twitter
    For Quick Alerts
    ALLOW NOTIFICATIONS  
    For Daily Alerts

    'ಆಚಾರ್ಯ' ಹೀನಾಯ ಸೋಲು: ಕೊನೆಗೂ ಮೌನ ಮುರಿದ ಚಿರಂಜೀವಿ

    |

    ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್ ನಲ್ಲಿ ದಯನೀಯ ಸೋಲು ಕಂಡಿತ್ತು. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ತಂದೆ ಚಿತ್ರದ ಬೆನ್ನಿಗೆ ನಿಂತರೂ‌ ಪ್ರಯೋಜನವಾಗಿರಲಿಲ್ಲ. RRR ಸೂಪರ್ ಹಿಟ್ ಬೆನ್ನಲ್ಲೇ ಚೆರ್ರಿಗೂ ಈ ಸಿನಿಮಾ ಸೋಲಿನ ಕಹಿ ನೀಡಿತ್ತು. ಸಿನಿಮಾ ಕೊಂಡುಕೊಂಡಿದ್ದ ವಿತರಕರು, ಪ್ರದರ್ಶಕರು ಭಾರೀ ನಷ್ಟ ಎದುರಿಸುವಂತಾಯಿತು. ನಿರ್ದೇಶಕ ಕೊರಟಾಲ ಶಿವ ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು.‌ ನಿರ್ದೇಶಕರು ನಷ್ಟ ಭರಿಸಲು ತಮ್ಮ ಆಸ್ತಿ ಮಾರಾಟಕ್ಕಿಟ್ಟಿದ್ದಾರೆ ಅಂತಲೂ ಸುದ್ದಿ ಆಗಿತ್ತು. ಇನ್ನು ಚಿರು, ಕೊರಟಾಲ ನಷ್ಟವನ್ನು ಹಿಂತಿರುಗಿಸಿದರು ಅನ್ನುವ ಚರ್ಚೆ ಕೂಡ ನೀಡಿತು. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗಲಿಲ್ಲ. 'ಆಚಾರ್ಯ' ಸಿನಿಮಾ‌ ಸೋಲಿನ‌ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಆಮಿರ್ ಖಾನ್, ಕರೀನಾ ಕಪೂರ್, ನಾಗಚೈತನ್ಯಾ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬೆಂಬಲಕ್ಕೆ ಮೆಗಾಸ್ಟಾರ್ ಚಿರಂಜೀವಿ ನಿಂತಿದ್ದಾರೆ.‌ ಕೆಲ ದಿನಗಳ‌ ಹಿಂದೆ ಚಿರು ತಮ್ಮ ಮನೆಯಲ್ಲೇ ಚಿತ್ರದ ಸ್ಪೆಷಲ್ ಶೋ ಏರ್ಪಡಿಸಿದ್ದರು. ನಿರ್ದೇಶಕರಾದ ಎಸ್. ಎಸ್ ರಾಜಮೌಳಿ, ಸುಕುಮಾರ್, ನಟ ನಾಗಾರ್ಜುನಾ ಜೊತೆ ಕೂತು ಚಿರಂಜೀವಿ, ಆಮಿರ್ ಖಾನ್, ನಾಗಚೈತನ್ಯಾ ಸಿನಿಮಾ ವೀಕ್ಷಿಸಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಮಿರ್ ಖಾನ್ ಪ್ರಯತ್ನಕ್ಕೆ ಮೆಗಾಸ್ಟಾರ್ ಫಿದಾ ಆಗೋಗಿದ್ದರು. ನಿನ್ನೆ ಹೈದರಾಬಾದ್‌ನಲ್ಲಿ ನಡೆದ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಆಮಿರ್ ಖಾನ್, ನಾಗಚೈತನ್ಯಾ ಜೊತೆ ಚಿರು ಕೂಡ ಭಾಗವಹಿಸಿ, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ 'ಆಚಾರ್ಯ' ಸಿನಿಮಾ ಬಗ್ಗೆ ಮೆಗಾಸ್ಟಾರ್ ಪರೋಕ್ಷವಾಗಿ ಹೇಳಿದ ಮಾತುಗಳು ಈಗ ಟಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.

