For Quick Alerts
  ALLOW NOTIFICATIONS  
  For Daily Alerts

  ''Are you a virgin?'' ಪ್ರಶ್ನೆ ಕೇಳುತ್ತಿದ್ದಾರೆ ಪವನ್ ಕಲ್ಯಾಣ್!

  |

  ಪವನ್ ಕಲ್ಯಾಣ್ ನಟಿಸಿರುವ 'ವಕೀಲ್ ಸಾಬ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಟ್ರೇಲರ್ ನೋಡಿದರೆ 'ಪವನ್ ಕಲ್ಯಾಣ್ ಮಾದರಿ ಸಿನಿಮಾ' ಆಗಿದ್ದೂ ಸಹ ಪರಿಣಾಮಕಾರಿ ಸಂದೇಶವೊಂದನ್ನು ಸಮಾಜಕ್ಕೆ ನೀಡುವ ಪ್ರಯತ್ನ ಎದ್ದು ಕಾಣುತ್ತಿದೆ.

  ಎರಡು ನಿಮಿಷಕ್ಕಿಂತಲೂ ತುಸು ಹೆಚ್ಚಿರುವ ಟ್ರೇಲರ್‌ನಲ್ಲಿಯೇ ಪವನ್ ಕಲ್ಯಾಣ್ ಮಿಂಚು ಹರಿಸುತ್ತಾರೆ. ಇನ್ನು ಸಿನಿಮಾದಲ್ಲಿ ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸುವುದು ಪಕ್ಕಾ. 'ಮಾಸ್' ವ್ಯಕ್ತಿಯೊಬ್ಬ ಅಮಾಯಕ ಹೆಣ್ಣುಮಕ್ಕಳ ಪರವಾಗಿ ನಿಂತು ನ್ಯಾಯಾಲಯದಲ್ಲಿ ಹಾಗೂ ಹೊರಗೆ ಹೋರಾಡುವ ಕತೆಯನ್ನು ಸಿನಿಮಾ ಹೊಂದಿದೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

  ಟ್ರೇಲರ್‌ನಲ್ಲಿ ನ್ಯಾಯಾಲಯದ ದೃಶ್ಯಗಳ ಬಿಟ್‌ಗಳು ಹೆಚ್ಚಿಗಿವೆ. ಪವನ್ ಕಲ್ಯಾಣ್‌ ಅವರ ಸಿಟ್ಟು, ಮಾಸ್ ಲುಕ್, ಫೈಟ್ಸ್, ಖಡಕ್ ಡೈಲಾಗ್‌ ಎಲ್ಲದರ ಸೂಕ್ಷ್ಮ ದರ್ಶನ ಟ್ರೇಲರ್‌ನಲ್ಲಿ ಮಾಡಿಸಲಾಗಿದೆ. ಜೊತೆಗೆ ಮೂವರು ಯುವತಿಯರ ಖುಷಿ, ಸಂಕಷ್ಟ, ಅಸಹಾಯಕತೆ. ವಿರೋಧಿ ಬಣದ ತಂತ್ರ, ದಬ್ಬಾಳಿಕೆಗಳೂ ಟ್ರೇಲರ್‌ನಲ್ಲಿ ಕಾಣುತ್ತವೆ.

  ಟ್ರೇಲರ್‌ನಲ್ಲಿ ಎರಡು ಬಾರಿ 'ಆರ್‌ ಯು ಎ ವರ್ಜಿನ್?' ಎಂಬ ಸಂಭಾಷಣೆ ಬರುತ್ತದೆ. ಒಮ್ಮೆ ಪ್ರಕಾಶ್ ರೈ ಕೇಳಿದರೆ ಮತ್ತೊಮ್ಮೆ ಪವನ್ ಕಲ್ಯಾಣ್ ಕೇಳುತ್ತಾರೆ. ಪ್ರಕಾಶ್ ರೈ ಯುವತಿಗೆ, ಪವನ್ ಕಲ್ಯಾಣ್ ಯುವಕನಿಗೆ ಇದೇ ಪ್ರಶ್ನೆ ಕೇಳುತ್ತಾರೆ. ಒಂದೇ ಪ್ರಶ್ನೆ, ಎರಡು ಸಂದರ್ಭದಲ್ಲಿ ನೋಡುಗರ ಮೇಲೆ, ಪ್ರಶ್ನೆ ಕೇಳಲ್ಪಟ್ಟವರ ಮೇಲೆ ಬೇರೆ-ಬೇರೆ ಪರಿಣಾಮ, ಭಾವ ಮೂಡಿಸುತ್ತದೆ. ಮಹಿಳೆಯರ ಮೇಲೆ ಹೇರಲಾಗಿರುವ ಕಟ್ಟುಪಾಡು, ಸ್ವಾತಂತ್ರ್ಯ ಹರಣ, ಇನ್ನಿತರೆ ಪೂರ್ವಾಭಿಪ್ರಾಯಗಳನ್ನು 'ವಕೀಲ್ ಸಾಬ್' ಸಿನಿಮಾ ಪ್ರಶ್ನಿಸುತ್ತದೆ. ಇದರ ಸಣ್ಣ ಝಲಕ್ ಟ್ರೇಲರ್‌ನಲ್ಲಿದೆ.

  'ವಕೀಲ್ ಸಾಬ್' ಸಿನಿಮಾ ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರು ಗಂಭೀರತೆಯಿಂದ ಮಾಡಿದ್ದ ಪಾತ್ರವನ್ನು 'ವಕೀಲ್‌ ಸಾಬ್‌'ನಲ್ಲಿ ಪವನ್‌ ಕಲ್ಯಾಣ್ ಇಮೇಜಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿ ಮಾಸ್ ಆಂಗಲ್‌ನಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಕತೆಯ ನಿರೂಪಣೆಯಲ್ಲಿ ಬದಲಾವಣೆ ಮಾಡಿರುವುದು ಸಹ ಟ್ರೇಲರ್‌ನಿಂದಲೇ ಗೊತ್ತಾಗುತ್ತಿದೆ.

  'ವಕೀಲ್ ಸಾಬ್' ಸಿನಿಮಾವು ಏಪ್ರಿಲ್ 9 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ದೊಡ್ಡ ಪಾತ್ರವರ್ಗವೇ ಇದೆ. ನೊಂದ ಯುವತಿಯರ ಪಾತ್ರದಲ್ಲಿ ನಿವೇತಾ ಥಾಮಸ್, ಅಂಜಲಿ, ಅನನ್ಯಾ ನಾಗಲ್ಲ ಇದ್ದಾರೆ. ವಿರೋಧಿ ಬಣದ ವಕೀಲನ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಪವನ್ ಕಲ್ಯಾಣ್ ಪ್ರೇಯಸಿಯಾಗಿ ಶ್ರುತಿ ಹಾಸನ್ ಇದ್ದಾರೆ. ಸಿನಿಮಾವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ, ನಿರ್ದೇಶಿಸಿರುವುದು ವೇಣು ಶ್ರೀರಾಮ್.

  English summary
  Pawan Kalyan starrer Vakeel Saab trailer released on March 29. Movie will release on April 09.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X