Don't Miss!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿರಂಜೀವಿಗೆ ಫಸ್ಟ್ ಲವ್ ಆಗಿದ್ದು 7ನೇ ತರಗತಿಯಲ್ಲಿ: ಮೆಗಾಸ್ಟಾರ್ ರಿವೀಲ್ ಮಾಡಿದ್ದೇನು?
'ಲಾಲ್ ಸಿಂಗ್ ಚಡ್ಡಾ' ನೋಡಿ ಮೆಚ್ಚಿಕೊಂಡಿರೋ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಪ್ರಚಾರದಲ್ಲಿ ಆಮೀರ್ ಖಾನ್ ಜೊತೆ ಕೈ ಜೋಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಚಿರು ತಮ್ಮ 'ಫಸ್ಟ್ ಲವ್' ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಪ್ರಪಂಚದಲ್ಲಿ ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಪ್ರೀತಿ ಮಾಡಿರುತ್ತಾರೆ. ಅದು ಟೂ ವೇ ಲವ್ವೋ ಒನ್ ವೇ ಲವ್ವೋ, ಅದು ಸಕ್ಸಸ್ ಆಗುತ್ತೋ ಇಲ್ವೋ ಗೊತ್ತಿಲ್ಲ. ಏನೇ ಆದರೂ ಲೈಫ್‌ನಲ್ಲಿ ಫಸ್ಟ್ ಲವ್ ಅನ್ನುವುದು ಸಖತ್ ಸ್ಪೆಷಲ್. ಇದನ್ನು ಯಾರೂ ಅಷ್ಟು ಸುಲಭವಾಗಿ ಮರೆಯೋಕೆ ಸಾಧ್ಯವಿಲ್ಲ ಅನ್ನಿಸುತ್ತೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಗೆ 7ನೇ ತರಗತಿಯಲ್ಲಿ ಇದ್ದಾಗಲೇ ಫಸ್ಟ್ ಲವ್ ಆಗಿತ್ತಂತೆ. ಈ ವಿಚಾರವನ್ನು ಸ್ವತಃ ಚಿರು ಅನಾವರಣಗೊಳಿಸಿದ್ದಾರೆ. ಇನ್ನು ಚಿರುಗೆ ಸಿನಿಮಾ ಮಾಡುವುದಾಗಿಯೂ ಆಮಿರ್ ಖಾನ್ ಹೇಳಿದ್ದಾರೆ.
'ಕೆಜಿಎಫ್
2'
ಹೊಡೆತದಿಂದ
ಆಮಿರ್
ಖಾನ್
ತಪ್ಪಿಸಿಕೊಂಡಿದ್ದು
ಹೇಗೆ?
'ಲಾಲ್ ಸಿಂಗ್ ಚಡ್ಡಾ' ಪ್ರಚಾರದ ಭಾಗವಾಗಿ ಆಮಿರ್ ಖಾನ್, ಚಿರಂಜೀವಿ, ನಾಗಚೈತನ್ಯಾ ಮೂವರನ್ನು ಟಾಲಿವುಡ್ ಕಿಂಗ್ ನಾಗಾರ್ಜುನ ಸಂದರ್ಶನ ಮಾಡಿದ್ದಾರೆ. ಶೋ ಪ್ರೋಮೋ ರಿಲೀಸ್ ಆಗಿದ್ದು, ಸೂಪರ್ ಸ್ಟಾರ್‌ಗಳು ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 'ಲಾಲ್ ಸಿಂಗ್ ಚಡ್ಡಾ' ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದ್ದು, ಚಿರು ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಕೆಲ ದಿನಗಳ ಹಿಂದೆ ಚಿರಂಜೀವಿ ಮನೆಯಲ್ಲಿ ಸಿನಿಮಾ ಸ್ಪೆಶಲ್ ಶೋ ಏರ್ಪಡಿಸಲಾಗಿತ್ತು. ಚಿರು ಜೊತೆಗೆ ನಿರ್ದೇಶಕರಾದ ರಾಜಮೌಳಿ, ಸುಕುಮಾರ್ ಸೇರಿ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