    'ಆಚಾರ್ಯ' ಸಿನಿಮಾದಿಂದಾದ ನಷ್ಟ ಭರಿಸಲು ಆಸ್ತಿ ಮಾರಲು ಮುಂದಾದ ನಿರ್ದೇಶಕ'ಆಚಾರ್ಯ' ಸಿನಿಮಾದಿಂದಾದ ನಷ್ಟ ಭರಿಸಲು ಆಸ್ತಿ ಮಾರಲು ಮುಂದಾದ ನಿರ್ದೇಶಕ

    ಈಗಾಗಲೇ ಚಿರಂಜೀವಿ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ನೋಡಿರುವುದರಿಂದ ಆಮಿರ್ ಖಾನ್ ನಟನೆಯನ್ನು ಕೊಂಡಾಡಿದ್ದರು. ಚಿತ್ರದ ಎಲ್ಲಾ ವಿಭಾಗಗಳ ಬಗ್ಗೆಯೂ ಮುಕ್ತಕಂಠದಿಂದ ಶ್ಲಾಘಿಸಿದ್ದರು. "ಆಮಿರ್ ಖಾನ್ ಮಾಡಿದ ಪಾತ್ರಗಳನ್ನು ಮಾಡಲು ನಾನು ಖಂಡಿತ ಪ್ರಯತ್ನಿಸುವುದಿಲ್ಲ. ಅಂತಹ ಪಾತ್ರಗಳು ಅವರಿಗೆ ಮಾತ್ರ ಸೂಕ್ತ. ಅವರಂತೆ ಪ್ರಯೋಗಾತ್ಮಕ ಸಿನಿಮಾಗಳು ನನ್ನಿಂದ ಸಾಧ್ಯವಿಲ್ಲ. ನನ್ನ ಸಿನಿಮಾಗಳಲ್ಲಿ ಮನರಂಜನೆ ಇರಬೇಕು. ಮನರಂಜನೆ ನೀಡಿ ಪ್ರೇಕ್ಷಕರಿಂದ ಚಪ್ಪಾಳೆ, ಶಹಬ್ಬಾಶ್‌ಗಿರಿ ಪಡೆದುಕೊಳ್ಳುತ್ತೇನೆ. ಆಮಿರ್ ಖಾನ್ ಪ್ರಯೋಗಗಳನ್ನು ಮಾಡಿ ಪ್ರೇಕ್ಷಕರನ್ನು ಒಪ್ಪಿಸಬಲ್ಲರು.‌ ನನ್ನಿಂದ ಅದು ಸಾಧ್ಯವಿಲ್ಲ" ಎಂದರು.‌

     ಆಚಾರ್ಯ' ಸೋಲಿನ‌ ಬಗ್ಗೆ ಪರೋಕ್ಷ ಪ್ರತಿಕ್ರಿಯೆ

    ಆಚಾರ್ಯ' ಸೋಲಿನ‌ ಬಗ್ಗೆ ಪರೋಕ್ಷ ಪ್ರತಿಕ್ರಿಯೆ

    ಆಮಿರ್ ಖಾನ್ ರೀತಿ ಪ್ರಯೋಗಗಳನ್ನು ಮಾಡದೇ ಮನರಂಜನೆಗೆ ಒತ್ತು ಕೊಟ್ಟು ಸಿನಿಮಾ‌ ಮಾಡುತ್ತೇನೆ ಎಂದು ಚಿರು ಮಾತು ಮುಂದುವರೆಸಿ 'ಕೆಲವೊಮ್ಮೆ ನನ್ನ ಕೈ‌ ಮೀರಿ ನಡೆದುಬಿಡುತ್ತದೆ. ಅದರ ಬಗ್ಗೆ ಮಾತನಾಡುವುದಿಲ್ಲ ಅಂತ ನಗುತ್ತಾ ಚಿರಂಜೀವಿ ಹೇಳಿದ್ದಾರೆ. ಇದು 'ಆಚಾರ್ಯ' ಸೋಲಿನ ಬಗ್ಗೆ ಚಿರು ಪ್ರತಿಕ್ರಿಯೆ ಅನ್ನೋದು ಗೊತ್ತಾಗಿ ಹೋಗಿತ್ತು. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

