twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ: ಚಿರಂಜೀವಿ ಕಾಲು ಹಿಡಿದುಕೊಂಡು ಕಣ್ಣೀರು ಹಾಕಿದ ನಟ

    |

    ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಉದ್ಯಮಕ್ಕೆ ಹಿರಿಯರು, ಉದ್ಯಮದ ಹಿರಿಯ, ಕಿರಿಯ ನಟರೊಟ್ಟಿಗೆ ಒಳ್ಳೆಯ ಬಾಂಧವ್ಯ ಹೊಂದಿರುವ ಚಿರಂಜೀವಿ, ನಟ-ನಟಿಯರ ಕಷ್ಟ-ಸುಖಗಳಿಗೆ ಕುಟುಂಬದ ಹಿರಿಯರಂತೆ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಾರೆ.

    ಇದೀಗ ತೆಲುಗಿನ ಜನಪ್ರಿಯ ಪೋಷಕ ನಟ ಉತ್ತೇಜ್‌ರ ಪತ್ನಿ ಪದ್ಮಾವತಿ ಕ್ಯಾನ್ಸರ್‌ನಿಂದ ಅಸುನೀಗಿದ್ದು, ಉತ್ತೇಜ್ ಮನೆಗೆ ತೆರಳಿ ನಟನಿಗೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಚಿರು.

    ಚಿರಂಜೀವಿ ಮನೆಗೆ ಭೇಟಿ ನೀಡಿದ ವೇಳೆ ತೀರ ಭಾವುಕರಾದ ನಟ ಉತ್ತೇಜ್, ಚಿರಂಜೀವಿ ಕಾಲ ಬಳಿ ಕುಳಿತುಕೊಂಡು, ಕಾಲು ಹಿಡಿದುಕೊಂಡು ಕಣ್ಣೀರು ಹಾಕಿದ್ದಾರೆ. ನಟ ಚಿರಂಜೀವಿ ಉತ್ತೇಜ್‌ರ ಬೆನ್ನು ತಡವುತ್ತಾ ಸಮಾಧಾನ ಹೇಳುವ ಯತ್ನ ಮಾಡುತ್ತಿದ್ದಾರೆ. ಸ್ವತಃ ಚಿರಂಜೀವಿ ಸಹ ಭಾವುಕರಾಗಿದ್ದಾರೆ. 'ಅನ್ನಯ್ಯ, ಅನ್ನಯ್ಯ' ಎನ್ನುತ್ತಾ ಚಿರಂಜೀವಿ ಕಾಲು ಹಿಡಿದುಕೊಂಡು ಉತ್ತೇಜ್ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಾಯಿ ಕಳೆದುಕೊಂಡ ದುಃಖದಲ್ಲಿ ಅಳುತ್ತಿದ್ದ ಉತ್ತೇಜ್ ಮಗಳನ್ನು ಅಪ್ಪಿಕೊಂಡು ಆಕೆಗೂ ಸಾಂತ್ವನ ಹೇಳಿದ್ದಾರೆ ನಟ ಚಿರಂಜೀವಿ. ಉತ್ತೇಜ್ ಮನೆಗೆ ನಟ ಪ್ರಕಾಶ್ ರಾಜ್ ಹಾಗೂ ಇನ್ನೂ ಕೆಲವು ನಟರು ಸಾಂತ್ವನ ಹೇಳಲು ಹೋಗಿದ್ದರು. ಈ ಸಮಯದಲ್ಲಿ ಪ್ರಕಾಶ್ ರಾಜ್ ಸಹ, ತಮ್ಮ ಸಹೋದ್ಯೋಗಿ ನಟನ ದುಃಖ ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಜೀವಿತಾ ರಾಜಶೇಖರ್ ಸಹ ಈ ಸಮಯದಲ್ಲಿ ಹಾಜರಿದ್ದರು, ಅವರು ಉತ್ತೇಜ್ ಮಗಳನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.

