Don't Miss!
- Technology
ಮೂರು ಹೊಸ JioFi ರೀಚಾರ್ಜ್ ಪ್ಲ್ಯಾನ್ ಲಾಂಚ್: ಏನೆಲ್ಲಾ ಪ್ರಯೋಜನಗಳು ಲಭ್ಯ?
- Education
CUK Recruitment 2022 : 61 ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಮುಂಬರುವ 5 ದಿನಗಳ ಕಾಲ ದೆಹಲಿಯ ಜನರಿಗೆ ಬಿಸಿಲಿನ ತಾಪದಿಂದ ಮುಕ್ತಿ
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಆಚಾರ್ಯ' ನಷ್ಟ ತುಂಬಲು ಚಿರಂಜೀವಿ ಸಿದ್ಧ: ವಿತರಕರಿಗೆ ಗುಡ್ ನ್ಯೂಸ್!
'ಆಚಾರ್ಯ' ಸಿನಿಮಾ ಸಾಕಷ್ಟು ನಿರೀಕ್ಷೆಯ ಜೊತೆಗೆ ತೆರೆಗೆ ಬಂತು. ಚಿತ್ರದಲ್ಲಿ ರಾಮ್ ಚರಣ್, ಚಿರಂಜೀವಿ ಇದ್ದಾರೆ ಅಂದ್ಮೇಲೆ ಅದು ಮೆಗಾ ಕುಟುಂಬದ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಲವು ವರ್ಷಗಳ ನಂತರ ತಂದೆ, ಮಗ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಒಂದು ರೇಂಜಿಗೆ ಇರುತ್ತೆ ಎನ್ನಲಾಗಿತ್ತು. ಆದರೆ ಚಿತ್ರ ರಿಲೀಸ್ ಆದ ಬಳಿಕ ಎಲ್ಲವೂ ಉಲ್ಟಾ ಆಗಿದೆ.
ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ದೊಡ್ಡ ನಷ್ಟವನ್ನು ಅನುಭವಿಸಿದೆ. ಸಿನಿಮಾ ವಿತರಕರಿಗೆ ಅರ್ಧದಷ್ಟು ಸಹ ಹಣ ವಾಪಸ್ಸಾಗಿಲ್ಲ. ಕರ್ನಾಟಕ ಸೇರಿದಂತೆ, ಆಂಧ್ರ-ತೆಲಂಗಾಣದ ಸಿನಿಮಾ ವಿತರಕರು ತಮಗೆ ನಷ್ಟ ಪರಿಹಾರ ನೀಡಬೇಕೆಂದು ನಟ ಚಿರಂಜೀವಿ ಹಾಗೂ ನಿರ್ಮಾಪಕ ಆಗಿರುವ ರಾಮ್ ಚರಣ್‌ಗೆ ಪತ್ರ ಬರೆದಿದ್ದರು.
'ಆಚಾರ್ಯ'
ಸಿನಿಮಾ
ಸೋಲಿಗೆ
ರಾಜಮೌಳಿ
ಕಾರಣ
ಅಂತೆ!
ವಿತರಕರ ಕರೆಗೆ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಸ್ಪಂದಿಸಲು ಯೋಚನೆ ನಡೆಸಿದ್ದಾರೆ. ತಮ್ಮ ಚಿತ್ರದಿಂದ ಆದ ನಷ್ಟವನ್ನು ತುಂಬಿ ಕೊಡಲು ಚಿರಂಜೀವಿ ಹಿಂದೇಟು ಹಾಕುತ್ತಿಲ್ಲ. ಅತಿ ಹೆಚ್ಚು ನಷ್ಟ ಆದವರಿಗೆ, ಸಹಾಯ ಮಾಡಲು ಚಿರಂಜೀವಿ ಮತ್ತು ರಾಮ್ ಚರಣ್ ಮುಂದಾಗಿದ್ದಾರೆ.

