For Quick Alerts
  ALLOW NOTIFICATIONS  
  For Daily Alerts

  ಪರಿಟಾಲ ರವಿ, ಪವನ್‌ ಕಲ್ಯಾಣ್‌ ತಲೆ ಬೋಳಿಸಿದ್ದು ನಿಜವೇ? ಪರಿಟಾಲ ಶ್ರೀರಾಮ್ ಹೇಳಿದ್ದಿಷ್ಟು!

  |

  ಮೆಗಾಸ್ಟಾರ್ ಚಿರಂಜೀವಿ ಹಾಗೂ ಪರಿಟಾಲ ರವಿ ಫ್ಯಾಮಿಲಿ ನಡುವೆ ವೈಷಮ್ಯ ಇದೆ. ಯಾವುದೋ ಜಮೀನಿನ ವಿಚಾರದಲ್ಲಿ ಇಬ್ಬರ ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಮಧ್ಯ ಪ್ರವೇಶಿಸಿದ ಪವನ್ ಕಲ್ಯಾಣ್ ತಲೆಯನ್ನು ಪರಿಟಾಲ ರವಿ ಬೋಳಿಸಿ, ತಕ್ಕ ಶಾಸ್ತಿ ಮಾಡಿದ್ದರು ಎನ್ನುವ ಗುಸುಗುಸು ಕೇಳಿಬರುತ್ತಲೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಇವತ್ತಿಗೂ ಇಂತಾದೊಂದು ಚರ್ಚೆ ನಿಂತಿಲ್ಲ.

  2003ರಲ್ಲಿ ಪವನ್ ಕಲ್ಯಾಣ್ ತಲೆ ಬೋಳಿಸಿಕೊಂಡು ಥಮ್ಸ್ ಅಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಯಾವಾಗಲೂ ಭಿನ್ನ ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪವನ್ ದಿಢೀರನೇ ಈ ರೀತಿ ಕಂಡಿದ್ದು ಕೆಲವರ ಅಚ್ಚರಿ ಕಾರಣವಾಗಿತ್ತು. ಪವನ್ ಕಲ್ಯಾಣ್‌ಗೆ ಅಂದಿನ ಟಿಡಿಪಿ ನಾಯಕ ಪರಿಟಾಲ ರವಿ ತಲೆ ಬೋಳಿಸಿದ್ದಾರೆ ಎನ್ನುವ ವದಂತಿ ಹರಿದಾಡಲು ಶುರುವಾಗಿತ್ತು. ಪರಿಟಾಲ ರವಿ ಹೆಸರು ಕೇಳಿದರೆ ಜನ ನಡುಗುತ್ತಿದ್ದ ಕಾಲ ಅದು. ರಾಬಿನ್ ಹುಡ್ ಮಾದರಿಯ ನಾಯಕನಾಗಿ ಅವರು ಗುರ್ತಿಸಿಕೊಂಡಿದ್ದರು. ಆದರೆ ಇದೆಲ್ಲಾ ಸುಳ್ಳು ಎಂದು ಸ್ವತಃ ಪರಿಟಾಲ ರವಿ ಹೇಳಿದರೂ ಕೂಡ ಸತ್ಯ ಸುದ್ದಿಗಿಂತ ಸುಳ್ಳು ಸುದ್ದಿಯನ್ನೇ ಜನ ಹೆಚ್ಚು ನಂಬಿದ್ದರು.

  ರಷ್ಯಾದಲ್ಲೂ 'ಪುಷ್ಪ' ಅಬ್ಬರ: ಅಲ್ಲು ಅರ್ಜುನ್ ಜೊತೆ 'ತಗ್ಗೋದೆ ಇಲ್ಲ' ಎಂದ ರಶ್ಮಿಕಾರಷ್ಯಾದಲ್ಲೂ 'ಪುಷ್ಪ' ಅಬ್ಬರ: ಅಲ್ಲು ಅರ್ಜುನ್ ಜೊತೆ 'ತಗ್ಗೋದೆ ಇಲ್ಲ' ಎಂದ ರಶ್ಮಿಕಾ

