀರಯ್ಯ' ದರ್ಶನವಾಗುತ್ತದೆ.

  ಟ್ವೀಟ್ ಮಾಡಿ ಬಾಬಿ ಧನ್ಯವಾದ

  ಟ್ವೀಟ್ ಮಾಡಿ ಬಾಬಿ ಧನ್ಯವಾದ

  ನಿರ್ದೇಶಕ ಬಾಬಿ ಕೂಡ ಟ್ವೀಟರ್ ಮೂಲಕ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಮಲ್ಲರೆಡ್ಡಿ ಕಾಲೇಜು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ನಮ್ಮ ಮೆಗಾಸ್ಟಾರ್ ಬಗ್ಗೆ ತೋರುತ್ತಿರುವ ಪ್ರೀತಿ, ಅಭಿಮಾನಕ್ಕೆ ವಿಶೇಷ ಧನ್ಯವಾದಗಳು. 'ವಾಲ್ತೇರು ವೀರಯ್ಯ' ಚಿರು ರೂಪವನ್ನು ಪ್ರದರ್ಶಿಸಿದ್ದು ಮೆಗಾಸ್ಟಾರ್‌ಗೆ ಉತ್ತಮ ಟ್ರಿಬ್ಯೂಟ್. ಬಾಸ್ ಬಗ್ಗೆ ನಿಮ್ಮ ಪ್ರೀತಿ, ಆಪ್ಯಾಯತೆ ತೋರಿಸಿದ ನಿಮಗೆ ನಮ್ಮ ತಂಡದ ವತಿಯಿಂದ ವಿಶೇಷ ಧನ್ಯವಾದಗಳು ತಿಳಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಸಂಕಲ್ಪ

  ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಸಂಕಲ್ಪ

  ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಿರಂಜೀತಿ ಮಾತನಾಡಿ ಚಿಕ್ಕ ರೈತನಾಗಿ ಜೀವನವನ್ನು ಪ್ರಾರಂಭಿಸಿ ಕಾರ್ಮಿಕ ಸಚಿವರಾಗಿ ಬೆಳೆದ ಮಲ್ಲರೆಡ್ಡಿಯನ್ನು ಮೊದಲು ಪ್ರಶಂಸಿಸಿದರು. ಮೇಡೆ ಉತ್ಸವದಲ್ಲಿ ಮಲ್ಲರೆಡ್ಡಿ ಚಿರು ಮೇಲೆ ತೋರಿಸಿದ ಪ್ರೀತಿಯನ್ನು ಮತ್ತೊಮ್ಮೆ ನೆನಪಿಸಿದರು. ಇನ್ನು ಕ್ಯಾನ್ಸರ್ ಅವೇರ್‌ನೆಸ್ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಯೇಟಾ ದೇಶದಲ್ಲಿ 8 ಲಕ್ಷ ಮಂದಿ ಕ್ಯಾನ್ಸರ್‌ನಿಂದ ಮರಣ ಹೊಂದಿದ್ದಾರೆ. ಎಲ್ಲರೂ ಒಟ್ಟಿಗೆ ಹೋರಾಡಿದರೆ ಆ ಮಹಾಮಾರಿಯನ್ನು ನಿರ್ಮೂಲ ಮಾಡಬಹುದು ಎಂದರು. ಯುವಕರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು, ಕೆಟ್ಟ ವ್ಯವಸನಗಳಿಗೆ ದೂರವಿರಬೇಕೆಂದು ಸೂಚಿಸಿದರು. ನಿಯಮ, ಬದ್ಧತೆಯಿಂದ ಜೀವನದಲ್ಲಿ ಮುಂದೆ ಸಾಗಬೇಕೆಂದರು. ಆರೋಗ್ಯದ ಬಗ್ಗೆ ಜೀವನದ ಬಗ್ಗೆ ಕ್ರಮಶಿಕ್ಷಣ ಅವಶ್ಯಕ ಎಂದರು.

  ಸಂಕ್ರಾಂತಿಗೆ 'ವಾಲ್ತೇರು ವೀರಯ್ಯ'

  ಸಂಕ್ರಾಂತಿಗೆ 'ವಾಲ್ತೇರು ವೀರಯ್ಯ'

  ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ 'ವಾಲ್ತೇರು ವೀರಯ್ಯ' ಸಿನಿಮಾ ನಿರ್ಮಾಣ ಆಗ್ತಿದೆ. ಚಿತ್ರದಲ್ಲಿ ಲುಂಗಿ ಉಟ್ಟು ಬೀಡಿ ಹಿಡಿದು ಪಕ್ಕಾ ಮಾಸ್ ಲುಕ್‌ನಲ್ಲಿ ಚಿರು ದರ್ಶನ ಕೊಟ್ಟಿದ್ದಾರೆ. 'ಮುಠ್ಠಾಮೇಸ್ತ್ರಿ' ಚಿತ್ರದಲ್ಲಿ ಇದೇ ಲುಕ್‌ನಲ್ಲಿ ನಟಿಸಿ ಗೆದ್ದಿದ್ದರು. ಟೈಟಲ್ ಹಾಗೂ ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ 'ವಾಲ್ತೇರು ವೀರಯ್ಯ' ಆರ್ಭಟ ಶುರುವಾಗಲಿದೆ.

  English summary
  Malla Reddy College Students tribute to Waltair Veerayya Chiranjeevi. actor attend Attend The Largest Event On Cancer Awareness As A Chief Guest. Know More.
  Sunday, October 30, 2022, 19:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X