For Quick Alerts
  ALLOW NOTIFICATIONS  
  For Daily Alerts

  24 ಗಂಟೆಯಲ್ಲಿ ದಾಖಲೆ ಬರೆದ ಮೆಗಾಸ್ಟಾರ್ ಗಾಡ್‌ಫಾದರ್: ಏನದು ರೆಕಾರ್ಡ್?

  |

  ದಸರಾ ಹಬ್ಬದಂದೇ ಮೆಗಾಸ್ಟಾರ್ ಚಿರಂಜೀವಿಯ ಮೆಗಾ ಸಿನಿಮಾ ರಿಲೀಸ್ ಆಗುತ್ತಿದೆ. ಅಕ್ಟೋಬರ್ 5ರಂದು 'ಗಾಡ್‌ಫಾದರ್' ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲು ಬೇಕಾದಂತಹ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

  'ಗಾಡ್‌ಫಾದರ್' ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿಯಲ್ಲಿಯೂ ಬಿಡುಗಡೆಯಾಗುತ್ತಿದೆ. ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಿರುವುದರಿಂದ 'ಗಾಡ್‌ಫಾದರ್' ಬಾಕ್ಸಾಫೀಸ್‌ ಮೇಲೆ ಎಲ್ಲರ ಕಣ್ಣಿದೆ. ಟಾಲಿವುಡ್ ಹಾಗೂ ಬಾಲಿವುಡ್ ಎರಡೂ ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತೆ ಎಂದು ಟ್ರೇಡ್ ಅನಲಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ.

  ಅಭಿಮಾನಿಗಳೇ ನನ್ನ 'ಗಾಡ್ ಫಾದರ್ಸ್': ಮಳೆಯನ್ನು ಲೆಕ್ಕಿಸದೇ ಮೆಗಾಸ್ಟಾರ್ ಪವರ್‌ಫುಲ್ ಸ್ಪೀಚ್!ಅಭಿಮಾನಿಗಳೇ ನನ್ನ 'ಗಾಡ್ ಫಾದರ್ಸ್': ಮಳೆಯನ್ನು ಲೆಕ್ಕಿಸದೇ ಮೆಗಾಸ್ಟಾರ್ ಪವರ್‌ಫುಲ್ ಸ್ಪೀಚ್!

  ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಅಭಿನಯದ 'ಗಾಡ್‌ಫಾದರ್' ಸಿನಿಮಾಗಾಗಿ ಮೆಗಾ ಅಭಿಮಾನಿಗಳು ಕಾಯುತ್ತಿದ್ದಾರೆ. ಮೋಹನ್ ರಾಜಾ ನಿರ್ದೇಶಿಸಿದ ಈ ಸಿನಿಮಾ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, 24 ಗಂಟೆಗಳಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

  ಸೋಶಿಯಲ್ ಮೀಡಿಯಾದಲ್ಲಿ 'ಗಾಡ್‌ಫಾದರ್' ಟ್ರೈಲರ್ ಬಗ್ಗೆ ಟಾಕ್ ಇದೆ. ಈಗಲೂ ಯೂಟ್ಯೂನ್‌ನಲ್ಲಿ ಟ್ರೈಲರ್ ನಂಬರ್ ಒನ್ ಸ್ಥಾನದಲ್ಲಿದೆ. 24 ಗಂಟೆಗಳಲ್ಲಿ ಟ್ರೈಲರ್ ಬೇಜಾನ್ ಸದ್ದು ಮಾಡಿದ್ದು, 3.20 ಲಕ್ಷಕ್ಕೂ ಅಧಿಕ ಲೈಕ್ಸ್ ಅನ್ನು ಗಿಟ್ಟಿಸಿಕೊಂಡಿತ್ತು. ಅಲ್ಲದೇ ಸುಮಾರು 10 ಮಿಲಿಯನ್‌ಗೂ ಅಧಿಕ ಮಂದಿ ಈ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. 24 ಗಂಟೆನೂ 'ಗಾಡ್‌ಫಾದರ್' ಸಿನಿಮಾ ಟ್ರೈಲರ್‌ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು ಹೊಸ ದಾಖಲೆ ಬರೆದಿದೆ.

  ಸಿನಿಮಾ ಪಂಡಿತರ ಪ್ರಕಾರ ಇದು, ಟಾಲಿವುಡ್‌ನಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಟ್ರೈಲರ್‌ಗಳಲ್ಲಿ ಒಂದು. ಈ ಮೂಲಕ 'ಗಾಡ್‌ಫಾದರ್' ಟ್ರೈಲರ್ ಪ್ರೇಕ್ಷಕರನ್ನು ಸೆಳೆದಿದ್ದು, ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ.

  Mega Star Chiranjeevi And Salman Khan Starrer Godfather Movie Trailer Record

  ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್‌ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್, ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಜೊತೆ ಹಾಸ್ಯ ನಟ ಸುನೀಲ್, ಖ್ಯಾತ ನಟರಾದ ಸಮುದ್ರಖನಿ ಸೇರಿದಂತೆ ದಿಗ್ಗಜರು ನಟಿಸಿದ್ದಾರೆ. ಇನ್ನು ಈ ಸಿನಿಮಾ ದಸರಾ ಹಬ್ಬದಂದು ರಿಲೀಸ್ ಆಗುತ್ತಿರೋದ್ರಿಂದ ಬಾಕ್ಸಾಫೀಸ್‌ನಲ್ಲಿ ಅತೀ ದೊಡ್ಡ ಯಶಸ್ಸು ಕಾಣುತ್ತೆ ಎಂದು ಹೇಳಲಾಗುತ್ತಿದೆ.

  English summary
  Mega Star Chiranjeevi And Salman Khan Starrer Godfather Movie Trailer Record, Know More.
  Friday, September 30, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X