Don't Miss!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಖುಷಿ' ಸುದ್ದಿ ಬಂದೇಬಿಡ್ತು: ಹೊಸ ವರ್ಷಕ್ಕೆ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್
ಸೂಪರ್ ಸ್ಟಾರ್‌ಗಳ ಸಿನಿಮಾಗಳು ಥಿಯೇಟರ್‌ಗೆ ಬರೋದು ತಡವಾಗುತ್ತಿದೆ. ಹೊಸ ಸಿನಿಮಾ ಬದಲು ಹಳೇ ಸಿನಿಮಾಗಳನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಇದೀಗ ಪವನ್ ಕಲ್ಯಾಣ್ ನಟನೆಯ 'ಖುಷಿ' ಸಿನಿಮಾ ಮತ್ತೆ ತೆರೆಗಪ್ಪಳಿಸ್ತಿದೆ.
ರಜನಿಕಾಂತ್ ನಟನೆಯ 'ಬಾಬಾ' ಸಿನಿಮಾ ರೀ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೊದಲ ವಾರವೇ 10 ಸಾವಿರ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ಬರೆದಿದೆ. ಇದೀಗ 2001ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ 'ಖುಷಿ' ಚಿತ್ರಕ್ಕೆ ನಿರ್ಮಾಪಕರು ಹೊಸ ರೂಪ ಕೊಟ್ಟಿದ್ದಾರೆ. 4K ಡಾಲ್ಬಿ ವರ್ಷನ್‌ನಲ್ಲಿ ಚಿತ್ರ ಈ ಬಾರಿ ಪ್ರೇಕ್ಷರನ್ನು ರಂಜಿಸಲಿದೆ. ಈ ಸುದ್ದಿ ಕೇಳಿ ಪವರ್ ಸ್ಟಾರ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
'ಪೋಕಿರಿ'-
'ಜಲ್ಸಾ'
ಹಿಟ್:
ಕನ್ನಡದ
ಯಾವ್ಯಾವ
ಕಲ್ಟ್
ಸಿನಿಮಾ
4K
ವರ್ಷನ್‌ನಲ್ಲಿ
ನೋಡಲು
ಬಯಸುತ್ತೀರಾ?
ಈ ವರ್ಷ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ 'ಜಲ್ಸಾ' ಸಿನಿಮಾ ರೀ ರಿಲೀಸ್ ಆಗಿತ್ತು. ಆಗ ಅಭಿಮಾನಿಗಳು 'ಖುಷಿ' ಚಿತ್ರ ತೆರೆಗೆ ತಂದಿದ್ದರೆ ಚೆನ್ನಾಗಿತ್ತು ಎಂದಿದ್ದರು. ಅಭಿಮಾನಿಗಳ ಆಸೆಯಂತೆ ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ ರೀ ರಿಲೀಸ್‌ಗೆ ರೆಡಿಯಾಗಿದೆ.

ರೊಮ್ಯಾಂಟಿಕ್ ಸಿನಿಮಾ 'ಖುಷಿ'
ತಮಿಳು ನಿರ್ದೇಶಕ ಎಸ್. ಜೆ ಸೂರ್ಯ 'ಖುಷಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಒಂದು ರೊಮ್ಯಾಂಟಿಕ್ ಕಥೆಯನ್ನು ಕಾಮಿಡಿ ಟಚ್ ಕೊಟ್ಟು ಹೇಳಿದ್ದರು. ಸಿಂಪಲ್ ಕಥೆಗೆ ಸೂರ್ಯ ಟ್ರೀಟ್‌ಮೆಂಟ್ ಮಜವಾಗಿತ್ತು. ಈ ಸಿನಿಮಾ ದೊಡ್ಡಮಟ್ಟದಲ್ಲಿ ಪವನ್ ಕಲ್ಯಾಣ್‌ಗೆ ಬ್ರೇಕ್ ಕೊಟ್ಟಿತ್ತು. ಮಣಿಶರ್ಮ ಮ್ಯೂಸಿಕ್ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು.

₹27 ಕೋಟಿ ಕಲೆಕ್ಷನ್
ತೆಲುಗಿನಲ್ಲಿ 'ಖುಷಿ' ಸಿನಿಮಾ ಬಿಡುಗಡೆ ಆಗುವುದಕ್ಕೂ ಮೊದಲು ತಮಿಳಿನಲ್ಲಿ ಈ ಕಥೆ ಹಿಟ್ ಆಗಿತ್ತು. ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಹಾಗೂ ಜ್ಯೋತಿಕಾ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಆದರೂ ತೆಲುಗಿನಲ್ಲಿ ಸಿನಿಮಾ ಅವತ್ತಿನ ಕಾಲಕ್ಕೆ 27 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಹೊಸ ವರ್ಷಕ್ಕೆ ಸ್ಪೆಷಲ್ ಟ್ರೀಟ್
ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಹೊಸ ವರ್ಷದ ಸಂಭ್ರಮದಲ್ಲಿ 'ಖುಷಿ' ಟ್ರೀಟ್ ಕೊಡ್ತಿದೆ ಚಿತ್ರತಂಡ. ಸದ್ಯಕ್ಕೆ ಪವರ್ ಸ್ಟಾರ್ ನಟನೆಯ ಯಾವುದೇ ಸಿನಿಮಾ ರಿಲೀಸ್‌ಗೆ ರೆಡಿಯಿಲ್ಲ. ಹಾಗಾಗಿ ಇಯರ್ ಎಂಡಿಂಗ್ ಸಂದರ್ಭದಲ್ಲಿ 'ಖುಷಿ' ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರಲಾಗುತ್ತಿದೆ. 'ಖುಷಿ' ಸಿನಿಮಾ ನಿರ್ಮಿಸಿದ್ದ ಎ. ಎಂ ರತ್ನಂ ಈಗ ಪವನ್ ನಟನೆಯ 'ಹರಿಹರ ವೀರಮಲ್ಲು' ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ.

ಸಿನಿಮಾ ರೀ ರಿಲೀಸ್ ಟ್ರೆಂಡ್
ಹಳೇ ಸಿನಿಮಾವನ್ನು ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಹಲವು ವರ್ಷಗಳಿಂದ ಎಲ್ಲಾ ಇಂಡಸ್ಟ್ರಿಗಳಲ್ಲೂ ನಡೀತಿದೆ. ಆದರೆ ಈ ವರ್ಷ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ 'ಪೋಕಿರಿ' ಆಗಿ ಮತ್ತೆ ಬಂದು ಸದ್ದು ಮಾಡಿದ್ದರು. ನಂತರ ಪವನ್ ನಟನೆಯ 'ಜಲ್ಸಾ' ಆ ದಾಖಲೆ ಮುರಿದಿತ್ತು. ಬಾಲಕೃಷ್ಣ ನಟನೆಯ 'ಚನ್ನಕೇಶವ ರೆಡ್ಡಿ' ಕೂಡ ಇದೇ ರೀತಿ ಸದ್ದು ಮಾಡಿತ್ತು. ಇದೀಗ ಆ ಸಾಲಿಗೆ 'ಖುಷಿ' ಕೂಡ ಸೇರಿಕೊಳ್ತಿದೆ.