For Quick Alerts
  ALLOW NOTIFICATIONS  
  For Daily Alerts

  ಅಪ್ಪನಿಗೆ ಅವಮಾನ ಮಾಡಲಾಗಿದೆ: ಚಿರು ವಿರುದ್ಧ ಮಂಚು ವಿಷ್ಣು ಪರೋಕ್ಷ ಆರೋಪ

  |

  ತೆಲುಗು ಚಿತ್ರರಂಗ ಒಡೆದ ಮನೆಯಾಗಿದೆ. ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಕೊಟ್ಟಿದ್ದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಇದೀಗ ಚಿತ್ರರಂಗದ ಒಡಕಿಗೂ ಕಾರಣವಾಗಿದ್ದಾರೆ.

  Recommended Video

  ಜಗನ್ ಮನೆಗೆ ಹೋಗಿದ್ದೆ ತಪ್ಪಾಯ್ತು ಅನ್ನೋ ಹಾಗಾಗಿದೆ ಚಿರಂಜೀವಿ ಪರಿಸ್ಥಿತಿ

  ಟಿಕೆಟ್ ದರ ವಿಚಾರ ಹಾಗೂ ತೆಲುಗು ಚಿತ್ರರಂಗದ ಇತರೆ ಸಮಸ್ಯೆಗಳ ಬಗ್ಗೆ ನಟ ಚಿರಂಜೀವಿ ನೇತೃತ್ವದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ತೆಲುಗು ಚಿತ್ರರಂಗದ ಪ್ರಮುಖರು ಭೇಟಿಯಾಗಿ ಮಾತುಕತೆ ನಡೆಸಿದ್ದು, ಈ ವಿಷಯ ಇದೀಗ ತೆಲುಗು ಚಿತ್ರರಂಗದ ಕೆಲವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

  ತೆಲುಗು ಚಿತ್ರರಂಗದ 'ನಾಯಕ' ಚಿರಂಜೀವಿ: ಮುಖಭಂಗವಾದರೂ ಒಪ್ಪಿಕೊಳ್ಳಲು ಸಿದ್ಧವಿಲ್ಲ ವಿರೋಧಿಗಳು
  ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಅಧ್ಯಕ್ಷ ಮಂಚು ವಿಷ್ಣು ಅಂತೂ ಈ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನಗೊಂಡಿದ್ದಾರೆ. ಮಾ ಅಧ್ಯಕ್ಷನಾಗಿದ್ದರೂ ತನ್ನನ್ನಾಗಲಿ, ತಂದೆ ಮೋಹನ್‌ಬಾಬು ಅನ್ನಾಗಲಿ ಸಭೆಗೆ ಕರೆಯದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಧ್ಯಮಗಳ ಮುಂದೆ ಆಕ್ರೋಶ ತೋಡಿಕೊಂಡಿದ್ದಾರೆ.

  ಜಗನ್ ಜೊತೆ ಮೊದಲು ಸಭೆ ನಡೆದಾಗ ಅಪ್ಪ ಮೋಹನ್‌ ಬಾಬು ಅವರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಕೆಲವರು ಆ ಆಹ್ವಾನವನ್ನು ಬೇಕೆಂದೇ ಅಪ್ಪನಿಗೆ ತಲುಪಿಸಲಿಲ್ಲ. ಯಾರು ಮತ್ತು ಏಕೆ ಹೀಗೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಫಿಲಂ ಚೇಂಬರ್‌ನ ಸಭೆಯಲ್ಲಿ ಈ ಬಗ್ಗೆ ನಾನು ಚರ್ಚೆ ಮಾಡಲಿದ್ದೇನೆ ಎಂದು ಮಾಧ್ಯಮಗಳ ಮುಂದೆ ಮಂಚು ವಿಷ್ಣು ಹೇಳಿದ್ದಾರೆ.

   ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ಆಂಧ್ರ ಸಿಎಂ ಭೇಟಿ ಯಶಸ್ವಿ ಆಯ್ತಾ? ಕೊಟ್ಟ ಭರವಸೆಗಳೇನು? ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ಆಂಧ್ರ ಸಿಎಂ ಭೇಟಿ ಯಶಸ್ವಿ ಆಯ್ತಾ? ಕೊಟ್ಟ ಭರವಸೆಗಳೇನು?

  ''ತೆಲುಗು ಸಿನಿಮಾ ರಂಗದ ಪ್ರಸ್ತುತ ಅತ್ಯಂತ ಹಿರಿಯ ಹಾಗೂ ದಂತಕತೆಯಂತಿರುವ ನಟ ನಮ್ಮ ತಂದೆ ಮೋಹನ್ ಬಾಬು. ಆದರೆ ಅವರನ್ನೇ ಇಂಥಹಾ ವಿಷಯದಲ್ಲಿ ಗಣನೆಗೆ ತೆಗೆದುಕೊಳ್ಳದೇ ಇರುವುದು ಸರಿಯಲ್ಲ. ಅವರಿಗೆ ಆಹ್ವಾನ ಬಂದಿದ್ದರೂ ಅವರಿಗೆ ನೀಡದೇ ಇರುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು, ಅವರನ್ನು ಹೇಗೆ ಸರಿ ಮಾಡಬೇಕು ಎಂಬುದು ನಮಗೆ ಗೊತ್ತಿದೆ'' ಎಂದು ಎಚ್ಚರಿಕೆ ನೀಡಿದರು ಮಂಚು ವಿಷ್ಣು.

  'ಇಂಡಸ್ಟ್ರಿ ಒಬ್ಬರದ್ದಲ್ಲ': ಚಿರಂಜೀವಿ ಸಕಾರ್ಯದ ಬಗ್ಗೆ ಮಂಚು ವಿಷ್ಣು ಅಪಸ್ವರ'ಇಂಡಸ್ಟ್ರಿ ಒಬ್ಬರದ್ದಲ್ಲ': ಚಿರಂಜೀವಿ ಸಕಾರ್ಯದ ಬಗ್ಗೆ ಮಂಚು ವಿಷ್ಣು ಅಪಸ್ವರ

  ಚಿರಂಜೀವಿ, ಜಗನ್ ಅನ್ನು ಭೇಟಿಯಾದ ಬಳಿಕ ಮಂಚು ವಿಷ್ಣು ಹಾಗೂ ಮೋಹನ್ ಬಾಬು ಜಗನ್ ಅನ್ನು ಭೇಟಿಯಾದರು. ತಮಗೆ ಸ್ವತಃ ಜಗನ್ ಆಹ್ವಾನ ನೀಡಿದ್ದರು ಎಂದು ಮಾಧ್ಯಮಗಳ ಬಳಿ ಹೇಳಿಕೊಂಡರು. ಆದರೆ ತೆಲುಗು ಚಿತ್ರರಂಗದ ಕುರಿತಾಗಿ ಜಗನ್, ಚಿರಂಜೀವಿ ಜೊತೆಯಷ್ಟೆ ಮಾತುಕತೆ ನಡೆಸಿದ್ದು, ಚಿತ್ರರಂಗದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗುತ್ತಿರುವ ಕರಡು ಆದೇಶ ನಿರ್ಮಾಣ ಸಮಿತಿಯು ಸಹ ಚಿರಂಜೀವಿ ಜೊತೆಯಷ್ಟೆ ಸಂಪರ್ಕ ಇಟ್ಟುಕೊಂಡಿದೆ. ಮೋಹನ್ ಬಾಬು ಆಗಲಿ ಮಂಚು ವಿಷ್ಣು ಅನ್ನಾಗಲಿ ಜಗನ್ ಪರಿಗಣನೆಗೆ ತೆಗೆದುಕೊಂಡಿಲ್ಲ.

  English summary
  MAA presidnet Manchu Vishnu upset about Chiranjeevi and other celebrities who met Andhra CM Jagan. He said I know how to correct them.
  Thursday, February 17, 2022, 9:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X