Don't Miss!
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- News
ರಾಣೆಬೆನ್ನೂರು: "ಮೈಸೂರ ಹುಲಿ" ಎಂದೇ ಪ್ರಸಿದ್ಧಿಯಾಗಿದ್ದ ಹೋರಿ ಇನ್ನಿಲ್ಲ, ಮುಗಿಲು ಮುಟ್ಟಿದ ಆಕ್ರಂದನ
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾಜಿ ಪ್ರೇಮಿ ಸಿದ್ಧಾರ್ಥ್ ಜೊತೆ ಸಂಕಷ್ಟಕ್ಕೆ ಸಿಲುಕಿದ್ದ ಸಮಂತಾ: ಕಾರಣ ಆ ಒಂದು ಸಿನಿಮಾ!
ಸಮಂತಾ ಪತಿ ನಾಗಚೈತನ್ಯ ಇಂದ ದೂರಾದ ಬಳಿಕ ಹೆಚ್ಚಾಗಿ ಸದ್ದು ಮಾಡಿದ್ದ ವಿಚಾರಗಳಲ್ಲಿ ಸಮಂತಾ ಮತ್ತು ಸಿದ್ಧಾರ್ಥ್ ಲವ್ ಸ್ಟೋರಿ ಕೂಡ ಒಂದು. ಸಮಂತಾ ಸಿದ್ಧಾರ್ಥ್ ಇಬ್ಬರು ಪ್ರೀತಿಸುತ್ತಿದ್ದು, ನಂತ್ರ ಬೇರೆ ಆದರು ಎನ್ನುವ ಸುದ್ದಿ ಇದೆ. ಈಗ ಅವರ ಇಬ್ಬರು ಒಟ್ಟಿಗೆ ಅಭಿನಯಿಸಿದ್ದ 'ಜಬರ್ದಸ್ತ್' ಚಿತ್ರ ಸುದ್ದಿಯಲ್ಲಿದೆ.
ಈ ಚಿತ್ರ ರಿಲೀಸ್ ಬಳಿಕ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. 'ಜಬರ್ದಸ್ತ್' ಚಿತ್ರ ರಿಲೀಸ್ ಆಗಿ ಇದೇ ಫೆಬ್ರವರಿ 22ಕ್ಕೆ, 9ಕ್ಕೆ ವರ್ಷ ಆಗುತ್ತೆ. ಈ ಚಿತ್ರದ ವಿವಾದ ಬಾಲಿವುಡ್‌ಗೂ ತಲೆ ನೋವಾಗಿತ್ತು. ಹಾಗಾಗಿ ಅಂದು ಚಿತ್ರ ಯಾವ ವಿವಾದದಿಂದ ಸುದ್ದಿ ಆಗಿತ್ತು. ಚಿತ್ರದ ಗತಿ ಏನಾಯ್ತು ಎನ್ನುವ ಬಗ್ಗೆ ವಿಶೇಷ ಸಮಾಚಾರ ಇಲ್ಲಿದೆ. ಮುಂದೆ ಓದಿ..
ಸಮಂತಾಗೆ
ಎದುರಾಯ್ತು
ಅಸಭ್ಯ
ಪ್ರಶ್ನೆ:
ಖಡಕ್
ಉತ್ತರ
ಕೊಟ್ಟ
ನಟಿ!
ಬಾಲಿವುಡ್ ಚಿತ್ರದ ಅನಧಿಕೃತ ರಿಮೇಕ್ ಆಗಿದ್ದ ಈ ಚಿತ್ರವು ರಿಲೀಸ್ ಬಳಿಕ ಕಾನೂನು ಸಮಸ್ಯೆಗೆ ಸಿಲುಕಿತು. ಅಲ್ಲದೇ ಹೆಚ್ಚು ನಿರೀಕ್ಷೆಯಿಂದ ಬಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಹೆಚ್ಚಾಗಿ ಸದ್ದು ಮಾಡಿದ್ದೇ ವಿವಾದಿಂದ.

2013ರಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡ ಸಮಂತಾ, ಸಿದ್ಧಾರ್ಥ್!
2013 ರಲ್ಲಿ, ಸಮಂತಾ ಮತ್ತು ಸಿದ್ಧಾರ್ಥ್ ಆಪ್ತ ಬಾಂಧವ್ಯ ಹೊಂದಿದ್ದರು. ತೆಲುಗಿನ ನಿರ್ದೇಶಕಿ ನಂದಿನಿ ರೆಡ್ಡಿ ಅವರನ್ನು 'ಜಬರ್ದಸ್ತ್' ಚಿತ್ರಕ್ಕಾಗಿ ಒಟ್ಟಿಗೆ ಕರೆತಂದರು. ಹಾಗಾಗಿ ಈ ಚಿತ್ರ ಆಗ ಸಿಕ್ಕಾಪಟ್ಟೆ ಸುದ್ದಿ ಮಾಡಿತು. ಅವರ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದರು. 'ಜಬರ್ದಸ್ತ್' ಫೆಬ್ರವರಿ 22, 2013 ರಂದು ಚಿತ್ರಮಂದಿರ ಪ್ರವೇಶಿಸಿತು. ವರದಿಗಳ ಪ್ರಕಾರ, 'ಜಬರ್ದಸ್ತ್' ರಣವೀರ್ ಸಿಂಗ್, ಅನುಷ್ಕಾ ಶರ್ಮಾ ಅವರ ಬಾಲಿವುಡ್‌ನ 'ಬ್ಯಾಂಡ್ ಬಜಾ ಬಾರಾತ್' ಚಿತ್ರದ ಅನಧಿಕೃತ ರಿಮೇಕ್ ಆಗಿದೆ ಎನ್ನಲಾಗಿತ್ತು.