    ಚಿರಂಜೀವಿ ಮನೆಗೆ ಬಂದು ಸಿನಿಮಾ ತೋರಿಸಿದ ಅಮೀರ್ ಖಾನ್ಚಿರಂಜೀವಿ ಮನೆಗೆ ಬಂದು ಸಿನಿಮಾ ತೋರಿಸಿದ ಅಮೀರ್ ಖಾನ್

     ಕಥೆ ಗೊತ್ತಿಲ್ಲದೇ ಕೆಲ ಕಲಾವಿದರು ಡೈಲಾಗ್ಸ್ ಹೇಳುತ್ತಾರೆ

    ಕಥೆ ಗೊತ್ತಿಲ್ಲದೇ ಕೆಲ ಕಲಾವಿದರು ಡೈಲಾಗ್ಸ್ ಹೇಳುತ್ತಾರೆ

    ಹಿಂದಿಯಲ್ಲಿ ಸಾಕಷ್ಟು ಅದ್ಭುತ ಸಿನಿಮಾಗಳು ಬರುತ್ತಿವೆ. ಅಲ್ಲಿ ಕಥೆ ಸಿದ್ಧಪಡಿಸಿ, ವರ್ಕ್‌ಶಾಪ್‌ ಮಾಡಿ, ಬಹಳ ಸಮಯ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ. ನಮ್ಮ ಹೀರೊಗಳು ಇದನ್ನು ಮಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಚಿರುಗೆ ಎದುರಾಯಿತು. ಈ ಬಗ್ಗೆ ಉತ್ತರಿದ ಚಿರು 'ಖಂಡಿತ ಮಾಡಬಹುದು. ಅದೇ ರೀತಿ ಮಾಡಬೇಕು ಕೂಡ. ನಿರ್ದೇಶಕನ ಕಥೆಯನ್ನು ನಟ-ನಟರಿಯರು, ತಂತ್ರಜ್ಞರು ಅರ್ಥ ಮಾಡಿಕೊಳ್ಳಬೇಕು. ಮೊದಲೇ ವರ್ಕ್ ಶಾಪ್ ಮಾಡಬೇಕು. ಕೆಲವು ಕಲಾವಿದರು ಕಥೆ ಗೊತ್ತಿಲ್ಲದೇ ಸೆಟ್‌ಗೆ ಬಂದು ಆಗಿಂದಾಗ್ಗೆ ಡೈಲಾಗ್ಸ್ ಹೇಳಿ ಹೊರಟು ಹೋಗುತ್ತಾರೆ. ಆ ರೀತಿ ಮಾಡಿದಾಗ ಪರ್ಫಾರ್ಮೆನ್ಸ್‌ಗೆ ಅವಕಾಶ ಇರುವುದಿಲ್ಲ. ಅದಕ್ಕೆ ನಿರ್ದೇಶಕರು ಮೊದಲು ಕಥೆ ಹೇಳಿ ಮುಖ್ಯವಾದ ಡೈಲಾಗ್ಸ್ ಅಭ್ಯಾಸ ಮಾಡಿಸಬೇಕು. ಇನ್ನು ನಿರ್ದೇಶಕರು ಕೂಡ ಸೆಟ್‌ಗೆ ಬಂದು ಡೈಲಾಗ್ಸ್ ಬರೆಯಬಾರದು. ಮೊದಲೇ ಎಲ್ಲಾ ಸಿದ್ಧವಾಗಿರಬೇಕು. ಆಗ ಮಾತ್ರ ಕಲಾವಿದರಿಗೆ ಅಭಿನಯಿಸಲು ಸಹಾಯಕವಾಗುತ್ತದೆ' ಎಂದರು.

