twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರೀಯ ಸಿನಿಮಾ ದಿನ: 75 ರೂಪಾಯಿ ಟಿಕೆಟ್ ಆಫರ್ ಈ 4 ರಾಜ್ಯಗಳಲ್ಲಿಲ್ಲ!

    |

    ನಾಳೆ ( ಸೆಪ್ಟೆಂಬರ್ 23 ) ಮಲ್ಟಿಪ್ಲೆಕ್ಸ್ ಅಸೋಸಿಯೇಶ್ ಆಫ್ ಇಂಡಿಯಾ ನ್ಯಾಷನಲ್ ಸಿನಿಮಾ ದಿನವನ್ನು ಆಚರಿಸಲು ತೀರ್ಮಾನಿಸಿದೆ. ಈ ದಿನದಂದು ದೇಶದಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಟಿಕೆಟ್ ದರವನ್ನು 75 ರೂಪಾಯಿಗೆ ಇಳಿಸಲಾಗಿದೆ. ಹೌದು, ಕೊರಾನಾ ವೈರಸ್ ದೇಶವ್ಯಾಪಿ ಹರಡಿ ಮಲ್ಟಿಪ್ಲೆಕ್ಸ್ ಸಂಪೂರ್ಣ ಬಂದ್ ಆಗಿ ಪುನರಾರಂಭಗೊಂಡ ಸಂದರ್ಭದಲ್ಲಿ ಮತ್ತೆ ಚಿತ್ರಮಂದಿರಗಳತ್ತ ಮುಖ ಮಾಡಿ ತಮ್ಮ ಕೈಹಿಡಿದ ಸಿನಿ ಪ್ರೇಕ್ಷಕರಿಗೆ ಕೃತಜ್ಞತೆ ತಿಳಿಸಲು ಮಲ್ಟಿಪ್ಲೆಕ್ಸ್ ಸಂಸ್ಥೆಗಳ ಮಾಲೀಕರು ನಿರ್ಧರಿಸಿದ್ದು, ಈ ರಾಷ್ಟ್ರೀಯ ಸಿನಿಮಾ ದಿನದಂದು ಟಿಕೆಟ್‌ಗಳನ್ನು ಕೇವಲ 75 ರೂಪಾಯಿಗೆ ನೀಡಲು ಮುಂದಾಗಿವೆ.

    ಹೀಗೆ ವಿನಾಯಿತಿ ದರದಲ್ಲಿ ಟಿಕೆಟ್‌ಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಿನಿ ಪ್ರೇಕ್ಷಕರು ಖರೀದಿಸಿ ತಮಗೆ ಇಷ್ಟವಾದ ಚಿತ್ರಗಳನ್ನು ನೋಡಲು ಮುಂದಾಗುತ್ತಿದ್ದರೆ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳು ನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಮಾತ್ರ ಈ 75 ಟಿಕೆಟ್ ಯೋಜನೆ ಇಲ್ಲ. ಈ ನಾಲ್ಕೂ ರಾಜ್ಯಗಳಲ್ಲಿಯೂ ನಾಳೆ ಎಂದಿನಂತೆ ಮಲ್ಟಿಪ್ಲೆಕ್ಸ್ ಟಿಕೆಟ್ ದರ ದುಬಾರಿಯಾಗಿಯೇ ಇದೆ. ಸದ್ಯ ಈ ಕುರಿತಾಗಿ ಆಯಾ ರಾಜ್ಯದ ಸಿನಿ ಪ್ರೇಕ್ಷಕರು ಪ್ರತಿಕ್ರಿಯಿಸುತ್ತಿದ್ದು, ಇಡೀ ದೇಶಕ್ಕೆ ಒಂದು ನ್ಯಾಯ ನಮಗೆ ಒಂದು ನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

     No discount on tickets in Tamilnadu, Kerala and Telugu states multiplexes on September 23

    ಬಹುಶಃ ಶುಕ್ರವಾರ ನೂತನ ಚಿತ್ರಗಳು ಬಿಡುಗಡೆಯಾಗುವ ಕಾರಣ ಅವುಗಳ ಕಲೆಕ್ಷನ್ ಮೇಲೆ ಹೊಡೆತ ಬೀಳಬಹುದು ಎಂಬ ಉದ್ದೇಶದಿಂದ ಈ ನಿರ್ಧಾರಗಳನ್ನು ಆಯಾ ರಾಜ್ಯಗಳ ಮಲ್ಟಿಪ್ಲೆಕ್ಸ್‌ಗಳು ತೆಗೆದುಕೊಂಡಿರಬಹುದು. ಆದರೆ ಇತ್ತಿ ಕರ್ನಾಟಕದಲ್ಲಿಯೂ ಗುರು ಶಿಷ್ಯರು ರೀತಿಯ ಹೈಪ್ ಇರುವ ಚಿತ್ರ ಬಿಡುಗಡೆಯಾಗುತ್ತಿದ್ದರೂ ಸಹ ಇಲ್ಲಿನ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ದರ 75 ರೂಪಾಯಿಗಳೇ ಇದೆ.

    ಇನ್ನು ಎಲ್ಲಾ ಅಂದುಕೊಂಡಂತೆ, ಯಾರ ಮಾತಿಗೂ ಕಿವಿಗೊಡದೇ ನಡೆದಿದ್ದರೆ ಈ ನ್ಯಾಷನಲ್ ಸಿನಿಮಾ ದಿನ ಕಳೆದ ಶುಕ್ರವಾರವೇ ( ಸೆಪ್ಟೆಂಬರ್ 16 ) ಆಚರಣೆಯಾಗಬೇಕಿತ್ತು. ಆದರೆ, ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಯಾಗಿ ಕೇವಲ ಒಂದು ವಾರ ಕಳೆದಿದ್ದ ಕಾರಣ ಚಿತ್ರದ ಕಲೆಕ್ಷನ್ ಮೇಲೆ ಹೊಡೆತ ಬೀಳಬಹುದು ಎಂಬ ನಿಟ್ಟಿನಿಂದ ಕಳೆದ ವಾರ ನಡೆಯಬೇಕಿದ್ದ ರಾಷ್ಟ್ರೀಯ ಸಿನಿಮಾ ದಿನವನ್ನು ಈ ವಾರಕ್ಕೆ ಮುಂದೂಡಲಾಗಿತ್ತು.

    English summary
    No discount on tickets in Tamilnadu, Kerala and Telugu states multiplexes on National Cinema day. Read on.
    Thursday, September 22, 2022, 19:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X