Just In
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಲ್ಲು ಅರ್ಜುನ್ ಬಳಿ ಇರುವ ಅತ್ಯಂತ ದುಬಾರಿ ಫ್ಯಾಷನ್ ವಸ್ತು ಯಾವುದು?
ಅಲ್ಲು ಅರ್ಜುನ್ ರ ಹೆಸರು 'ಸ್ಟೈಲಿಷ್ ಸ್ಟಾರ್' ಎಂಬ ಉಪಮೆಯೊಂದಿಗೆ ತೆರೆಯ ಮೇಲೆ ಬರುತ್ತದೆ. ಇದಕ್ಕೆ ಕಾರಣ ಅವರ ಸ್ಟೈಲಿಷ್ ಲುಕ್ಸ್‌ಗಳು.
ಸಿನಿಮಾಗಳು ಮಾತ್ರವಲ್ಲ ಯಾವುದೇ ಕಾರ್ಯಕ್ರಮಕ್ಕೆ, ಮದುವೆಗೆ ಹೋದರು, ಪ್ರವಾಸದ ಸಮಯದಲ್ಲೂ ಅಲ್ಲು ಅರ್ಜುನ್ ಸ್ಟೈಲಿಷ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಅವರಷ್ಟು ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವ ಇನ್ನೊಬ್ಬ ನಟ ತೆಲುಗು ಚಿತ್ರರಂಗದಲ್ಲಿಲ್ಲ.
ಅಲ್ಲು ಅರ್ಜುನ್ ಗೆ ಸ್ಟೈಲ್ ಮಾಡುವುದು ಖ್ಯಾತ ವಿನ್ಯಾಸಗಾರ್ತಿ ಹರ್ಮನ್ ಕೌರ್. ಕೆಲ ವರ್ಷಗಳಿಂದಲೂ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡುತ್ತಿದ್ದಾರೆ ಹರ್ಮನ್ ಕೌರ್. ವಿಜಯ್ ದೇವರಕೊಂಡಗೆ ಸಹ ಹರ್ಮನ್ ಕೌರ್ ಅವರೇ ಸ್ಟೈಲ್ ಮಾಡುತ್ತಾರೆ.

ಅಲ್ಲು ಅರ್ಜುನ್ ಅವರ ಸ್ಟೈಲಿಸ್ಟ್ ಇವರೇ
ಅಲ್ಲು ಅರ್ಜುನ್ ಅವರ ಲುಕ್‌ಗಳು, ಅವರ ಉಡುಪು ಪ್ರೀತಿ ಮತ್ತು ಫ್ಯಾಷನ್ ಜ್ಞಾನ ಇನ್ನೂ ಹಲವು ವಿಷಯಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ ಹರ್ಮನ್ ಕೌರ್. ಜೊತೆಗೆ ಅಲ್ಲು ಅರ್ಜುನ್ ಬಳಿ ಇರುವ ದುಬಾರಿ ಫ್ಯಾಷನ್ ಸಂಬಂಧಿ ವಸ್ತು ಯಾವುದು ಎಂಬ ಬಗ್ಗೆಯೂ ಹೇಳಿದ್ದಾರೆ ಹರ್ಮನ್ ಕೌರ್.

ಬಹಳ ಕನ್ನಡಗಳು ಇವೆ ಅಲ್ಲು ಅರ್ಜುನ್ ಬಳಿ
ಅಲ್ಲು ಅರ್ಜುನ್ ಬಳಿ ಹಲವಾರು ಬಹು ದುಬಾರಿ ಕನ್ನಡಕಗಳಿವೆಯಂತೆ. 'ಸಿನಿಮಾಗಳ ಹೊರತಾಗಿ ಕನ್ನಡಕ ಧರಿಸದ ಅಲ್ಲು ಅರ್ಜುನ್ ಅನ್ನು ಬಹಳ ಕಡಿಮೆ ನೋಡಲು ಸಾಧ್ಯ' ಎನ್ನುತ್ತಾರೆ ಹರ್ಮನ್. ಅದರಲ್ಲಿಯೂ ವಿದೇಶಿ ಬ್ರ್ಯಾಂಡ್‌ಗಳ ಬಣ್ಣ-ಬಣ್ಣದ ಹಲವು ಆಕಾರದ ಕನ್ನಡಗಳು ಅಲ್ಲು ಅರ್ಜುನ್ ಬಳಿ ಇವೆಯಂತೆ. ಆದರೆ ಅಲ್ಲು ಅರ್ಜುನ್ ಬಳಿ ಇರುವ ದುಬಾರಿ ಪ್ಯಾಷನ್ ವಸ್ತು ಕನ್ನಡ ಅಲ್ಲ.

ಅತ್ಯಂತ ದುಬಾರಿ ಫ್ಯಾಷನ್ ವಸ್ತು ಇದೆ
ಅಲ್ಲು ಅರ್ಜುನ್‌ಗೆ ಕನ್ನಡಕದ ಹೊರತಾಗಿ ಕೈಗಡಿಯಾರಗಳೆಂದರೆ ಬಹಳ ಇಷ್ಟವಂತೆ. ಹಾಗಾಗಿ ಬಹಳ ದುಬಾರಿಯಾದ ಕೈಗಡಿಯಾರಗಳನ್ನು ಅವರು ಇಟ್ಟುಕೊಂಡಿದ್ದಾರೆ. ಅಲ್ಲು ಅರ್ಜುನ್ ಬಳಿ ಇರುವ ಅತ್ಯಂತ ದುಬಾರಿ ಫ್ಯಾಷನ್ ವಸ್ತು ಅಲ್ಲು ಅರ್ಜುನ್ ಅವರ ಕೈಗಡಿಯಾರವೇ ಅಂತೆ. ಅದರ ಪೂರ್ಣ ಬೆಲೆ ನನಗೆ ಮರೆತಿದೆ, ಆದರೆ ಅದೇ ಅವರ ಅತ್ಯಂತ ದುಬಾರಿ ಬೆಲೆಯ ಫ್ಯಾಷನ್ ವಸ್ತು ಎಂದಿದ್ದಾರೆ ಹರ್ಮನ್ ಕೌರ್.

ಅಲ್ಲು ಅರ್ಜುನ್‌ಗೆ ಸ್ಟೈಲ್ ಮಾಡುವುದು ಸವಾಲಿನ ಕೆಲಸ
ಅಲ್ಲು ಅರ್ಜುನ್‌ಗೆ ಸ್ಟೈಲ್ ಮಾಡುವುದು ಬಹಳ ಸವಾಲಿನ ಕೆಲಸವಂತೆ. ಹೊರಗೆ ಅಲ್ಲು ಅರ್ಜುನ್‌ಗಿರುವ ಇಮೇಜು, ಅವರ ಕುಟುಂಬದ ಇಮೇಜು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅವರಿಗೆ ಸ್ಟೈಲ್ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಅಲ್ಲು ಅರ್ಜುನ್‌ಗೆ ಬಹಳ ಪ್ರಯೋಗಶೀಲವಾಗಿರುವುದು ಇಷ್ಟವಿಲ್ಲ ಜೊತೆಗೆ ಓಲ್ಡ್ ಫ್ಯಾಷನ್ ಸಹ ಇಷ್ಟವಾಗುವುದಿಲ್ಲ. ಹಾಗಾಗಿ ಮಧ್ಯದ ಸ್ಟೈಲ್ ಅನ್ನು ಹೊಂದಿಸುವುದು ಬಹಳ ಕಷ್ಟದ ಕೆಲಸ ಎಂದಿದ್ದಾರೆ ಹರ್ಮನ್.