For Quick Alerts
  ALLOW NOTIFICATIONS  
  For Daily Alerts

  ಇದ್ದಕ್ಕಿದ್ದಂತೆ ಟ್ವಿಟ್ಟರ್‌ನಿಂದ ದೂರವಾದರೇಕೆ ಮೆಗಾಸ್ಟಾರ್ ಚಿರಂಜೀವಿ

  |

  ಮೆಗಾಸ್ಟಾರ್ ಚಿರಂಜೀವಿ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು.

  Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

  ತೆಲುಗು ಸಿನಿರಂಗ, ರಾಜಕೀಯ, ಸಮಕಾಲೀನ, ಕಿರಿಯ ಸಿನಿಉದ್ಯಮಿಗಳ, ನಟ-ನಟಿಯರ ಹುಟ್ಟುಹಬ್ಬಕ್ಕೆ ಯಾವುದೇ ಹಮ್ಮು-ಬಿಮ್ಮು ಪ್ರದರ್ಶಿಸದೆ ಶುಭಕೋರುವ ಅಭ್ಯಾಸವನ್ನು ಚಿರಂಜೀವಿ ಇಟ್ಟುಕೊಂಡಿದ್ದರು.

  ಅಂದು ಮೆಗಾಸ್ಟಾರ್ ಗೆ ನಾಯಕಿಯಾಗಿದ್ದ ಸುಹಾಸಿನಿ ಇಂದು ಸಹೋದರಿಯಾಗಿ ನಟಿಸುತ್ತಿದ್ದಾರೆಅಂದು ಮೆಗಾಸ್ಟಾರ್ ಗೆ ನಾಯಕಿಯಾಗಿದ್ದ ಸುಹಾಸಿನಿ ಇಂದು ಸಹೋದರಿಯಾಗಿ ನಟಿಸುತ್ತಿದ್ದಾರೆ

  ಸಿನಿಮಾ ಬಗ್ಗೆ ಮಾಹಿತಿ, ಮೊಮ್ಮಕಳೊಂದಿಗೆ ಕಳೆದ ಸಮಯ ಕೆಲವೊಮ್ಮೆ ಹಳೆಯ ಚಿತ್ರಗಳನ್ನು ಚಿರಂಜೀವಿ ಟ್ವಿಟ್ಟರ್‌ನಲ್ಲಿ ಪ್ರಕಟಿಸುತ್ತಿದ್ದರು. ಅಭಿಮಾನಿಗಳು, ಆಪ್ತ ಗೆಳೆಯರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸುವ ಅಭ್ಯಾಸವನ್ನೂ ಇಟ್ಟುಕೊಂಡಿದ್ದರು ಚಿರಂಜೀವಿ ಆದರೆ ಇದ್ದಕ್ಕಿದ್ದಂತೆ ಚಿರಂಜೀವಿ ಅವರು ಟ್ವಿಟ್ಟರ್‌ನಿಂದ ದೂರ ಉಳಿದಿದ್ದಾರೆ. ಇದು ಎಲ್ಲ ಆಶ್ಚರ್ಯಕ್ಕೆ ಕಾರಣವಾಗಿದೆ.

  ಟ್ವಿಟ್ಟರ್ ಬಳಕೆ ನಿಲ್ಲಿಸಿರುವ ಚಿರಂಜೀವಿ

  ಟ್ವಿಟ್ಟರ್ ಬಳಕೆ ನಿಲ್ಲಿಸಿರುವ ಚಿರಂಜೀವಿ

  ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದ ಚಿರಂಜೀವಿ ಅವರು ಏಕಾಏಕಿ ಟ್ವಿಟ್ಟರ್‌ ಬಳಕೆಯನ್ನು ನಿಲ್ಲಿಸಿಬಿಟ್ಟಿದ್ದಾರೆ. ಜೂನ್ 21 ರಂದು ಚಿರಂಜೀವಿ ಕೊನೆಯದಾಗಿ ಟ್ವೀಟ್ ಮಾಡಿದ್ದಾರೆ. ಅದಾದ ಮೇಲೆ ಒಂದೇ ಒಂದು ಟ್ವೀಟ್ ಸಹ ಅವರು ಮಾಡಿಲ್ಲ.

