For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿ

  |

  ಬಾಲಿವುಡ್, ಸ್ಯಾಂಡಲ್ ವುಡ್ ಬಳಿಕ ಡ್ರಗ್ಸ್ ಮಾಫಿಯಾದ ನಂಟು ಈಗ ತೆಲುಗು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈಗಾಗಲೇ ನಟಿ ರಕುಲ್ ಪ್ರೀತಿ ಸಿಂಗ್ ಗೆ ಎನ್ ಸಿ ಬಿ ಸಮನ್ಸ್ ನೀಡಿದ್ದು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇದರ ಬೆನ್ನಲೇ ಖ್ಯಾತ ನಟ ಮಹೇಶ್ ಬಾಬು ಪತ್ನಿ ನಮ್ರತಾ ಹೆಸರು ಸಹ ಕೇಳಿ ಬರುತ್ತಿದೆ.

  ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಡ್ರಗ್ಸ್ ಗಾಗಿ ಬೇಡಿಕೆ ಇಟ್ಟಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ. ಸುಶಾಂತ್ ಸಿಂಗ್ ವ್ಯವಸ್ಥಾಪಕಿ ಜಯಾ ಸಹಾ ಜೊತೆ ನಮ್ರತಾ ಶಿರೋಡ್ಕರ್ ಡ್ರಗ್ಸ್ ಗೆ ಬೇಡಿಕೆ ಇಟ್ಟು ಚಾಟ್ ಮಾಡಿರುವುದು ಬಹಿರಂಗವಾಗಿದೆ. ಜಯಾ ಸಹಾ ಸದ್ಯ ಎನ್ ಸಿ ಬಿ ವಿಚಾರಣೆ ಎದುರಿಸುತ್ತಿದ್ದು, ವಿಚಾರಣೆ ವೇಳೆ ನಮ್ರತಾ ಹೆಸರನ್ನೂ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಡ್ರಗ್ಸ್ ಮಾಫಿಯಾದಲ್ಲಿ ತನ್ನ ಹೆಸರು ಕೇಳಿ ಬರುತ್ತಿದ್ದಂತೆ ನಮ್ರತಾ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಅನ್ನು ಲಿಮಿಟ್ ಮಾಡಿದ್ದಾರೆ. ಮುಂದೆ ಓದಿ...

  ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಸೇರಿದಂತೆ ನಾಲ್ಕು ನಟಿಯರಿಗೆ ಎನ್‌ಸಿಬಿ ನೋಟಿಸ್

  ಡ್ರಗ್ಸ್ ಗೆ ಬೇಡಿಕೆ ಇಟ್ಟಿದ್ದ ನಮ್ರತಾ?

  ಡ್ರಗ್ಸ್ ಗೆ ಬೇಡಿಕೆ ಇಟ್ಟಿದ್ದ ನಮ್ರತಾ?

  ಸುಶಾಂತ್ ಸಿಂಗ್ ವ್ಯವಸ್ಥಾಪಕಿ ಜಯಾ ಸಹಾ ಜೊತೆಗೆ ನಮ್ರತಾ ಶಿರೋಡ್ಕರ್ ಸಹ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ. ಹಿಂದೊಮ್ಮೆ ನಮ್ರತಾ ಮುಂಬೈ ಗೆ ಭೇಟಿ ನೀಡಿದ್ದಾಗ, ಜಯಾ ಸಹಾ ಅವರೊಂದಿಗೆ ಮಾತನಾಡಿ ಸಿಂಥೆಟಿಕ್ ಡ್ರಗ್ಸ್ ಆದ 'ಎಂಡಿ' ಗೆ ಬೇಡಿಕೆ ಇಟ್ಟಿದ್ದರು ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ಜಯಾ ಸಹಾ, ನಮ್ರತಾ ಶಿರೋಡ್ಕರ್ ಹೆಸರನ್ನು ಎನ್‌ಸಿಬಿ ಮುಂದೆ ಹೇಳಿದ್ದಾರೆ ಎನ್ನಲಾಗುತ್ತಿದೆ.

  ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ನಮ್ರತಾ

  ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ನಮ್ರತಾ

  ಡ್ರಗ್ಸ ಪ್ರಕರಣದಲ್ಲಿ ನಮ್ರತಾ ಹೆಸರು ಕೇಳಿ ಬರುತ್ತಿದ್ದಂತೆ ನಮ್ರತಾ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಅನ್ನು ಲಿಮಿಟ್ ಮಾಡಿದ್ದಾರೆ. ಮಹೇಶ್ ಬಾಬು ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಇತ್ತೀಚಿಗೆ ನಮ್ರತಾ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋ ಕೆಳಗೆ ನೆಟ್ಟಿಗರು, 'ನೀವು ಡ್ರಗ್ಸ್ ತಗೋತೀರಾ?', 'ಯಾವ ಡ್ರಗ್ಸ್ ತಗೋತಿರಾ?' ಎಂದು ಡ್ರಗ್ಸ್ ಬಗ್ಗೆ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಹಾಗಾಗಿ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಅನ್ನು ನಮ್ರತಾ ಲಿಮಿಟ್ ಮಾಡಿ, ಮೌನಕ್ಕೆ ಶರಣಾಗಿದ್ದಾರೆ.

  BIG NEWS: ಡ್ರಗ್ಸ್ ಪ್ರಕರಣದಲ್ಲಿ ನಟ ಮಹೇಶ್ ಬಾಬು ಪತ್ನಿ ಹೆಸರು!?

  'ಎನ್' ಎಂದರೆ ನಮ್ರತಾನಾ?

  'ಎನ್' ಎಂದರೆ ನಮ್ರತಾನಾ?

  ಜಯಾ ಸಹಾ ವಿಚಾರಣೆ ವೇಳೆ ಪ್ರಸಿದ್ಧ ವ್ಯಕ್ತಿಗಳ ಹೆಸರಿನ ಮೊದಲ ಅಕ್ಷರವನ್ನು ಸೇವ್ ಮಾಡಿದ್ದಾರೆ. ನಮ್ರತಾ ಹೆಸರು 'ಎನ್‌' ಎಂದು ಸೇವ್ ಮಾಡಿಕೊಂಡಿದ್ದಾರೆ ಎಂದು ಹೇಲಲಾಗುತ್ತಿದೆ. ಜಯಾ ಸಹಾ, ದೀಪಿಕಾ ಪಡುಕೋಣೆ ಹೆಸರನ್ನು 'ಡಿ' ಎಂದು ಸೇವ್ ಮಾಡಿಕೊಂಡಿದ್ದರು. ವ್ಯವಸ್ಥಾಪಕಿ ಕರೀಷ್ಮಾ ಹೆಸರನ್ನು ಹೆಸರನ್ನು 'ಕೆ' ಅಂತ ಸೇವ್ ಮಾಡಿಕೊಂಡಿದ್ದಾರೆ. 'ಎನ್' ಎನ್ನುವುದು ನಮ್ರತಾ ಅವರ ಹೆಸರೇ ಎನ್ನುವ ಬಗ್ಗೆ ಎನ್‌ಸಿಬಿ ಅಧಿಕೃತ ಮಾಹಿತಿ ನೀಡಬೇಕಿದೆ.

  ದೀಪಿಕಾ ಸೇರಿದಂತೆ ಬಾಲಿವುಡ್ ಪ್ರಮುಖ ನಟಿಯರಿಗೆ ನೋಟಿಸ್

  ದೀಪಿಕಾ ಸೇರಿದಂತೆ ಬಾಲಿವುಡ್ ಪ್ರಮುಖ ನಟಿಯರಿಗೆ ನೋಟಿಸ್

  ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಡ್ರಗ್ಸ್ ಚಾಟ್ ಬಹಿರಂಗವಾದ ಬಳಿಕ ದೀಪಿಕಾಗೆ ಎನ್ ಸಿ ಬಿ ನೋಟಿಸ್ ನೀಡಲಿದೆ ಎಂದು ಹೇಳಲಾಗಿತ್ತು. ನಿನ್ನ (ಸೆಪ್ಟಂಬರ್ 23) ದೀಪಿಕಾ ಸೇರಿದಂತೆ ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ ಎನ್ ಸಿ ಬಿ ನೋಟಿಸ್ ನೀಡಿದೆ. ಸೆಪ್ಟಂಬರ್ 24ಕ್ಕೆ ರಾಕುಲ್, ಸೆಪ್ಟಂಬರ್ 25ರಂದು ದೀಪಿಕಾಗೆ ಹಾಗೂ ಸೆಪ್ಟಂಬರ್ 26ರಂದು ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

  English summary
  Mahesh Babu wife Namrata Shirodkar Instagram comment limits after her name emerge in drug mafia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X