For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಹುಟ್ಟುಹಬ್ಬ: ಹಾಡು ಬಿಡುಗಡೆ, ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

  |

  ಇಂದು (ಸೆಪ್ಟೆಂಬರ್ 02) ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬ. ಇಂದಿಗೆ ಪವನ್ ಕಲ್ಯಾಣ್‌ಗೆ ಬರೋಬ್ಬರಿ 50 ವರ್ಷವಾಗಿದೆ.

  ಪವನ್ ಕಲ್ಯಣ್ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾಗಳ ಅಪ್‌ಡೇಟ್‌ಗಳು ಹೊರಬಿದ್ದಿವೆ. ಪವನ್ ಕಲ್ಯಾಣ್ ನಟಿಸಿರುವ 'ಭೀಮ್ಲಾ ನಾಯಕ್' ಸಿನಿಮಾದ ಹಾಡು ಬಿಡುಗಡೆ ಆಗಿದ್ದರೆ, ಮತ್ತೊಂದು ಸಿನಿಮಾ 'ಹರಿಹರ ವೀರ ಮಲ್ಲು' ಬಿಡುಗಡೆ ದಿನಾಂಕ ಪ್ರಕಟವಾಗಿದೆ.

  'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿರುವ 'ಭೀಮ್ಲ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸಿದ್ದು ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಇಂದು ಪವನ್ ಕಲ್ಯಾಣ್ ಹುಟ್ಟುಹಬ್ಬದ ಸಂದರ್ಭದಲ್ಲಿ 'ಭಿಮ್ಲ ನಾಯಕ್' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

  'ಭೀಮ್ಲ ನಾಯಕ್' ಸಿನಿಮಾದ ಟೈಟಲ್ ಹಾಡು ಇದಾಗಿದ್ದು, ಜನಪದ ಮಾದರಿ ಹಾಗೂ ಫ್ಯೂಷನ್ ಶೈಲಿಯಲ್ಲಿ ಮಿಕ್ಸ್ ಮಾಡಿ ಮಾಡಿರುವ ಈ ಹಾಡು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಸಿನಿಮಾಕ್ಕೆ ಎಸ್.ತಮನ್ ಸಂಗೀತ ನೀಡಿದ್ದು, ಇದೀಗ ಬಿಡುಗಡೆ ಆಗಿರುವ ಹಾಡನ್ನು ತಮನ್, ಶ್ರೀಕೃಷ್ಣ, ಪೃಥ್ವಿ ಚಂದ್ರ, ರಾಮ್ ಮಿರಿಯಾಲಾ ಹಾಡಿದ್ದಾರೆ. ಇದೀಗ ಬಿಡುಗಡೆ ಆಗಿರುವ ಹಾಡಿನಲ್ಲಿ ತಮನ್, ಶಿವಮಣಿ ಇನ್ನೂ ಕೆಲವರು ಕಾಣಿಸಿಕೊಂಡಿದ್ದಾರೆ.

  'ಭೀಮ್ಲ ನಾಯಕ್' ಸಿನಿಮಾವನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕತೆ-ಸಂಭಾಷಣೆಯನ್ನು ನಿರ್ದೇಶಕ ತ್ರಿವಿಕ್ರಮ್ ಬರೆದಿದ್ದಾರೆ. ಸಿನಿಮಾವು ಜನವರಿ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಸಹ ನಟಿಸಿದ್ದು, ಕನ್ನಡತಿ ನಿತ್ಯಾ ಮೆನನ್, ಐಶ್ವರ್ಯಾ ರಾಜೇಶ್ ಸಹ ಇದ್ದಾರೆ.

  ಪವನ್ ಕಲ್ಯಾಣ್ ನಟಿಸುತ್ತಿರುವ ಮತ್ತೊಂದು ಸಿನಿಮಾ 'ಹರಿಹರ ವೀರ ಮಲ್ಲು' ಚಿತ್ರತಂಡದಿಂದಲೂ ಒಂದು ಮಹತ್ವದ ಅಪ್‌ಡೇಟ್ ಅನ್ನು ಹುಟ್ಟುಹಬ್ಬದ ಸಂದರ್ಭಕ್ಕೆ ಹೊರಬಿಡಲಾಗಿದೆ. ಕ್ರಿಶ್ ನಿರ್ದೇಶಿಸುತ್ತಿರುವ ಈ ಐತಿಹಾಸಿಕ ಕತೆ ಹೊಂದಿರುವ ಸಿನಿಮಾ 2022ರ ಏಪ್ರಿಲ್ 29ರಂದು ಬಿಡುಗಡೆ ಆಗಲಿದೆ.

  'ಹರಿಹರ ವೀರ ಮಲ್ಲು' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಯಾಗಿ ನಟಿ ನಿಧಿ ಅಗರ್ವಾಲ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ಅರ್ಜುನ್ ರಾಮ್‌ಪಾಲ್, ಜಾಕ್ವೆಲಿನ್ ಫರ್ನಾಂಡೀಸ್ ಅವರುಗಳ ಸಹ ಇದ್ದಾರೆ. ಜೊತೆಗೆ ಆದಿತ್ಯ ಮೆನನ್, ಶುಭಲೇಖ ಸುಧಾಕರ್ ಸಹ ಇದ್ದಾರೆ. ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಐತಿಹಾಸಿಕ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Actor Pawan Kalyan starrer Hari Hara Veera Mallu movie release date announced. Movie will release on April 19, 2022.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X