twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ತೆಲುಗು ನಟ ನಾನಿಯಿಂದ ಬಹಿರಂಗ ಕ್ಷಮೆ

    |

    ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಸೂಪರ್‌ಸ್ಟಾರ್ ಸಿನಿಮಾಗಳಿಂದ ಹಿಡಿದು ಸಣ್ಣ- ಪುಟ್ಟ ಸಿನಿಮಾಗಳೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆನೇ ಆಲೋಚನೆ ಮಾಡುತ್ತಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆಲೋಚನೆ ಮಾಡುತ್ತಿದೆ.

    'ಬಾಹುಬಲಿ', 'ಕೆಜಿಎಫ್', 'ಪುಷ್ಪ' ಸಿನಿಮಾ ಬೇರೆ ಭಾಷೆಯಲ್ಲಿ ಗೆದ್ದ ಬೀಗಿದ ಬಳಿಕ ಟಾಲಿವುಡ್‌ ಸ್ಟಾರ್‌ಗಳೆಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆನೇ ಚಿಂತಿಸುತ್ತಿವೆ. ಈಗ ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಕೂಡ ಬಿಡುಗಡೆಗೆ ರೆಡಿಯಾಗಿರುವ 'ಅಂಟೆ ಸುಂದರಾನಿಕಿ' ಚಿತ್ರವನ್ನು ನಾಲ್ಕು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ತೆಲುಗಿನಲ್ಲಿಯೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

    ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಲ್ಲ: ನಟ ನಾನಿ ಕೊಟ್ಟ ಕಾರಣ ಒಪ್ಪಬಹುದೇ?ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಲ್ಲ: ನಟ ನಾನಿ ಕೊಟ್ಟ ಕಾರಣ ಒಪ್ಪಬಹುದೇ?

    'ಅಂಟೆ ಸುಂದರಾನಿಕಿ' ಸಿನಿಮಾದ ಟೀಸರ್ ರಿಲೀಸ್ ಮಾಡುವ ವೇಳೆ ನಾನಿ ಹೇಳಿಕೆಯೊಂದನ್ನು ನೀಡಿದ್ದರು. ತನ್ನ ಸಿನಿಮಾವನ್ನು ಮೂರು ಭಾಷೆಗಳಿಗೆ ಡಬ್ ಮಾಡಿದ್ದು, ಕನ್ನಡಕ್ಕೆ ಯಾಕೆ ಡಬ್ ಮಾಡಿಲ್ಲ ಎಂಬುದಕ್ಕೆ ಕಾರಣ ತಿಳಿಸಿದ್ದರು. ಇದು ಕನ್ನಡಗರನ್ನು ಕೆರಳಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕೆರಳುತ್ತಿದ್ದಂತೆ ನಾನಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

    Dasara Movie: ಕನ್ನಡ 'ದಸರಾ' v/s ತೆಲುಗು 'ದಸರಾ', ಏನಿದು ಟ್ವಿಸ್ಟ್? Dasara Movie: ಕನ್ನಡ 'ದಸರಾ' v/s ತೆಲುಗು 'ದಸರಾ', ಏನಿದು ಟ್ವಿಸ್ಟ್?

     ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತೆ

    ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತೆ

    ನಮ್ಮ ಸಿನಿಮಾವನ್ನು ನಮ್ಮದೇ ಭಾಷೆಯಲ್ಲಿ ತೋರಿಸುವುದು ನಮಗೆ ಇಷ್ಟ. ಆದರೆ, ಬೇರೆ ರಾಜ್ಯಗಳಲ್ಲಿ ಭಾಷೆಯ ಸಮಸ್ಯೆಯಿಂದಾಗಿ ನಾವು ವಿವಿಧ ಭಾಷೆಗಳಲ್ಲಿ ಈ ಸಿನಿಮಾವನ್ನುಡಬ್ಬಿಂಗ್ ಮಾಡಿದ್ದೇವೆ. ಆದರೆ ಕರ್ನಾಟಕದಲ್ಲಿ ಈ ಪರಿಸ್ಥಿತಿ ವಿಭಿನ್ನವಾಗಿದೆ. ಕರ್ನಾಟಕದಲ್ಲಿ ನಮಗೆ ಭಾಷೆಯ ಸಮಸ್ಯೆ ಇಲ್ಲ. ಕನ್ನಡಿಗರಿಗೆ ತೆಲುಗು ಚೆನ್ನಾಗಿ ಅರ್ಥವಾಗುತ್ತೆ. ಹಲವು ವರ್ಷಗಳಿಂದ ತೆಲುಗು ಸಿನಿಮಾಗಳನ್ನು ಮೂಲ ಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ಸಿನಿಮಾವನ್ನು ತೆಲುಗಿನಲ್ಲಿಯೇ ನೋಡಲೆಂದು ಕನ್ನಡಕ್ಕೆ ಡಬ್ ಮಾಡಿಲ್ಲ.'' ಎಂದಿದ್ದರು ನಟ ನಾನಿ. ಇದು ಕನ್ನಡಿಗರ ನಿದ್ದೆ ಕೆಡಿಸಿತ್ತು.