'ಜಬರ್ದಸ್ತ್' ಚಿತ್ರಕ್ಕೆ ಎದುರಾಗಿತ್ತು ಕಾನೂನು ಸಮಸ್ಯೆ!
ಯಶ್ ರಾಜ್ ಫಿಲ್ಮ್ಸ್ 'ಜಬರ್ದಸ್ತ್' ನಿರ್ಮಾಪಕರಿಗೆ ಲೀಗಲ್ ನೋಟಿಸ್ ನೀಡಿತು. 'ಜಬರ್ದಸ್ತ್' ಬಿಡುಗಡೆಯ ನಂತರ ತಮಿಳಿನ ಜನಪ್ರಿಯ ನಿರ್ದೇಶಕ ಲಿಂಗುಸ್ವಾಮಿ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದರು. ಅವರು ತೆಲುಗಿನ 'ಜಬರ್ದಸ್ತ್' ಅನ್ನು ತಮಿಳಿನಲ್ಲಿ 'ಡಮ್ ಡಮ್ ಪೀ ಪೀ' ಎಂದು ಡಬ್ ಮಾಡುವುದಾಗಿ ಘೋಷಿಸಿದರು. 2013ರ ಬೇಸಿಗೆಯಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು, ಆಗ ಯಶ್ ರಾಜ್ ಫಿಲಂಸ್ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೊರೆ ಹೋಗಿತ್ತು. ಕೋರ್ಟ್ 'ಡಮ್ ಡಮ್ ಪೀ ಪೀ' ಚಿತ್ರದ ರಿಲೀಸ್ ಮೇಲೆ ತಡೆಯಾಜ್ಞೆ ಹೊರಡಿಸಿತು.
ಶಾಕುಂತಲೆ
ರೂಪದಲ್ಲಿ
ಸಮಂತಾ:
ಅಲೌಕಿಕ
ಸುಂದರಿ
ಲುಕ್ಗೆ
ಫ್ಯಾನ್ಸ್
ಫಿದಾ!

'ಆಹಾ ಕಲ್ಯಾಣಂ' ಹೆಸರಿನಲ್ಲಿ ತಮಿಳಿಗೆ ರಿಮೇಕ್!
ಇದಲ್ಲದೆ, ಯಶ್ ರಾಜ್ ಫಿಲ್ಮ್ಸ್ 'ಬ್ಯಾಂಡ್ ಬಜಾ ಬಾರಾತ್' ಅನ್ನು ತಮಿಳಿನಲ್ಲಿ ನಾನಿ ಮತ್ತು ವಾಣಿ ಕಪೂರ್ ಜೊತೆ ರೀಮೇಕ್ ಮಾಡುವುದಾಗಿ ಘೋಷಿಸಿತು. ಈ ಚಿತ್ರಕ್ಕೆ ಲಿಂಗುಸ್ವಾಮಿಯನ್ನು ನಿರ್ದೇಶಕನಾಗಿ ಫಿಕ್ಸ್ ಮಾಡಿತು. ಆದರೆ ತಡೆಯಾಜ್ಞೆ ಇದ್ದ ಕಾರಣ ಅವರು 'ಡಮ್ ಡಮ್ ಪೀ ಪೀ' ಬಿಡುಗಡೆಯೊಂದಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಅತ್ತ 'ಜಬರ್ದಸ್ತ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತು. ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಯಿತು. ಎಲ್ಲಾ ಮುಗಿದ ಬಳಿಕಾ ಫೆಬ್ರವರಿ 14, 2014 ರಂದು, ಯಶ್ ರಾಜ್ ಫಿಲ್ಮ್ಸ್‌ನ 'ಆಹಾ ಕಲ್ಯಾಣಂ' ತಮಿಳು ರಿಮೇಕ್ ಬಿಡುಗಡೆಯಾಯಿತು. ಆದರೆ 'ಆಹಾ ಕಲ್ಯಾಣಂ' ಚಿತ್ರ ಕೂಡ ಜನ ಮನಗೆಲ್ಲುವಲ್ಲಿ ವಿಫಲವಾಯಿತು.

2015ರಲ್ಲಿ ಸಮಂತಾ, ಸಿದ್ಧಾರ್ಥ್ ಬ್ರೇಕಪ್!
ನಟಿ ಸಮಂತಾ ಸಿದ್ಧಾರ್ಥ್ ಇಬ್ಬರೂ ಸಿನಿಮಾರಂಗದಲ್ಲಿ ಪ್ರೇಮ ಪಕ್ಷಿಗಳು ಅಂತಲೇ ಹೆರಸುವಾಸಿ ಆಗಿದ್ದರು. ಹಾಗಾಗಿಯೇ ಇವರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಅಂದರೆ ಅವರ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಂದ ಕಾಯುತ್ತಿದ್ದರು. ಆದರೆ ಅದೆಲ್ಲವೂ ಹುಸಿಯಾಗಿ. 2015ರಲ್ಲಿ ಸಮಂತಾ ಮತ್ತು ಸಿದ್ಧಾರ್ಥ್ ಇಬ್ಬರೂ ಬ್ರೇಕಪ್ ಮಾಡಿಕೊಂಡು ಬೇರೆ, ಬೇರೆ ಆದರು.