Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾದಲ್ಲಿ ನಟಿಸುತ್ತಿರುವುದು ಏಕೆ? ರಾಜಕೀಯಕ್ಕೆ ಬಂದಿದ್ದೇಕೆ: ವಿವರಿಸಿದ ಪವನ್ ಕಲ್ಯಾಣ್
ತೆಲುಗು ಚಿತ್ರರಂಗದಲ್ಲಿ ದೊಡ್ಡದಾಗಿ ಕೇಳಿ ಬರುತ್ತಿದ್ದ ಪವನ್ ಕಲ್ಯಾಣ್ ಹೆಸರು ಇದೀಗ ರಾಜಕೀಯ ರಂಗಕ್ಕೂ ವಿಸ್ತಾರಗೊಂಡಿದೆ.
ಆಂಧ್ರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಾ ಬರುತ್ತಿದ್ದಂತೆ ಪವನ್ ಕಲ್ಯಾಣ್ ರಾಜಕೀಯ ಆರ್ಭಟವೂ ಹೆಚ್ಚುತ್ತಾ ಬರುತ್ತಿದೆ.
ಜನಸೇನಾ ಪಕ್ಷದ ಸಂಸ್ಥಾಪಕರಾಗಿರುವ ಪವನ್ ಕಲ್ಯಾಣ್ ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಳಿಗೆ ಪಕ್ಷವನ್ನು, ಕಾರ್ಯಕರ್ತರನ್ನು, ಅಭ್ಯರ್ಥಿಗಳನ್ನು ಅಣಿಗೊಳಿಸುತ್ತಿದ್ದಾರೆ. ಈ ಬಾರಿ ಪವನ್ ಕಲ್ಯಾಣ್‌ರ ಪಕ್ಷ ಗೆಲ್ಲದಿದ್ದರೂ ಕೆಲವು ಘಟಾನುಗಘಟಿಗಳನ್ನು ಸೋಲಿಸುವುದಂತೂ ಖಂಡಿತ ಎನ್ನಲಾಗುತ್ತಿದೆ. ಹೋದಲ್ಲೆಲ್ಲ ವೀರಾವೇಶದ ಭಾಷಗಳನ್ನು ಮಾಡುತ್ತಿರುವ ಪವನ್ ಕಲ್ಯಾಣ್, ಇತ್ತೀಚೆಗೆ ಭಾಗವಹಿಸಿದ್ದ ಸಿಎ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ತಮ್ಮ ಅದೇ ಧಾಟಿಯ ಭಾಷಣ ಮುಂದುವರೆಸಿ, ತಾವು ಸಿನಿಮಾಗಳಲ್ಲಿ ನಟಿಸುತ್ತಿರುವುದು ಏಕೆ? ರಾಜಕೀಯಕ್ಕೆ ಧುಮುಕಿದ್ದು ಏಕೆ ಎಂಬುದನ್ನು ವಿವರಿಸಿದ್ದಾರೆ.

ಸಿನಿಮಾಗಳಲ್ಲಿ ನಟಿಸುವುದು ಏಕೆ? ರಾಜಕೀಯಕ್ಕೆ ಬಂದಿದ್ದು ಏಕೆ?
ನಾನು ಜೀವನದಲ್ಲಿ ಎಷ್ಟು ಯಶಸ್ವಿಯಾಗಿದ್ದೇನೆಯೋ ಗೊತ್ತಿಲ್ಲ ಎಂದಿರುವ ಪವನ್ ಕಲ್ಯಾಣ್, ನಾನು ಸಿನಿಮಾಗಳಲ್ಲಿ ನಟಿಸುವುದು ಕೇವಲ ನನ್ನ ಜೀವನಕ್ಕಾಗಿ ಅಷ್ಟೆ, ನಾನು ಬದುಕಲಷ್ಟೆ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ. ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಆಸೆಯೂ ಆಗಿರಲಿಲ್ಲ. ಆದರೆ ರಾಜಕೀಯ ನನ್ನ ಇಚ್ಛೆಯಾಗಿದೆ. ನಾನು ರಾಜಕೀಯಕ್ಕೆ ಪ್ರವೇಶ ಮಾಡಿರುವುದು ನನ್ನ ದೇಶಕ್ಕಾಗಿ ಹಾಗೂ ನನ್ನ ರಾಜ್ಯದ ಜನರಿಗಾಗಿ ಎಂದಿದ್ದಾರೆ ನಟ ಪವನ್ ಕಲ್ಯಾಣ್.

