For Quick Alerts
  ALLOW NOTIFICATIONS  
  For Daily Alerts

  ಮೆಟ್ರೊ ಹತ್ತಿ ಚಿತ್ರೀಕರಣಕ್ಕೆ ಬಂದ ಪವನ್ ಕಲ್ಯಾಣ್: ಚಿತ್ರಗಳು ವೈರಲ್

  |

  ಕೊರೊನಾ ಅನ್‌ಲಾಕ್ ಬಳಿಕ ನಟ ಪವನ್ ಕಲ್ಯಾಣ್ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ವಕೀಲ್ ಸಾಬ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ.

  ಹಿಂದಿನ ಪಿಂಕ್ ಸಿನಿಮಾದ ರೀಮೇಕ್ ಆಗಿರುವ 'ವಕೀಲ್ ಸಾಬ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

  ಮಲಯಾಳಂ ಹಿಟ್ ಚಿತ್ರದ ಮೇಲೆ ಸೌತ್ ಇಂಡಸ್ಟ್ರಿ ಕಣ್ಣು, ತೆಲುಗು ನಂತರ ತಮಿಳಿನಲ್ಲಿ ರೀಮೇಕ್!

  ಸತತವಾಗಿ ಪ್ರತಿದಿನವೂ ಪವನ್ ಕಲ್ಯಾಣ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ನಿನ್ನೆ ವಿಶೇಷವಾಗಿ ಶೂಟಿಂಗ್ ಸ್ಥಳಕ್ಕೆ ಕಾರಿನಲ್ಲಿ ಹೋಗುವ ಬದಲಿಗೆ ಸಾರ್ವಜನಿಕ ಸಾರಿಗೆ ಮೆಟ್ರೊ ಅನ್ನು ಬಳಸಿದ್ದಾರೆ ಪವನ್. ನಟ ಪವನ್ ಮೆಟ್ರೋ ನಲ್ಲಿ ಪ್ರಯಾಣಿಸುತ್ತಿರುವ ಚಿತ್ರಗಳು ಸಖತ್ ವೈರಲ್ ಆಗಿವೆ.

  ಮಾದಾಪುರ್ ನಿಂದ ಮಿಯಾಪುರ್‌ಗೆ ಪ್ರಯಾಣ

  ಮಾದಾಪುರ್ ನಿಂದ ಮಿಯಾಪುರ್‌ಗೆ ಪ್ರಯಾಣ

  ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ಪವನ್ ಕಲ್ಯಾಣ್, ಹೈದರಾಬಾದ್‌ನ ಮಾದಾಪುರದಿಂದ ಮಿಯಾಪುರ್‌ಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಮಾರ್ಗಮಧ್ಯೆ ಅಮೀರ್ ಪೇಟ್ ನಿಲ್ದಾಣದಲ್ಲಿ ರೈಲು ಬದಲಿಸಿದರು.

  ದಿಲ್ ರಾಜು ಸಹ ಜೊತೆಗಿದ್ದರು

  ದಿಲ್ ರಾಜು ಸಹ ಜೊತೆಗಿದ್ದರು

  ಪವನ್ ಕಲ್ಯಾಣ್ ಜೊತೆಗೆ ಖ್ಯಾತ ನಿರ್ಮಾಪಕ ದಿಲ್ ರಾಜು ಸಹ ಮೆಟ್ರೊ ಪ್ರಯಾಣ ನಡೆಸಿದರು. ಇಬ್ಬರು ಮಾತ್ರವಲ್ಲದೆ ಇನ್ನೂ ಹಲವು ಮಂದಿ ಪವನ್ ಕಲ್ಯಾಣ್ ಜೊತೆಗೆ ಇದ್ದರು. ಪವನ್ ಕಲ್ಯಾಣ್ ಅವರು ಚಿತ್ರೀಕರಣದ ಬಟ್ಟೆಗಳಲ್ಲಿಯೇ ಅಂದರೆ ಕಪ್ಪು ಕೋಟು, ಪ್ಯಾಂಟು ಧರಿಸಿ ಮೆಟ್ರೊ ದಲ್ಲಿ ಪ್ರಯಾಣಿಸಿದರು.

  Big Buzz: ಸುದೀಪ್ ಮತ್ತು ಪವನ್ ಕಲ್ಯಾಣ್ ಕುರಿತಾದ ಸುದ್ದಿ ನಿಜನಾ?

  ಸಹಪ್ರಯಾಣಿಕರೊಂದಿಗೆ ಮಾತುಕತೆ

  ಸಹಪ್ರಯಾಣಿಕರೊಂದಿಗೆ ಮಾತುಕತೆ

  ಪವನ್ ಕಲ್ಯಾಣ್ ಮೆಟ್ರೊ ಸಂಚಾರದ ವೇಳೆ ಸಹ ಪ್ರಯಾಣಿಕರೊಂದಿಗೆ ಸಹ ಮಾತನಾಡಿದ್ದಾರೆ. ಅವರೊಟ್ಟಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಪವನ್ ಕಲ್ಯಾಣ್, ರೈಲಿನಲ್ಲಿರುವ, ಟಿಕೆಟ್ ಖರೀದಿಸುತ್ತಿರುವ, ರೈಲಿಗೆ ಕಾಯುತ್ತಿರುವ, ಸಹಪ್ರಯಾಣಿಕರೊಂದಿಗೆ ಮಾತನಾಡುತ್ತಿರುವ ಚಿತ್ರಗಳು ಸಖತ್ ವೈರಲ್ ಆಗಿವೆ.

  ಆತ್ಮೀಯ ಗೆಳೆಯನಿಗೆ ವಿಶ್ ಮಾಡಿದ D Boss | Filmibeat Kannada
  ಸಾಲು-ಸಾಲು ಸಿನಿಮಾಗಳಲ್ಲಿ ಅಭಿನಯ

  ಸಾಲು-ಸಾಲು ಸಿನಿಮಾಗಳಲ್ಲಿ ಅಭಿನಯ

  ರಾಜಕೀಯ, ಸಿನಿಮಾ ಎರಡೂ ದೋಣಿಯ ಮೇಲೆ ಕಾಲಿಟ್ಟಿದ್ದಾರೆ ಪವನ್ ಕಲ್ಯಾಣ್. ರಾಜಕೀಯದಿಂದ ತುಸು ಬಿಡುವು ಪಡೆದು ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕುಟುಂಬ, ವ್ಯಕ್ತಿಗತ ಮತ್ತು ಪಕ್ಷದ ಉದ್ದೇಶಕ್ಕಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದಿದ್ದಾರೆ ಪವನ್ ಕಲ್ಯಾಣ್.

  ಪವನ್ ಕಲ್ಯಾಣ್ ನಟನೆ ಬಿಗ್‌ ಬಜೆಟ್ ಸಿನಿಮಾಕ್ಕೆ ಕನ್ನಡತಿ ನಾಯಕಿ?

  English summary
  Pawan Kalyan took metro train to reach shooting set of Vakeel Saab in Hyderabad. Pictures getting viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X