For Quick Alerts
  ALLOW NOTIFICATIONS  
  For Daily Alerts

  ಸಿಎಂ ಜಗನ್ ವಿರುದ್ಧ ಏಕವನಚನದ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್

  |

  ಆಂಧ್ರ-ತೆಲಂಗಾಣದಲ್ಲಿ ಸಿನಿಮಾಗಳಷ್ಟೆ, ಸಿನಿಮಾಗಳ ಸಂಬಂಧಿಸಿದ ಕಾರ್ಯಕ್ರಮಗಳೂ ರಂಗೇರುತ್ತವೆ. ಪ್ರೀರಿಲೀಸ್, ಆಡಿಯೋ ರಿಲೀಸ್ ಕಾರ್ಯಕ್ರಮಗಳಲ್ಲಿ, ನಟರು ಸಿನಿಮಾ ಮಾದರಿಯಲ್ಲಿಯೇ ಡೈಲಾಗ್‌ಗಳು ಹೊಡೆದು ಅಬ್ಬರಿಸುವುದು ಸಾಮಾನ್ಯ.

  ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿರುವ ಸಾಯಿ ಧರಮ್ ತೇಜ್ ನಟನೆಯ 'ರಿಪಬ್ಲಿಕ್' ಸಿನಿಮಾ ಅಕ್ಟೋಬರ್ 1ಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಕೆಲವು ದಿನಗಳ ಹಿಂದಷ್ಟೆ ಬಹು ಅದ್ಧೂರಿಯಾಗಿ ನೆರವೇರಿತು.

  ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಪವನ್ ಕಲ್ಯಾಣ್ ಮಾಡಿದ ವೀರಾವೇಷದ ಭಾಷಣ ಆಂಧ್ರ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಆಕ್ರೋಶದಿಂದಲೇ ಭಾಷಣ ಮಾಡಿದ ಪವನ್ ಕಲ್ಯಣ್ ಹಲವು ಪ್ರಮುಖರ ಹೆಸರು ಹೇಳಿ ನೇರ ಆರೋಪಗಳನ್ನು ಮಾಡಿದರು. ಅದರಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ಸಹ ಒಬ್ಬರು.

  ಚಿತ್ರಮಂದಿರಗಳ ಟಿಕೆಟ್‌ ದರ ಏರಿಸುವ ವಿಷಯಕ್ಕೆ ಸಿನಿಮಾ ರಂಗ ಮತ್ತು ಆಂಧ್ರ ಸರ್ಕಾರದ ನಡುವೆ ಪ್ರಬಲ ತಿಕ್ಕಾಟ ನಡೆಯುತ್ತಿದೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಸಿಎಂ ಜಗನ್ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದಾರೆ.

  ನಮ್ಮ ಸಿನಿಮಾವನ್ನು ನೀನು ಮಾರುತ್ತೀಯಾ? ಪವನ್ ಪ್ರಶ್ನೆ

  ನಮ್ಮ ಸಿನಿಮಾವನ್ನು ನೀನು ಮಾರುತ್ತೀಯಾ? ಪವನ್ ಪ್ರಶ್ನೆ

  ''ನಾವು ಶ್ರಮ ಹಾಕಿ ಸಿನಿಮಾ ತೆಗೆದರೆ ಅದರ ಮಾರಾಟ ನೀನು ಮಾಡುತ್ತೀಯಾ? ಸರ್ಕಾರ ಸಾಲಗಳಲ್ಲಿ ಮುಳುಗಿದೆ, ಹಾಗಾಗಿ ನಮ್ಮ ಸಿನಿಮಾಗಳನ್ನು ನೀವು ಮಾರಿಕೊಂಡು ಸರ್ಕಾರದ ಬೊಕ್ಕಸಕ್ಕೆ ಹಣ ತುಂಬಿಕೊಳ್ಳಲು ಯತ್ನಿಸುತ್ತಿದ್ದೀಯ. ನಮ್ಮ ಸಿನಿಮಾಗಳನ್ನು ಮಾರಾಟ ಮಾಡಲು ನೀನು ಯಾರು? ಸಿನಿಮಾದವರು ವ್ಯವಹಾರ ಮಾಡಬಾರದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಪವನ್ ಕಲ್ಯಾಣ್.