    ಕನ್ನಡಿಗರಿಗೆ ಕ್ಷಮೆ ಕೇಳಿದ ನಾನಿ

    ತಮ್ಮ ಹೇಳಿಕೆ ಬಗ್ಗೆ ನ್ಯಾಚುರಲ್‌ ಸ್ಟಾರ್ ನಾನಿ ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ಟ್ವಿಟರ್‌ನಲ್ಲಿ ನಾನಿ ಬಹಿರಂಗವಾಗಿಯೇ ಕನ್ನಡಿಗರಿ ಕ್ಷಮೆಯಾಚಿಸಿದ್ದಾರೆ. "ನನ್ನ ಹೇಳಿಕೆ ಸರಿಯಾಗಿ ಅರ್ಥೈಸದಿದ್ದಲ್ಲಿ ಕ್ಷಮೆಯಾಚಿಸುತ್ತೇನೆ. ಗಡಿಗಳನ್ನು ದಾಟಿ ಯಶಸ್ಸು ಕಂಡಿರುವ ಕನ್ನಡ ಚಿತ್ರರಂಗದ ಬಗ್ಗೆ ನನಗೆ ಹೆಮ್ಮೆಯಿದೆ." ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ತೆಲುಗು ಸಿನಿಮಾಗಳು ಡಬ್ ಆಗಿ ಬಿಡುಗಡೆಯಾಗದೆ ಇದ್ದರೂ, ಸಿನಿಮಾವನ್ನು ಪ್ರೋತ್ಸಾಹಿಸಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸುವ ಉದ್ದೇಶವಾಗಿತ್ತು ಎಂದು ನಾನಿ ಹೇಳಿದ್ದಾರೆ.

     ನಾನಿ ಸಿನಿಮಾ ಕನ್ನಡ ಡಬ್

    ನಾನಿ ಸಿನಿಮಾ ಕನ್ನಡ ಡಬ್

    ನಾನಿ ಸಿನಿಮಾಗಳು ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಚೆನ್ನಾಗಿಯೇ ಗಳಿಕೆ ಮಾಡುತ್ತವೆ. ನಾನಿಗೆ ಕರುನಾಡಿನಲ್ಲೂ ಸ್ನೇಹಿತರಿದ್ದಾರೆ. ಆದರೂ, ನಾನಿಯ ಕೆಲವು ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಿವೆ. ನಾನಿ ಅಭಿನಯದ 'ವಿ', 'ಶ್ಯಾಮ್ ಸಿಂಗ ರಾಯ್', 'ಟಕ್ ಜಗದೀಶ್' ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದ್ದವು. ಆದರೆ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕರು ತಿರಸ್ಕರಿಸಿದ್ದಾರೆ. ಈ ಕಾರಣಕ್ಕೆ ನಾನಿ ತಮ್ಮ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡದೆ ಇರಲು ನಿರ್ಧರಿಸಿದ್ದಾರೆ.

     ನಾನಿ ವಿರುದ್ಧ ಕಿಡಿಕಾರಿದ್ದ ಕನ್ನಡಿಗರು

    ನಾನಿ ವಿರುದ್ಧ ಕಿಡಿಕಾರಿದ್ದ ಕನ್ನಡಿಗರು

    ನಾನಿ ಕನ್ನಡದಲ್ಲಿ ಸಿನಿಮಾ ಡಬ್ ಮಾಡಲ್ಲ ಎಂದು ಹೇಳಿಕೆ ನೀಡುತ್ತಿದ್ದಂತೆ ಕಿಡಿ ಕಾರಿದ್ದಾರೆ. "ನಿಮ್ಮದು ಇದೆಂತಹ ಲಾಜಿಕ್? ತಮಿಳಿನ ಜನರಿಗೂ ತೆಲುಗು ಚೆನ್ನಾಗಿ ಬರುತ್ತೆ. ಹಾಗಂತ ಅಲ್ಲೂ ತೆಲುಗಿನಲ್ಲಿಯೇ ಬಿಡುಗಡೆ ಮಾಡಿ. ಮೂರು ಭಾಷೆಗೆ ಡಬ್ ಮಾಡಿ ಕನ್ನಡದಲ್ಲಿ ಡಬ್ ಮಾಡದೆ ಇರುವುದು ಎಷ್ಟು ಸರಿ? ಎಂದು ಖಂಡಿಸಿದ್ದಾರೆ. ನೆಟ್ಟಿಗರು ಕಿಡಿಕಾರುತ್ತಿದ್ದಂತೆ ನಾನಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

    English summary
    Nani clarified and apologized for hurting kannadigas sentiments. Know More.
    Thursday, April 21, 2022, 15:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X