  ಅಂದು ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಈ ರೀತಿ ಅಪಪ್ರಚಾರ ಮಾಡಿದ್ದರು. ಸತ್ಯಕ್ಕಿಂತ ಮಸಾಲೆ ಬೆರೆಸಿದ ಸುಳ್ಳು ಸುದ್ದಿಯೇ ಹೆಚ್ಚು ಸದ್ದು ಮಾಡಿತ್ತು. ಚಿತ್ರರಂಗದಲ್ಲಿ ಮೆಗಾ ಫ್ಯಾಮಿಲಿಯನ್ನು ದ್ವೇಷಿಸುವವರಿಗೂ ಇದು ಒಳ್ಳೆ ಆಯುಧವಾಗಿ ಕಂಡಿತ್ತು. ಹಾಗಾಗಿ ಪವನ್ ಕಲ್ಯಾಣ್‌ನ ಟ್ರೋಲ್ ಮಾಡಲು ಈ ಸುದ್ದಿಯನ್ನು ಬಳಸಿಕೊಂಡರು. ಕೆಲ ವರ್ಷಗಳ ಹಿಂದೆ ಪರೋಕ್ಷವಾಗಿ ಇದೆಲ್ಲಾ ಸುಳ್ಳು ಎಂದು ಪವನ್ ಕಲ್ಯಾಣ್ ಹೇಳಿದ್ದರು. ಆದರೂ ಕೂಡ ಈ ಬಗ್ಗೆ ಚರ್ಚೆ ನಿಂತಿಲ್ಲ. ಇದೀಗ ಆದರೆ ಈ ಬಗ್ಗೆ ಇದೀಗ ಪರಿಟಾಲ ರವಿ ಪುತ್ರ ಪರಿಟಾಲ ಶ್ರೀರಾಮ್ ಸ್ಪಷ್ಟನೆ ನೀಡಿದ್ದಾರೆ.

  ಸಂದರ್ಶನವೊಂದರಲ್ಲಿ ಮಾತನಾಡಿರುವ ಪರಿಟಾಲ ಶ್ರೀರಾಮ್, "ಪವನ್ ಕಲ್ಯಾಣ್ ಒಳ್ಳೆ ನಟ. ಸಮಾಜದ ಬಗ್ಗೆ ಬಹಳ ಕಾಳಜಿ ಇರುವ ವ್ಯಕ್ತಿ. ಉತ್ತಮ ನಾಯಕನಾಗಿ ಬೆಳೆಯುತ್ತಿರುವ ಸಮಯದಲ್ಲಿ ಇಂತಹ ರೂಮರ್ಸ್ ಸಾಮಾನ್ಯ. ಆದರೆ ಅದರಲ್ಲಿ ಸ್ವಲ್ಪ ಆದರೂ ನಿಜ ಇದ್ದರೆ ಪರವಾಗಿಲ್ಲ. ಅದರ ಬಗ್ಗೆ ಮಾತನಾಡಬಹುದು. ಆದರೆ ಅದೆಲ್ಲಾ ನಿರಾಧಾರವಾದ ಆರೋಪಗಳು. ಅವರಿಗೂ ನಮಗೂ ಒಳ್ಳೆಯ ಅನುಬಂಧ ಇದೆ. ಸುಖಾ ಸುಮ್ಮನೆ ಅವರನ್ನು ತೇಜೋವಧೆ ಮಾಡಲು ಇಂತಹ ರೂಮರ್ಸ್ ಕ್ರಿಯೇಟ್ ಮಾಡುತ್ತಿದ್ದಾರೆ. ಎಷ್ಟು ರೂಮರ್ಸ್ ಕ್ರಿಯೇಟ್ ಮಾಡಿದರೂ ಆತ ಅರ್ಥ ಮಾಡಿಕೊಳ್ಳಬಲ್ಲ. ಪವನ್ ಕಲ್ಯಾಣ್‌ನ ನೆಗೆಟಿವ್ ಆಗಿ ತೋರಿಸಲು ಹಬ್ಬಿಸಿರುವ ಸುಳ್ಳು ಸುದ್ದಿ ಅಷ್ಟೇ" ಎಂದು ಸ್ಪಷ್ಟನೆ ನೀಡಿದ್ದಾರೆ.

  Paritala Sriram clarification About Pawan Kalyans head tonsuring episode

  ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಧುಮುಕಿದ್ದರು. ಆದರೆ ಅಷ್ಟಾಗಿ ಜನ ಬೆಂಬಲ ಸಿಗಲಿಲ್ಲ. ಹಾಗಾಗಿ ರಾಜಕೀಯ ಬಿಟ್ಟು ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಪವನ್ ಕಲ್ಯಾಣ್ 'ಜನಸೇನಾ' ಪಕ್ಷ ಸ್ಥಾಪಿಸಿ ಚುನಾವಣೆ ಎದುರಿಸಿ ಹೀನಾಯವಾಗಿ ಸೋಲುಂಡರು. ಆದರೂ ಕೂಡ ರಾಜಕೀಯದಿಂದ ದೂರಾಗದೇ ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

  English summary
  Paritala Sriram clarification About Pawan Kalyan's head tonsuring episode. Sriram trashed the rumour and had finally put an end to it after it started 19 years ago. Know more.
  Thursday, December 1, 2022, 19:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X