    ಆರ್ಥಿಕ ಸಹಾಯ ಮಾಡಿದ್ದ ಚಿರಂಜೀವಿ

    ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಉತ್ತೇಜ್, ಚಿರಂಜೀವಿ ನಟಿಸಿರುವ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮಯೂಖಾ ಟಾಕೀಸ್ ಫಿಲ್ಮ್ ಆಕ್ಟಿಂಗ್ ಸ್ಕೂಲ್ ಸ್ಥಾಪಿಸಿರುವ ಉತ್ತೇಜ್‌. ಆ ಶಾಲೆಯ ವ್ಯವಹಾರವನ್ನು ಪತ್ನಿ ಪದ್ಮಾವತಿ ನೋಡಿಕೊಳ್ಳುತ್ತಿದ್ದರು. ಆದರೆ ಕ್ಯಾನ್ಸರ್‌ಗೆ ತುತ್ತಾದ ಅವರನ್ನು ಬಸವತಾರಕಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಉತ್ತೇಜ್‌ಗೆ ಚಿರಂಜೀವಿ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಹಲವು ನಟ-ನಟಿಯರು ಸಾಂತ್ವನ ಹೇಳಿದ್ದಾರೆ

    ಸೆಪ್ಟೆಂಬರ್ 13 ರಂದು ಬೆಳಿಗ್ಗೆ ಉತ್ತೇಜ್ ಪತ್ನಿ ಬಸವತಾರಕಂ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಮಧ್ಯಾಹ್ನ 1:30 ಸಮಯಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಚಿರಂಜೀವಿ, ಪ್ರಕಾಶ್ ರೈ, ಜೀವಿತಾ ರಾಜಶೇಖರ್ ಮಾತ್ರವೇ ಅಲ್ಲದೆ ಹಲವಾರು ಮಂದಿ ಸಿನಿಮಾ ನಟ-ನಟಿಯರು ಉತ್ತೇಜ್‌ಗೆ ಸಾಂತ್ವಾನ ಹೇಳಿದ್ದಾರೆ.

    ಚುನಾವಣೆಗೆ ನಿಂತವರು ಉತ್ತೇಜ್‌ ಅನ್ನು ಭೇಟಿ ಮಾಡಿದ್ದಾರೆ

    ಚುನಾವಣೆಗೆ ನಿಂತವರು ಉತ್ತೇಜ್‌ ಅನ್ನು ಭೇಟಿ ಮಾಡಿದ್ದಾರೆ

    ನಟ ಪ್ರಕಾಶ್ ರೈ ತೆಲುಗಿನ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರಕಾಶ್ ರೈಗೆ ನಟ ಚಿರಂಜೀವಿ ಹಾಗೂ ಅವರ ಕುಟುಂಬದ ಬೆಂಬಲ ಸಿಕ್ಕಿದೆ. ಪ್ರಕಾಶ್ ರೈ ಸಹ ಗೆದ್ದೇ ತೀರಲು ಹಲವು ಯತ್ನಗಳನ್ನು ಮಾಡುತ್ತಿದ್ದಾರೆ. ಉತ್ತೇಜ್‌ಗೆ ಸಾಂತ್ವನ ಹೇಳಲು ಬಸವಕಲ್ಯಾಣ್ ಆಸ್ಪತ್ರೆಗೆ ಚಿರಂಜೀವಿ ತೆರಳಿದ್ದ ವೇಳೆ ಪ್ರಕಾಶ್ ರೈ ಹಾಗೂ ಅವರ ಸಿಂಡಿಕೇಟ್‌ನ ಕೆಲವರು ಅಲ್ಲಿಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಪ್ರಕಾಶ್ ರೈ ಎದುರಾಳಿ ಸ್ಪರ್ಧಿಗಳಾದ ಮಂಚು ವಿಷ್ಣು ಹಾಗೂ ಬಳಗ ಉತ್ತೇಜ್‌ ಕುಟುಂಬವನ್ನು ಭೇಟಿಮಾಡಿದಂತಿಲ್ಲ.

    ಪ್ರಕಾಶ್ ರೈ ಸಿಂಡಿಕೇಟ್‌ನಲ್ಲಿ ಯಾರ್ಯಾರಿದ್ದಾರೆ?

    ಪ್ರಕಾಶ್ ರೈ ಸಿಂಡಿಕೇಟ್‌ನಲ್ಲಿ ಯಾರ್ಯಾರಿದ್ದಾರೆ?

    ಮಾ ಚುನಾವಣೆಯು ಅಕ್ಟೋಬರ್ 10ರಂದು ನಡೆಯಲಿದ್ದು, ಪ್ರಕಾಶ್ ರೈ ಸಿಂಡಿಕೇಟ್‌ನಲ್ಲಿ ಹಲವು ನಟನಟಿಯರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಪ್ರಕಾಶ್ ಸಿಂಡಿಕೇಟ್‌ನಿಂದ ಸ್ಪರ್ಧಿಸುತ್ತಿದ್ದಾರೆ.

    English summary
    Telugu actor Uttej's wife passed away. Chiranjeevi met Uttej at hospital and solace him along with Prakash Raj, Jeevitha Rajshekhar and others.
    Monday, September 13, 2021, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X