  ಸಿಎಂ ಅನ್ನು 'ಸನ್ನಾಸಿ ಮಂತ್ರಿ' ಎಂದ ಪವನ್

  ಸಿಎಂ ಅನ್ನು 'ಸನ್ನಾಸಿ ಮಂತ್ರಿ' ಎಂದ ಪವನ್

  ನಿನಗೆ ನನ್ನ ಮೇಲೆ ಕೋಪ ಇದ್ದರೆ ನನ್ನ ಸಿನಿಮಾಗಳನ್ನು ನಿಲ್ಲಿಸು ಅದನ್ನು ಬಿಟ್ಟು ಇಡೀಯ ಚಿತ್ರರಂಗಕ್ಕೆ ಸಮಸ್ಯೆ ಕೊಡಬೇಡ. 'ವಕೀಲ್ ಸಾಬ್‌'ಗೆ ಸಮಸ್ಯೆ ಆಗದೇ ಇದ್ದಿದ್ದರೆ ತೆಲುಗು ರಾಜ್ಯಗಳಲ್ಲಿ ಇನ್ನೂ ಹಲವು ಸಿನಿಮಾಗಳು ಬಿಡುಗಡೆ ಮಾಡುತ್ತಿದ್ದವು. ಜಾತಿ ನೋಡಿ ಜನರೊಟ್ಟಿಗೆ ಬಾಂದವ್ಯ ನಿರ್ಮಿಸಿಕೊಂಡಿಲ್ಲ, ವ್ಕ್ತಿತ್ವ ನೋಡಿ ನಿರ್ಮಿಸಿಕೊಂಡಿದ್ದೇನೆ ಎಂದು ಪವನ್ ಕಲ್ಯಾಣ್ ಆರ್ಭಟಿಸಿದ್ದಾರೆ. ಸಿಎಂ ಜಗನ್ ಅನ್ನು 'ಸನ್ಯಾನಿ ಮಂತ್ರಿ' ಎಂದು ಸಹ ಪವನ್ ಕಲ್ಯಾಣ್ ಕರೆದಿದ್ದಾರೆ. ತೆಲುಗಿನಲ್ಲಿ 'ಸನ್ನಾಸಿ' ಪದವನ್ನು ಬೈಗುಳದ ರೂಪದಲ್ಲಿ ಬಳಸಲಾಗುತ್ತದೆ.

  'ಪವರ್ ಇಲ್ಲದ ಪಿಕೆ' ಎಂದಿದ್ದ ವೈಎಸ್‌ಆರ್ ಕಾಂಗ್ರೆಸ್

  'ಪವರ್ ಇಲ್ಲದ ಪಿಕೆ' ಎಂದಿದ್ದ ವೈಎಸ್‌ಆರ್ ಕಾಂಗ್ರೆಸ್

  ಜಗನ್‌ ಪಕ್ಷಕ್ಕೂ ಪವನ್ ಕಲ್ಯಾಣ್‌ಗೂ ತೀವ್ರ ತಿಕ್ಕಾಟ ಆಂಧ್ರದಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಜಗನ್ ಪಕ್ಷ ವೈಎಸ್‌ಆರ್ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಪವನ್ ಅನ್ನು 'ಪವರ್ ಇಲ್ಲದ ಪಿಕೆ' ಎಂದು ಕರೆಯಲಾಗಿತ್ತು. ಪವನ್ ಅನ್ನು 'ಪವರ್ ಸ್ಟಾರ್' ಎಂದು ಅಭಿಮಾನಿಗಳು ಕರೆಯುತ್ತಾರೆ. ಅದನ್ನು ವ್ಯಂಗ್ಯವಾಗಿ 'ಪವರ್ ಇಲ್ಲದ ಪಿಕೆ' ಎಂದು ಜಗನ್ ಪಕ್ಷ ಕರೆದಿತ್ತು. ಇದು ಪವನ್ ಹಾಗೂ ಅವರ ಅಭಿಮಾನಿಗಳಿಗೆ ಆಕ್ರೋಶ ತಂದಿದೆ.

  ಟಿಕೆಟ್ ಮಾರಾಟಕ್ಕೆ ಪೋರ್ಟಲ್ ಬಿಡುಗಡೆ

  ಟಿಕೆಟ್ ಮಾರಾಟಕ್ಕೆ ಪೋರ್ಟಲ್ ಬಿಡುಗಡೆ

  ಚಿತ್ರಮಂದಿರದ ಟಿಕೆಟ್ ದರಗಳನ್ನು ಏರಿಕೆ ಮಾಡಬೇಕೆಂದು ತೆಲುಗು ಚಿತ್ರರಂಗ ಚಿರಂಜೀವಿ ನೇತೃತ್ವದಲ್ಲಿ ಆಂಧ್ರ ಸಿಎಂ ಜಗನ್ ಅವರನ್ನು ಕೇಳಿಕೊಂಡಿತ್ತು. ಆದರೆ ಜಗನ್, ರಾಜ್ಯದಾದ್ಯಂತ ಟಿಕೆಟ್ ಮಾರಾಟದ ಮೇಲೆ ನಿಗಾವಣೆ ಇಡಲು ಸರ್ಕಾರದಿಂದ ಹೊಸ ಪೋರ್ಟಲ್ ಬಿಡುಗಡೆ ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ಟಿಕೆಟ್‌ಗಳು ಇದೇ ಪೋರ್ಟಲ್ ಮೂಲಕವೇ ಟಿಕೆಟ್ ವಿತರಣೆ ಮಾಡಬೇಕಿದೆ. ಆ ಮೂಲಕ ಒಟ್ಟು ಟಿಕೆಟ್ ಮಾರಾಟ ಅಂಕಿ-ಅಂಶವನ್ನು ಸರ್ಕಾರ ದಾಖಲಿಸಿಕೊಂಡು ಟಿಕೆಟ್ ದರ ಏರಿಸಬೇಕೆ?ಇಳಿಸಬೇಕೆ? ತೀರ್ಮಾನ ಮಾಡಲಿದೆ. ಟಿಕೆಟ್ ದರ ಏರಿಸುವ ಮನವಿಗೆ ತೆಲಂಗಾಣ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

  English summary
  Actor, politician Pawan Kalyan lambasted on Andhra CM Jagan Mohan Reddy. He said we produced the movies why are selling them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X