     ಚಿರು- ಚರಣ್ 'ಆಚಾರ್ಯ'ದಿಂದ 100 ಕೋಟಿ ನಷ್ಟ

    ಚಿರು- ಚರಣ್ 'ಆಚಾರ್ಯ'ದಿಂದ 100 ಕೋಟಿ ನಷ್ಟ

    ಸೂಪರ್ ಹಿಟ್‌ ಸಿನಿಮಾಗಳ ಸರದಾರ ಕೊರಟಾಲ ಶಿವ ನಿರ್ದೇಶನದಲ್ಲಿ ಚಿರಂಜೀವಿ ಸಿನಿಮಾ ಮಾಡ್ತಿದ್ದಾರೆ ಅಂದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು. 'ಆಚಾರ್ಯ' ಚಿರು ಜೊತೆಗೆ ಪುತ್ರ ರಾಮ್‌ಚರಣ್‌ ತೇಜಾ ಕೂಡ ಕೈ ಜೋಡಿಸಿದ ಮೇಲೆ ನಿರೀಕ್ಷೆ ಡಬಲ್ ಆಗಿತ್ತು. ಆದರೆ ಸಿನಿಮಾ ಹೇಳಿಕೊಳ್ಳುವಂತಹ ಬಝ್ ಕ್ರಿಯೇಟ್ ಮಾಡಲಿಲ್ಲ. ಇನ್ನು ರಿಲೀಸ್ ಆಗಿ ಮ್ಯಾಟ್ನಿ ಶೋ ಶುರುವಾಗುವ ಮೊದಲೇ ಡಿಸಾಸ್ಟರ್ ಟಾಕ್ ಕೇಳಿಬಂದಿತ್ತು. ಅಲ್ಲಿಂದ ಮುಂದೆ ಸಿನಿಮಾ ಮೇಲೇಳಲೇ ಇಲ್ಲ. ಈ ಚಿತ್ರದಿಂದ ಬರೋಬ್ಬರಿ 100 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    'ಆಚಾರ್ಯ' ವಿತರಕರ ಆಕ್ರೋಶಕ್ಕೆ ಮಣಿದ ಮೆಗಾ ಕುಟುಂಬ: ನಷ್ಟ ಭರಿಸಲು ಕೊಟ್ಟಿದ್ದೆಷ್ಟು?

     'ಗಾಡ್‌ಫಾದರ್' ಅವತಾರದಲ್ಲಿ ಪ್ರೇಕ್ಷಕರ ಮುಂದೆ ಚಿರು

    'ಗಾಡ್‌ಫಾದರ್' ಅವತಾರದಲ್ಲಿ ಪ್ರೇಕ್ಷಕರ ಮುಂದೆ ಚಿರು

    ಚಿರಂಜೀವಿ ಮುಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ಸದ್ಯ 'ಗಾಡ್‌ಫಾದರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ 'ಲೂಸಿಫರ್' ಸಿನಿಮಾ ರೀಮೇಕ್ ಇದಾಗಿದ್ದು, ಅಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರು ಮಾಡುತ್ತಿದ್ದಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿರೋ ಕುತೂಹಲ ಕೆರಳಿಸಿದೆ.

    Recommended Video

    ಸುದೀಪ್ is fantastic ಎಂದ ಸಲ್ಲು | Vikrant Rona | Kiccha Sudeep | Salman Khan | *Press Meet |

    English summary
    Mega Star Chiranjeevi First Reaction On Acharya Disaster. Know More.
    Monday, July 25, 2022, 11:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X