  ಏಕಾ-ಏಕಿ ಟ್ವಟ್ಟರ್‌ನಿಂದ ದೂರ ಉಳಿದಿದ್ದಾರೆ

  ಏಕಾ-ಏಕಿ ಟ್ವಟ್ಟರ್‌ನಿಂದ ದೂರ ಉಳಿದಿದ್ದಾರೆ

  ಅದಕ್ಕೆ ಮುನ್ನಾ ಸಾಕಷ್ಟು ಟ್ವೀಟ್‌ಗಳನ್ನು ಚಿರಂಜೀವಿ ಮಾಡುತ್ತಿದ್ದರು. ಹೀಗೆ ಏಕಾ-ಏಕಿ ಟ್ವಿಟ್ಟರ್‌ನಿಂದ ದೂರ ಉಳಿಯಲು ಕಾರಣವೇನು ಎಂಬುದು ತಿಳಿಯದಾಗಿದೆ. ಚಿರಂಜೀವಿ ಅವರು ಟ್ವೀಟ್‌ ಖಾತೆ ಡಿಲೀಟ್ ಮಾಡಿಲ್ಲ, ಬದಲಿಗೆ ಅದನ್ನು ಬಳಸುತ್ತಿಲ್ಲವಷ್ಟೆ.

  ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ: ಚಿರಂಜೀವಿ ತಮ್ಮನ ಮಗಳ ಭಾವಿ ಪತಿ ಇವರೇಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ: ಚಿರಂಜೀವಿ ತಮ್ಮನ ಮಗಳ ಭಾವಿ ಪತಿ ಇವರೇ

  ಬೇರೆ ಕಾರ್ಯಗಳಲ್ಲಿ ಬ್ಯುಸಿಯಾದ ಚಿರಂಜೀವಿ

  ಬೇರೆ ಕಾರ್ಯಗಳಲ್ಲಿ ಬ್ಯುಸಿಯಾದ ಚಿರಂಜೀವಿ

  ಆ ನಂತರ ಲಾಕ್‌ಡೌನ್ ಹಂತ-ಹಂತವಾಗಿ ತೆಗೆದ ಕಾರಣ ಚಿರಂಜೀವಿ ಅವರು ಸಿನಿಮಾ ಸಂಬಂಧಿ ಕಾರ್ಯಗಳಲ್ಲಿ ಹಾಗೂ ಸಿನಿಮಾ ಚಿತ್ರೀಕರಣ ಪುನರ್‌ ಪ್ರಾರಂಭಿಸಲು ಸರ್ಕಾರಗಳೊಂದಿಗೆ ಮಾತನಾಡುವ ಜವಾಬ್ದಾರಿ ಹೊತ್ತುಕೊಂಡರು ಹಾಗಾಗಿ ಟ್ವಿಟ್ಟರ್‌ನಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

  ಟ್ವಿಟ್ಟರ್‌ ಮೇಲೆ ಆಸಕ್ತಿ ಕಳೆದುಕೊಂಡರೆ?

  ಟ್ವಿಟ್ಟರ್‌ ಮೇಲೆ ಆಸಕ್ತಿ ಕಳೆದುಕೊಂಡರೆ?

  ಮತ್ತೊಂದು ಮಾಹಿತಿ ಪ್ರಕಾರ, ಚಿರಂಜೀವಿ ಅವರು ಹೊಸದಾಗಿ ಟ್ವಿಟ್ಟರ್‌ಗೆ ಬಂದಿದ್ದರು, ಹೊಸದರಲ್ಲಿ ಸಾಕಷ್ಟು ಬಾರಿ ಆಪ್ ಅನ್ನು ಬಳಸಿದರು, ಆದರೆ ದಿನಗಳೆದಂತೆ ಟ್ವಿಟ್ಟರ್‌ ಮೇಲೆ ಆಸಕ್ತಿ ಕಳೆದುಕೊಂಡರು. ಇದು ಎಲ್ಲರಿಗೂ ಆಗುತ್ತದೆ ಎನ್ನುತ್ತಾರೆ ಕೆಲವರು.

  ದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿ

  English summary
  Megastar Chiranjeevi not using twitter account from many days. Early days he use do lot of tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X