ಚಿರಂಜೀವಿ ಫಸ್ಟ್ ಲವ್
ಸಂದರ್ಶನದಲ್ಲಿ ಮಾತನಾಡುತ್ತಾ "ಈ ಸಿನಿಮಾದಲ್ಲಿ ಹತ್ತನೇ ವಯಸ್ಸಿನಲ್ಲಿಯೇ ಹೀರೊ ಪ್ರೀತಿಲಿ ಬೀಳ್ತಾನೆ ಎಂದು ನಾಗಾರ್ಜುನ ಹೇಳಿದ ತಕ್ಷಣ,'ನೀವು ಮೊದಲು ಯಾವಾಗ ಪ್ರೀತಿಯಲ್ಲಿ ಬಿದ್ದಿದ್ದು?' ಎಂದು ಚಿರುನ ಆಮಿರ್ ಖಾನ್ ಕೇಳುತ್ತಾರೆ. ಆಗ ಚಿರು '7ನೇ ತರಗತಿಯಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದೆ. ಮೊಗಳ್ತೂರಿನಲ್ಲಿ ಒಂದು ಹುಡುಗಿ ಸೈಕಲ್ ತುಳಿಯುವುದನ್ನು ನೋಡುವುದಕ್ಕೆ ಅಚ್ಚರಿಯಾಗಿತ್ತು. ಅಂತಾದ್ರಲ್ಲಿ ಆ ಹುಡುಗಿ ಸೈಕಲ್ ಹಿಡಿದುಕೊಂಡರೆ ನಾನು ತುಳೀತಿದ್ದೆ. ಆಗ ಸೈಕಲ್ ತುಳಿಯೋದು ಬಿಟ್ಟು ಆಕೆಯನ್ನು ನೋಡುತ್ತಿದ್ದೆ. ಆಗ ಆಕೆ ಮುಂದೆ ನೋಡು ಅಂತ ನನ್ನ ಮುಖ ತಿರುಗಿಸಿದ್ದಳು" ಎಂದು ಚಿರು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಆಮಿರ್ ಜೊತೆ ಸಿನಿಮಾ ಸಾಧ್ಯವಿಲ್ಲ- ಚಿರು
ಇನ್ನು ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಸೂಪರ್ ಸ್ಟಾರ್‌ಗಳು ಹಂಚಿಕೊಂಡಿದ್ದಾರೆ. ಆಮಿರ್ ಖಾನ್‌ನ ಯಾವುದೇ ಸಿನಿಮಾ ರಿಮೇಕ್ ಮಾಡೋದಿಲ್ಲ ಎಂದ ಚಿರು, ಅವರ ನಿರ್ದೇಶನದಲ್ಲಿ ನಟಿಸೋದು ಕಷ್ಟ ಅಂತಲೂ ಹೇಳಿದರು. ಆದರೆ ಆಮಿರ್ ಮಾತ್ರ ಎರಡು ವರ್ಷಗಳಿಂದ ನಿಮ್ಮೊಟ್ಟಿಗೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ನಿರ್ದೇಶನ ಅಥವಾ ನಿರ್ಮಾಣದಲ್ಲಿ ನಿಮ್ ಜೊತೆ ಸಿನಿಮಾ ಮಾಡ್ತೀನಿ ಎಂದರು. ಆಮಿರ್ ನಿರ್ದೇಶನದಲ್ಲಿ ಶಾಟ್ ಒಂದೇ ಟೇಕ್‌ಗೆ ಓಕೆ ಮಾಡುವುದು ಕಷ್ಟ ಎಂದು ಚಿರು ತಮಾಷೆ ಮಾಡಿದ್ದಾರೆ.

ಆಗಸ್ಟ್ 11ಕ್ಕೆ ಸಿನಿಮಾ ತೆರೆಗೆ
ಅದ್ವೈತ್ ಚಂದನ್ ನಿರ್ದೇಶನದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಆಮಿರ್ ಖಾನ್ ಜೋಡಿಯಾಗಿ ಕರೀನಾ ಕಪೂರ್ ಬಣ್ಣ ಹಚ್ಚಿದ್ದಾರೆ. ತೆಲುಗು ನಟ ನಾಗಚೈತನ್ಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಆಗಸ್ಟ್ 11ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಿಲಿದೆ.

'ಫಾರೆಸ್ಟ್ ಗಂಪ್' ರೀಮೇಕ್
1994ರಲ್ಲಿ ಹಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿದ್ದ 'ಫಾರೆಸ್ಟ್ ಗಂಪ್' ಸಿನಿಮಾ ರೀಮೇಕ್ 'ಲಾಲ್ ಸಿಂಗ್ ಚಡ್ಡಾ'. 12 ವರ್ಷಗಳಿಂದ ಈ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ ಆಮಿರ್ ಖಾನ್. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಲಾಲ್ ಸಿಂಗ್ ಚಡ್ಡಾ' ಆಗಿ ಮಿಸ್ಟರ್ ಪರ್ಫೆಕ್ಷನಿಷ್ಟ್ ಮತ್ತೆ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.