For Quick Alerts
  ALLOW NOTIFICATIONS  
  For Daily Alerts

  ಆಚಾರ್ಯ ಚಿತ್ರೀಕರಣದಲ್ಲಿ ಚಿರಂಜೀವಿ-ರಾಮ್ ಚರಣ್ ತೇಜ ಕಮಾಲ್

  |

  ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಒಟ್ಟಿಗೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರಟಲಾ ಶಿವ ನಿರ್ದೇಶನದ ಆಚಾರ್ಯ ಸಿನಿಮಾದಲ್ಲಿ ಚಿರು ಮತ್ತು ಚರಣ್ ನಟಿಸುತ್ತಿದ್ದು, ರಾಜಮಂಡ್ರಿಯಲ್ಲಿ ಇಬ್ಬರು ಒಟ್ಟಿಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

  ಈ ವೇಳೆ ಕ್ಲಿಕ್ ಆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಕಿ ಕಲರ್ ಫ್ಯಾಂಟ್ ಹಾಗೂ ಕಪ್ಪು ಬಣ್ಣದ ಟಿ ಶರ್ಟ್ ಧರಿಸಿರುವ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅವರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

  ಚಿರಂಜೀವಿ 'ಆಚಾರ್ಯ' ಸೆಟ್‌ಗೆ ಭೇಟಿ ನೀಡಿದ ಸರ್ಪ್ರೈಸ್ ಅತಿಥಿ

  ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಪಾತ್ರದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ ಕಥೆಯಲ್ಲಿ ಪ್ರಮುಖ ಪಾತ್ರ ಎನ್ನಲಾಗಿದೆ. ಈ ಹಿನ್ನೆಲೆ ರಾಮ್ ಚರಣ್ ಆಚಾರ್ಯ ಶೂಟಿಂಗ್ ಆರಂಭಿಸಿದ್ದಾರೆ.

  ಆಚಾರ್ಯ ಶೂಟಿಂಗ್‌ನಲ್ಲಿ ರಾಮ್ ಚರಣ್ ಭಾಗಿಯಾದ ಹಿನ್ನೆಲೆ ರಾಮ್ ಚರಣ್ ಪತ್ನಿ ಉಪಾಸನ ಭೇಟಿ ನೀಡಿದ್ದರು. ರಾಜಮಂಡ್ರಿ ಏರ್‌ಪೋರ್ಟ್‌ನಲ್ಲಿ ಉಪಾಸನ ಕಾಣಿಸಿಕೊಂಡಿರುವ ಫೋಟೋಗಳು ಸದ್ದು ಮಾಡಿದ್ದವು.

  ಇನ್ನು ಚಿರಂಜೀವಿ ಜೊತೆ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಚರಣ್ ತೇಜಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  ಕೊರಟಲಾ ಶಿವ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ನಿರಂಜನ್ ರೆಡ್ಡಿ ಮತ್ತು ರಾಮ್ ಚರಣ್ ಬಂಡವಾಳ ಹಾಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ ಆಚಾರ್ಯ ಸಿನಿಮಾ ತೆರೆಕಾಣಲಿದೆ.

  ರಾಬರ್ಟ್ ಹಾಡಿನ ತೆಲುಗು ಗಾಯಕಿಗೆ ಕನ್ನಡಿಗರು ಫಿದಾ | Filmibeat Kannada

  ಇನ್ನುಳಿದಂತೆ ರಾಮ್ ಚರಣ್ ತೇಜ ಎಸ್‌ಎಸ್‌ ರಾಜಮೌಳಿ ಜೊತೆ ಆರ್‌ಆರ್‌ಆರ್ ಸಿನಿಮಾ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ಹೊಸ ಪ್ರಾಜೆಕ್ಟ್‌ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Mega Star Chiranjeevi and Ram Charan pic viral from the sets of Acharya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X