For Quick Alerts
  ALLOW NOTIFICATIONS  
  For Daily Alerts

  Pawan Kalyan Birthday Special: ಸೋತರೂ ಗೆದ್ದರೂ ಕಮ್ಮಿ ಆಗುವುದೇ ಇಲ್ಲ ಪವರ್ ಸ್ಟಾರ್ ಕ್ರೇಜ್!

  |

  ಅಸಂಖ್ಯಾತ ಅಭಿಮಾನಿಗಳ ಆರಾಧ್ಯದೈವ ಪವರ್ ಸ್ಟಾರ್ ಪವನ್ ಕಲ್ಯಾಣ್. ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಸಹೋದರನಾದರೂ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಸ್ಟೈಲ್, ಮ್ಯಾನರಿಸಂನಿಂದ ಗುರ್ತಿಸಿಕೊಂಡ ನಟ ಪವನ್ ಕಲ್ಯಾಣ್. ಸೂಪರ್ ಹಿಟ್ ಸಿನಿಮಾಗಳ ಮೂಲಕ ಬಾಕ್ಸಾಫೀಸ್ ಶೇಕ್ ಮಾಡಿದ ಪವನ್ ಕಲ್ಯಾಣ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟಾಲಿವುಡ್ ಗಬ್ಬರ್‌ ಸಿಂಗ್‌ಗೆ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

  ಖಡಕ್ ಡೈಲಾಗ್ಸ್ ಹೊಡೆಯದೇ ಇದ್ದರೂ, ಅದ್ಭುತ ಡ್ಯಾನ್ಸರ್ ಅಲ್ಲದೇ ಇದ್ದರೂ ಪವನ್ ಕಲ್ಯಾಣ್‌ ತೆರೆಮೇಲೆ ಕಂಡರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಪವರ್ ಸ್ಟಾರ್ ಸಿನಿಮಾಗಳ ಸಕ್ಸಸ್‌ ರೇಟ್ ಕೂಡ ತುಂಬಾ ಕಮ್ಮಿ ಇದೆ. ಆದರೆ ಕ್ರೇಜ್ ಮಾತ್ರ ಸಿಕ್ಕಾಪಟ್ಟೆ ಜೋರಾಗಿದೆ. 1996ರಲ್ಲಿ 'ಅಕ್ಕಡಮ್ಮಾಯಿ ಇಕ್ಕಡಬ್ಬಾಯಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಪವನ್ ಕಲ್ಯಾಣ್ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಪವರ್‌ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಲ್ಸಾ' ಸಿನಿಮಾ 4K ವರ್ಷನ್‌ನಲ್ಲಿ ರಿಲೀಸ್ ಆಗಿ ಅಭಿಮಾನಿಗಳನ್ನು ರಂಜಿಸಿದೆ.

  ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರುಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರು

  ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯರಂಗದಲ್ಲೂ ಪವನ್ ಕಲ್ಯಾಣ್ ಅಬ್ಬರಿಸುತ್ತಿದ್ದಾರೆ. ಜನಸೇನಾ ಪಕ್ಷ ಕಟ್ಟಿ ಜನಸೇವೆ ಮಾಡಲು ಮುಂದಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡರೂ ಮತ್ತೆ ಗೆಲ್ಲುವ ವಿಶ್ವಾಸದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಆಂಧ್ರಪ್ರದೇಶದ ಸಿಎಂ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದ್ದಾರೆ.

