For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಮುಖ್ಯ ಪಾತ್ರದಲ್ಲಿ ಖ್ಯಾತ ನಟ?

  |

  ಇತ್ತೀಚೆಗಷ್ಟೆ ಘೋಷಣೆ ಆಗಿರುವ ಪ್ರಭಾಸ್ ಹೊಸ ಸಿನಿಮಾ 'ಸಲಾರ್' ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಕಾರಣ ಸಿನಿಮಾದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

  'ಸಲಾರ್' ಸಿನಿಮಾದ ಪ್ರಭಾಸ್ ಅಷ್ಟೆ ಮತ್ತೊಂದು ಪ್ರಮುಖ ಪಾತ್ರವಿದ್ದು, ಈ ಪಾತ್ರದಲ್ಲಿ ದಕ್ಷಿಣ ಸಿನಿರಂಗದ ಸೂಪರ್ ಸ್ಟಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  'ಸಲಾರ್' ಹೆಸರು ವಿವಾದ: ಸ್ಪಷ್ಟನೆ ಕೊಟ್ಟ ಪ್ರಶಾಂತ್ ನೀಲ್'ಸಲಾರ್' ಹೆಸರು ವಿವಾದ: ಸ್ಪಷ್ಟನೆ ಕೊಟ್ಟ ಪ್ರಶಾಂತ್ ನೀಲ್

  ಹೌದು, ಮಲಯಾಳಂ ನ ಖ್ಯಾತ ನಟ ಮೋಹನ್‌ಲಾಲ್ ಸಹ ಸಲಾರ್ ಸಿನಿಮಾದಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ. ಪ್ರಭಾಸ್ ನ ಬಾಸ್ ಪಾತ್ರದಲ್ಲಿ ಮೋಹನ್‌ಲಾಲ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  Mohanlal To Act In Prabhas Starer Salaar Movie

  ನಿರ್ದೇಶಕ ಪ್ರಶಾಂತ್ ನೀಲ್ ಹೇಳಿರುವಂತೆ, 'ಸಲಾರ್' ಎಂದರೆ ಅರಸನ ಬಲಗೈಭಂಟ ಅಥವಾ ಸೇನಾಧಿಪತಿ ಎಂದರ್ಥ. ಈಗ ಮೋಹನ್‌ಲಾಲ್ ಆ ಅರಸನ ಅಥವಾ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾನ್‌ನ ಬಲಗೈ ಭಂಟನ ಪಾತ್ರ ಪ್ರಭಾಸ್ ರದ್ದಾಗಿರುತ್ತದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

  Darshan ಕಷ್ಟದ ದಿನಗಳ ಬಗ್ಗೆ ಹೇಳಿದ Mandya Ramesh | Filmibeat Kannada

  'ಸಲಾರ್' ಸಿನಿಮಾ; ಈ ಇಬ್ಬರು ಸ್ಟಾರ್ ನಟಿಯರಲ್ಲಿ ಯಾರಾಗಲಿದ್ದಾರೆ ಪ್ರಭಾಸ್ ಗೆ ನಾಯಕಿ?'ಸಲಾರ್' ಸಿನಿಮಾ; ಈ ಇಬ್ಬರು ಸ್ಟಾರ್ ನಟಿಯರಲ್ಲಿ ಯಾರಾಗಲಿದ್ದಾರೆ ಪ್ರಭಾಸ್ ಗೆ ನಾಯಕಿ?

  ಇನ್ನು ಸಲಾರ್ ಸಿನಿಮಾದ ನಟಿಯರ ಬಗ್ಗೆಯೂ ಚರ್ಚೆ ಜೋರಾಗಿ ನಡೆಯುತ್ತಿದ್ದು, ಬಾಲಿವುಡ್‌ನ ಇಬ್ಬರು ಬೆಡಗಿಯರ ಹೆಸರು ಮುಂಚೂಣಿಯಲ್ಲಿದೆ. ಸಾರಾ ಅಲಿ ಖಾನ್ ಅಥವಾ ದಿಶಾ ಪಟಾನಿ ಇಬ್ಬರಲ್ಲಿ ಯಾರಾದರೂ ಒಬ್ಬರು ಪ್ರಭಾಸ್‌ಗೆ ನಾಯಕಿ ಆಗಲಿದ್ದಾರೆ.

  English summary
  Malayalam super star Mohanlal to act in Prabhas starer Salaar movie. Prashanth Neel directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X