ಅಮೆರಿಕದಿಂದ ಬಂದ ಕೂಡಲೆ ಸೆಟಲ್ಮೆಂಟ್!
'ಆಚಾರ್ಯ' ಸಿನಿಮಾ ಬಿಡುಗಡೆಯಾದ ನಂತರ, ಚಿರಂಜೀವಿ ಮೇ ಮೊದಲ ವಾರದಲ್ಲಿ ಪತ್ನಿ ಸುರೇಖಾ ಜೊತೆ ಯುಎಸ್‌ಗೆ ಹೊರಟರು. ಪ್ರಸ್ತುತ ಕುಟುಂಬದೊಂದಿಗೆ ಅಲ್ಲೇ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ಇತ್ತ ಆಚಾರ್ಯ ವಿತರಕರು ಭಾರೀ ನಷ್ಟವನ್ನು ಅನುಭವಿಸುತ್ತಿದ್ದು, ಚಿಂಜೀವಿಗೆ ಬಹಿರಂಗ ಪತ್ರ ಬರೆದಿದ್ದು ಅವರ ಗಮನಕ್ಕೆ ಬಂದಿದೆಯಂತೆ ಹಾಗಾಗಿ ಈ ವಿಚಾರದಲ್ಲಿ ಸಹಾಯ ಮಾಡಲು ಚಿರು ಯೋಚಿಸಿದ್ದಾರೆ ಎಂದು ವರದಿ ಆಗಿದೆ.
ಹೀನಾಯ
ಸೋಲು
ಕಂಡ
'ಆಚಾರ್ಯ':
ಆಗಿರುವ
ನಷ್ಟ
ಎಷ್ಟು?

ಕೆಲವು ವಿತರಕರಿಗೆ ಮಾತ್ರ ಚಿರಂಜೀವಿ ನೆರವು!
ಜೂನ್ ಮೊದಲ ವಾರದಲ್ಲಿ ಚಿರು ಪ್ರವಾಸದಿಂದ ವಾಪಸಾಗಲಿದ್ದಾರಂತೆ. ಆಚಾರ್ಯ ಸಿನಿಮಾ ಕೆಲವು ಕಡೆಗಳಲ್ಲಿ ಅತಿ ಹೆಚ್ಚು ನಷ್ಟ ಕಂಡಿದೆ. ಎಲ್ಲೆಲ್ಲಿ ಹೆಚ್ಚಿನ ನಷ್ಟವನ್ನು ವಿತರಕರನ್ನು ಅನುಭವಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆದು. ಅಂತಹ ವಿತರಕರಿಗೆ ಸಹಾಯ ಮಾಡಲು ಚಿರಂಜೀವಿ ಮತ್ತು ರಾಮ್ ಚರಣ್ ಮುಂದಾಗಿದ್ದಾರಂತೆ.

ಆಚಾರ್ಯ ಬಂಡವಾಳ ವಾಪಸ್ಸಾಗಿಲ್ಲ!
ಸಿನಿಮಾದ ಒಟ್ಟು ಬಂಡವಾಳ 132 ಕೋಟಿ ರೂ. ಆದರೆ ಈ ವರೆಗೆ ವಿತರಕರಿಗೆ ಒಟ್ಟಾರೆಯಾಗಿ ವಾಪಸ್ಸು ಬಂದಿರುವುದು ಬಹಳ ಕಡಿಮೆ ಮೊತ್ತ. ಇನ್ನೂ 85 ಕೋಟಿ ರೂ ನಷ್ಟದಲ್ಲಿ ಸಿನಿಮಾ. ಸಿನಿಮಾಗೆ ಹಾಕಿದ ಬಂಡವಾಳ ವಾಪಸ್ಸು ಬರಬೇಕೆಂದರೆ ಇನ್ನೂ 85 ಕೋಟಿಗಳಷ್ಟು ಕಲೆಕ್ಷನ್ ಮಾಡಬೇಕಿದೆ. ಆದರೆ ಇದು ಅಸಾಧ್ಯ. ಈಗಾಗಲೇ ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಆಗಿದೆ.
'ಆಚಾರ್ಯ'
100
ಕೋಟಿ
ಲಾಸ್:
ಚಿರಂಜೀವಿ,
ರಾಮ್
ಚರಣ್
ಎಡವಿದ್ರಾ?

ಸಾಲು ಸಾಲು ಸಿನಿಮಾಗಳಲ್ಲಿ ಚಿರು ಬ್ಯುಸಿ!
ನಟ ಚಿರಂಜೀವಿ ಪ್ರಸ್ತುತ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನ 'ಲೂಸಿಫರ್' ಸಿನಿಮಾದ ರೀಮೇಕ್ 'ಗಾಡ್ ಫಾದರ್'ನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳು ಸಿನಿಮಾದ ರೀಮೇಕ್ 'ಭೋಲಾ ಶಂಕರ್'ನಲ್ಲಿ ನಟಿಸುತ್ತಿದ್ದಾರೆ. ಬಳಿಕ ಕೆ.ಎಸ್.ರವೀಂದ್ರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರಗಳು ಹೆಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿವೆ ಎನ್ನುವ ಬಗ್ಗೆ ಪ್ರಶ್ನೆ ಎದ್ದಿದೆ.