ನನ್ನ ಮೊದಲ ಸಿನಿಮಾ ಫ್ಲಾಪ್ ಆಯಿತು: ಪವನ್
''ನಾನು ನಟಿಸಿದ ಮೊದಲ ಸಿನಿಮಾ ಫ್ಲಾಪ್ ಆಯಿತು. ಆ ನಂತರ ನಟಿಸಿದ ಸಿನಿಮಾಗಳು ಸಹ ದೊಡ್ಡ ಹೆಸರು ಮಾಡಲಿಲ್ಲ. ಆದರೆ ನಾನು ಅದರಿಂದ ವಿಚಲಿತನಾಗಲಿಲ್ಲ. ನನ್ನ ಸಿನಿಮಾ ಗ್ರಾಫ್ ಏರುಮುಖದ ಕಡೆಗೆ ತಿರುಗಿದ್ದು ನನ್ನ ಏಳನೇ ಸಿನಿಮಾದ ನಂತರ. ಅಲ್ಲಿಯವರೆಗೂ ಯಾವ ಸಿನಿಮಾಗಳೂ ದೊಡ್ಡ ಹೆಸರು ಗಳಿಸಲಿಲ್ಲ. ಅದೇ ರೀತಿ ಗೆಲುವು ಸಾಧಿಸಬೇಕು ಎಂದುಕೊಂಡವನು ವಿರಮಿಸಬಾರದು. ಸಾಕಷ್ಟು ಜನರು ನನ್ನನ್ನು ನನ್ನ ಆಲೋಚನಾ ಕ್ರಮದ ಬಗ್ಗೆ ಆಶ್ಚರ್ಯದಿಂದ ಕೇಳುತ್ತಾರೆ. ಗೆಲುವು ಸಾಧಿಸಲು ಭಿನ್ನವಾದ ಆಲೋಚನಾ ಕ್ರಮ ಅವಶ್ಯಕ. ಜಯಕ್ಕಾಗಿ ಕಾಯುತ್ತಿರುವವರು ಅದಕ್ಕಾಗಿ ಶ್ರಮಿಸುತ್ತಿರುವವರು ಕಾಮ, ಕ್ರೋಧ, ಮದ, ಮತ್ಸರಗಳನ್ನೆಲ್ಲ ಬದಿಗಿಟ್ಟು ಶ್ರಮಪಡಬೇಕಾಗುತ್ತದೆ ಎಂದಿದ್ದಾರೆ ಪವನ್ ಕಲ್ಯಾಣ್.

'ಯಾವ ನಾಯಕರು, ದೇವರನ್ನು ಸಹ ಪ್ರಶ್ನಿಸದೇ ನಂಬಬೇಡಿ'
ಎಂಥಹಾ ದೊಡ್ಡ ನಾಯಕನಾಗಿದ್ದರೂ ಸಹ ಆತನನ್ನು ಗಮನಿಸಿ, ಅನುಮಾನಿಸಿ, ಪ್ರಶ್ನಿಸಿ ಆನಂತರವೇ ಒಪ್ಪಿ. ಒಂದೊಮ್ಮೆ ನಿಮ್ಮ ನಾಯಕ ಸರಿಯಾದವನಾಗಿರದಿದ್ದರೆ, ನಿಮಗೆ ಆದರ್ಶಪ್ರಾಯನಾಗಿರದಿದ್ದರೆ, ನೀವು ಅವನಿಗೆ ಆದರ್ಶಪ್ರಾಯರಾಗಿ. ಯಶಸ್ವಿ ಆದವರು, ಪ್ರಸಿದ್ಧರಾದವರೆಲ್ಲರೂ ಶ್ರೇಷ್ಠರಲ್ಲ. ಹೆಸರು, ಹಣ ಇರುವವರು ದೊಡ್ಡವರೂ ಅಲ್ಲ. ಸರಿಯಾಗಿ ಯೋಚಿಸುವ ಪ್ರತಿಭೆ ನಿಮ್ಮಲ್ಲಿದೆ. ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬುದನ್ನು ನಿರ್ಧರಿಸುವ ವಿವೇಚನೆ ನಿಮಗಿದೆ. ಹಾಗಾಗಿ ಯಾರನ್ನೂ ಕುರುಡಾಗಿ ನಂಬಬೇಡಿ. ನನ್ನನ್ನೂ ಸಹ ಸುಮ್ಮನೆ ನಂಬಬೇಡಿ ಕೊನೆಗೆ ಆ ದೇವರನ್ನು ಸಹ ಕುರುಡಾಗಿ ನಂಬಬೇಡಿ ಎಂದರು ಪವನ್ ಕಲ್ಯಾಣ್.

ಆ ಮಕ್ಕಳನ್ನು ಕ್ಷುಲ್ಲಕವಾಗಿ ಕಾಣಲಾಗುತ್ತಿದೆ: ಪವನ್
''2000 ನೇ ಇಸವಿಯ ನಂತರ ಹುಟ್ಟಿದವರನ್ನು ಕ್ಲುಲ್ಲಕವಾಗಿ, ತಮಾಷೆಯಾಗಿ ಕಾಣುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗಿದೆ. ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಕಿಲ್ಲ. ನೀವು ಸಿಎಗಳಾಗುತ್ತಿರುವವರು, ನಿಮ್ಮ ಏಳಿಗೆ ದೇಶದ ಏಳಿಗೆ, ರಾಜ್ಯದ ಏಳಿಗೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಗುರಿ ತಲುಪುವವರೆಗೆ ನಿಲ್ಲಬೇಡಿ. ನಿಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ'' ಎಂದು ಪವನ್ ಕಲ್ಯಾಣ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.