For Quick Alerts
  ALLOW NOTIFICATIONS  
  For Daily Alerts

  ಹಳೆ ವಿಷಯ ಕೆದಕಿ ಪವನ್ ಕಲ್ಯಾಣ್ ಗೆ ಟಾಂಗ್ ಕೊಟ್ಟ ನಟ ಮಂಚು ವಿಷ್ಣು

  |

  ತೆಲುಗು ಸಿನಿ ಉದ್ಯಮದಲ್ಲಿ ಹಿರಿಯ ನಟರಾದ ಮೋಹನ್ ಬಾಬು ಮತ್ತು ಮೆಗಾಸ್ಟಾರ್ ಚಿರಂಜೀವಿ ನಡುವೆ ಕೆಲವು ವರ್ಷಗಳ ಹಿಂದೆ ನಡೆದಿದ್ದ ಕೋಲ್ಡ್ ವಾರ್ ತೆಲುಗು ಸಿನಿ ಪ್ರಿಯರು ಮರೆಯುವಂತಿಲ್ಲ.

  ಆದರೆ ಇತ್ತೀಚೆಗೆ ಈ ಇಬ್ಬರೂ ನಟರು ತಮ್ಮ ನಡುವಿನ ಮುನಿಸು ಮರೆತು ಆತ್ಮೀಯತೆ ಮರೆದಿದ್ದರು. ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈಗ ಮತ್ತೆ ಹಳೆ ಘಟನೆಯನ್ನು ಕೆದಕುವ ಕೆಲಸ ಮಾಡಿದ್ದಾರೆ.

  ಮೋಹನ್ ಬಾಬು ಮತ್ತು ಚಿರಂಜೀವಿ ನಡುವೆ ನಡೆದ ಘಟನೆಯನ್ನು ಮತ್ತೆ ನೆನಪಿಸಿಕೊಂಡಿರುವ ಮೋಹನ್ ಬಾಬು ಮಗ ಮಂಚು ವಿಷ್ಣು, ಆ ಘಟನೆ ಸಂಬಂಧ ಪವನ್ ಕಲ್ಯಾಣ್ ಗೆ ಟಾಂಗ್ ಸಹ ನೀಡಿದ್ದಾರೆ.

  ಚಿರಂಜೀವಿ-ಮೋಹನ್ ಬಾಬು ನಡುವೆ ನಡೆದ ಜಗಳ

  ಚಿರಂಜೀವಿ-ಮೋಹನ್ ಬಾಬು ನಡುವೆ ನಡೆದ ಜಗಳ

  ತೆಲುಗು ಸಿನಿ ರಂಗವು ಸಿನಿ ಸ್ವರ್ಣೋತ್ಸವಂ ಕಾರ್ಯಕ್ರಮದಲ್ಲಿ ಚಿರಂಜೀವಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರಿಗೂ ಮತ್ತು ಮೋಹನ್ ಬಾಬು ನಡುವೆ ದೊಡ್ಡ ಮಟ್ಟದ ಜಗಳವೇ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಇದನ್ನು ಇಬ್ಬರೂ ಮರೆತುಬಿಟ್ಟಿದ್ದರು.ಆದರೆ ಈಗ ಅದನ್ನು ಮತ್ತೆ ಕೆದಕಲಾಗಿದೆ.

  ಪವನ್ ಕಲ್ಯಾಣ್ ವರ್ತನೆ ಬಗ್ಗೆ ಮಂಚು ವಿಷ್ಣು ಪ್ರಶ್ನೆ

  ಪವನ್ ಕಲ್ಯಾಣ್ ವರ್ತನೆ ಬಗ್ಗೆ ಮಂಚು ವಿಷ್ಣು ಪ್ರಶ್ನೆ

  ಮೋಹನ್ ಬಾಬು ಅವರ ಪುತ್ರ ಮಂಚು ವಿಷ್ಣು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿ, 'ಆ ಘಟನೆ ಬಗ್ಗೆ ಎಲ್ಲರೂ ಸಮಾಧಾನದಿಂದ ಇದ್ದರು, ಆದರೆ ಪವನ್ ಕಲ್ಯಾಣ್ ಸ್ವಲ್ಪ ಅತಿಯಾಗಿ ವರ್ತಿಸಿದರು'' ಎಂದಿದ್ದಾರೆ.

  ಮೋಹನ್ ಬಾಬು ಮೇಲೆ ಪವನ್ ಕಲ್ಯಾಣ್ ಆಕ್ರೋಶ

  ಮೋಹನ್ ಬಾಬು ಮೇಲೆ ಪವನ್ ಕಲ್ಯಾಣ್ ಆಕ್ರೋಶ

  ಚಿರಂಜೀವಿ ಅವರಿಗೆ ಸನ್ಮಾನ ನಡೆದ ಆ ದಿನ ವೇದಿಕೆ ಮೇಲೆ ಮೋಹನ್ ಬಾಬು ಚಿರಂಜೀವಿ ಕುರಿತಾಗಿ ಕೆಲವು ಕಮೆಂಟ್‌ಗಳನ್ನು ಮಾಡಿದರು. ಇವು ಆಕ್ಷೇಪಣೀಯವಾಗಿತ್ತು. ಇದಕ್ಕೆ ಅಲ್ಲಿ ಚಿರಂಜೀವಿ ಸ್ಪಂದಿಸಲಿಲ್ಲ, ಆದರೆ ಅದೇ ವೇದಿಕೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಮೋಹನ್ ಬಾಬು ವಿರುದ್ಧ ಆಕ್ರೋಶ ಹೊರಹಾಕಿ, ಏಕವಚನದಲ್ಲಿ ಸಂಭೋದಿಸಿದ್ದರು. ಇದು ಆ ನಂತರ ದೊಡ್ಡ ಜಗಳವಾಗಿ ಮಾರ್ಪಟ್ಟಿತ್ತು.

  ಪವನ್ ಕಲ್ಯಾಣ್ ಅವರೊಂದಿಗೆ ಗಟ್ಟಿ ಬಂಧವಿಲ್ಲ

  ಪವನ್ ಕಲ್ಯಾಣ್ ಅವರೊಂದಿಗೆ ಗಟ್ಟಿ ಬಂಧವಿಲ್ಲ

  ಪವನ್ ಕಲ್ಯಾಣ್ ಅಂದು ಮಾತನಾಡಿದ್ದಕ್ಕೆ ಆ ಸ್ಥಳದಲ್ಲಿಯೇ ತಂದೆ ಮೋಹನ್ ಬಾಬು ಪ್ರತಿಕ್ರಿಯೆ ನೀಡಲಿಲ್ಲ, ಅದಕ್ಕೆ ಕಾರಣ ಮೋಹನ್ ಬಾಬು ಅವರಿಗೆ ಚಿರಂಜೀವಿ ಅವರ ಮೇಲಿದ್ದ ಪ್ರೀತಿ. ಚಿರಂಜೀವಿ ಮತ್ತು ಮೋಹನ್ ಬಾಬು ನಡುವೆ ಇರುವ ಗಟ್ಟಿ ಸಂಬಂಧ ಮೋಹನ್ ಬಾಬು ಮತ್ತು ಪವನ್ ಕಲ್ಯಾಣ್ ನಡುವೆ ಇಲ್ಲ ಎಂದು ಮಂಚು ವಿಷ್ಣು ಹೇಳಿದ್ದಾರೆ.

  English summary
  Manchu Vishnu talked about Pawan Kalyan remembering old incident happened between Mohan Babu, Chiranjeevi and Mohan Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X