For Quick Alerts
  ALLOW NOTIFICATIONS  
  For Daily Alerts

  ಸೊಸೆಯನ್ನು ಹೊಗಳಿದ ಚಿರಂಜೀವಿ, ರಾಮ್‌ ಚರಣ್‌ಗೆ ಚಿಕ್ಕಪ್ಪ ಪವನ್ ಶಹಭಾಸ್

  |

  ಮೆಗಾಸ್ಟಾರ್ ಚಿರಂಜೀವಿ ತಮ್ಮ ಸೊಸೆ ಉಪಾಸನ ಮಾಡಿದ ಕಾರ್ಯವನ್ನು ಮನಸ್ಸಾರೆ ಹೊಗಳಿದ್ದಾರೆ. ಮತ್ತೊಂದೆಡೆ ಪವನ್ ಕಲ್ಯಾಣ್ ಅವರು ಅಣ್ಣನ ಮಗ ರಾಮ್ ಚರಣ್ ಕಾರ್ಯವನ್ನು ಶ್ಲಾಘಿಸಿದ್ದಾರೆ.

  ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

  ಹೌದು, ಚಿರಂಜೀವಿ, ತಮ್ಮ ಸೊಸೆ ರಾಮ್‌ ಚರಣ್ ಪತ್ನಿ ಉಪಾಸನಾ ಬಗ್ಗೆ ಬಹಿರಂಗವಾಗಿ ಹೆಚ್ಚು ಮಾತನಾಡಿರುವುದು ಕಡಿಮೆಯೇ. ಆದರೆ ಈಗ ಟ್ವಿಟ್ಟರ್‌ ನಲ್ಲಿ ಸೊಸೆ ಉಪಾಸನಾಳನ್ನು ಹೊಗಳಿದ್ದಾರೆ ಮೆಗಾಸ್ಟಾರ್.

  ಇನ್ನೊಂದೆಡೆ ಚಿರಂಜೀವಿ ಪುತ್ರ ರಾಮ್ ಚರಣ್ ಕಾರ್ಯವನ್ನು ನಟ, ರಾಜಕಾರಣಿ ಪವನ್ ಕಲ್ಯಾಣ್ ಶ್ಲಾಘಿಸಿದ್ದಾರೆ. ಕೆಲವೇ ವರ್ಷಗಳ ಹಿಂದೆಯಷ್ಟೆ ಪರಸ್ಪರ ಹೆಸರು ಸಹ ಹೇಳದಿದ್ದವರು ಇಂದು ಒಬ್ಬರನ್ನೊಬ್ಬರು ಹೊಗಳಿಕೊಳ್ಳುತ್ತಿದ್ದಾರೆ.

  ಸೊಸೆ ಉಪಾಸನಾರನ್ನು ಹೊಗಳಿದ ಚಿರಂಜೀವಿ

  ಸೊಸೆ ಉಪಾಸನಾರನ್ನು ಹೊಗಳಿದ ಚಿರಂಜೀವಿ

  ಚಿರಂಜೀವಿ ತಮ್ಮ ಸೊಸೆ ಉಪಾಸನಾ ಮಾಡಿರುವ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಪೋಲೋ ಗ್ರೂಫ್‌ನ ಮಾಲಕಿಯೂ ಆಗಿರುವ ಉಪಾಸನಾ, ದಿನಗೂಲಿ ನೌಕರರಿಗೆ, ಬಡವರಿಗೆ ಅಪೋಲೋ ಔಷಧ ಕೇಂದ್ರದಲ್ಲಿ ಉಚಿತವಾಗಿ ಔಷಧ ನೀಡುವಂತೆ ಆದೇಶ ಹೊರಡಿಸಿದ್ದಾರೆ.

  ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸೋಣ ಎಂದಿದ್ದ ತೇಜ

  ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸೋಣ ಎಂದಿದ್ದ ತೇಜ

  ಮೋದಿ ನೀಡಿರುವ ಕರೆಯಂತೆ ದೀಪಗಳನ್ನು ಹಚ್ಚಿ, ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸೋಣ ಎಂದು ರಾಮ್‌ ಚರಣ್ ತೇಜ ಅವರು ವಿಡಿಯೋ ಮಾಡಿದ್ದರು. ಇದಕ್ಕೆ ಪವನ್ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ರಾಮಚರಣ್‌ ಗೆ ಚಿಕ್ಕಪ್ಪನ ಶಹಭಾಸ್ ಗಿರಿ

  ರಾಮಚರಣ್‌ ಗೆ ಚಿಕ್ಕಪ್ಪನ ಶಹಭಾಸ್ ಗಿರಿ

  ''ಮೋದಿ ನೀಡಿರುವ ಕರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವುದಕ್ಕೆ ರಾಮ್‌ ಚರಣ್ ತೇಜ ಅವರಿಗೆ ಧವ್ಯವಾದಗಳು'' ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಅನ್ನು ಬಿ.ಎಲ್.ಸಂತೋಶ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

  ಪರಸ್ಪರ ಅಸಮಾಧಾನ ಹೊರಹಾಕಿದ್ದ ಅಣ್ಣ-ತಮ್ಮಂದಿರು

  ಪರಸ್ಪರ ಅಸಮಾಧಾನ ಹೊರಹಾಕಿದ್ದ ಅಣ್ಣ-ತಮ್ಮಂದಿರು

  ಕೆಲವು ವರ್ಷಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಹೋದರ ಪವರ್ ಸ್ಟಾರ್ ಪವನ್ ಕಲ್ಯಾಣ್ ನಡುವೆ ಮುನಿಸು ಏರ್ಪಟ್ಟಿತ್ತು. ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಇಬ್ಬರೂ ತಮ್ಮ-ತಮ್ಮ ಅಸಮಾಧಾನಗಳನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ರಾಮ್‌ ಚರಣ್ ತೇಜ ಸಹ ಆಗ ಚಿಕ್ಕಪ್ಪನ ವಿರುದ್ಧ ತೀಕ್ಷ್ಣವಾಗಿ ಮಾತನಾಡಿದ್ದರು.

  ಈಗ ಎಲ್ಲವೂ ಸರಿಯಾಗಿದೆ

  ಈಗ ಎಲ್ಲವೂ ಸರಿಯಾಗಿದೆ

  ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಚಿರಂಜೀವಿ ರಾಜಕೀಯದಿಂದ ದೂರ ಸರಿದು, ಈಗ ಪವನ್ ಕಲ್ಯಾಣ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಹಿಂದೆ ಇದ್ದ ಮುನಿಸುಗಳೆಲ್ಲಾ ದೂರಾಗಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಇದ್ದಾರೆ.

  English summary
  Megastar Chiranjeevi praised Daughter in law Upasana for giving free medicine in Apollo medical shops.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X