  ತನ್ನದೇ ಸ್ವಂತ ಬ್ರ್ಯಾಂಡ್ ಸೃಷ್ಟಿಸಿಕೊಂಡ ನಟ

  ತನ್ನದೇ ಸ್ವಂತ ಬ್ರ್ಯಾಂಡ್ ಸೃಷ್ಟಿಸಿಕೊಂಡ ನಟ

  ಪವನ್ ಕಲ್ಯಾಣ್ ರಾತ್ರೋರಾತ್ರಿ ಸ್ಟಾರ್ ಆಗಲಿಲ್ಲ. ಅಣ್ಣ ಚಿರಂಜೀವಿ ಹೆಸರನ್ನು ಹೆಚ್ಚು ಬಳಸಿಕೊಳ್ಳದೇ ತನ್ನದೇ ಮಾರ್ಗದಲ್ಲಿ ಬೆಳೆದು ಬಂದವರು ಪವರ್ ಸ್ಟಾರ್. 'ತೊಲಿ ಪ್ರೇಮ' ಚಿತ್ರದಿಂದ ಯುವ ಜನತೆಯ ಮನಗೆದ್ದ ಪವನ್ ಕಲ್ಯಾಣ್ 'ಖುಷಿ' ಸಿನಿಮಾದಲ್ಲಿ ನಟಿಸಿ ಟಾಪ್ ಹೀರೊ ಅನ್ನಿಸಿಕೊಂಡರು. ಅವತ್ತಿನ ಕಾಲಕ್ಕೆ ರೊಮ್ಯಾಂಟಿಕ್ ಎಂಟರ್‌ಟೈನರ್ 'ಖುಷಿ' ಬರೆದ ದಾಖಲೆಗಳು ಒಂದೆರಡಲ್ಲ. 'ತೊಲಿ ಪ್ರೇಮ', 'ತಮ್ಮುಡು', 'ಬದ್ರಿ', 'ಖುಷಿ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಪವರ್‌ ಸ್ಟಾರ್ ಸೂಪರ್ ಸಕ್ಸಸ್ ಕಂಡರು.

  ಬಹುಮುಖ ಪ್ರತಿಭೆ ಪವನ್ ಕಲ್ಯಾಣ್

  ಬಹುಮುಖ ಪ್ರತಿಭೆ ಪವನ್ ಕಲ್ಯಾಣ್

  ನಟನೆ ಅಷ್ಟೇ ಅಲ್ಲ ನಿರ್ದೇಶಕರಾಗಿಯೂ ಪವನ್ ಕಲ್ಯಾಣ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಫೈಟ್ಸ್, ಡ್ಯಾನ್ಸ್ ಕಂಪೋಸ್ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ, ಕೆಲವೊಮ್ಮೆ ಹಾಡು ಹಾಡಿರುವುದು ಇದೆ. ತೆರೆಮೇಲೆ ಸಿಕ್ಕಾಪಟ್ಟೆ ಅಬ್ಬರಿಸುವ ಪವರ್ ಸ್ಟಾರ್ ನಿಜಜೀವನದಲ್ಲಿ ಸಿಕ್ಕಾಪಟ್ಟೆ ಕಾಮ್ ಆಗಿ ಇರುತ್ತಾರೆ. ಆತನ ಸೀದಾಸಾದಾ ವ್ಯಕ್ತಿತ್ವ ಕೂಡ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿದೆ. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ತಾನಾಯ್ತು ತನ್ನ ಕೆಲಸ ಆಯ್ತು ಎಂದು ಪವರ್ ಸ್ಟಾರ್ ಪರ್ವ ಮುಂದುವರೆದಿದೆ.

  ಪವನ್ ರಿಯಲ್ ಹೀರೊ ಇಮೇಜ್

  ಪವನ್ ರಿಯಲ್ ಹೀರೊ ಇಮೇಜ್

  ಪವರ್ ಸ್ಟಾರ್ ಪವನ್ ಕಲ್ಯಾಣ್ 'ಜಾನಿ' ಸಿನಿಮಾದಿಂದ ಸಾಕಷ್ಟು ಸೋಲುಗಳನ್ನು ಕಂಡರು. ಸುಮಾರು 10 ವರ್ಷಗಳ ಕಾಲ ಒಂದೇ ಒಂದು ಹಿಟ್ ಕೊಡೋಕೆ ಸಾಧ್ಯವಾಗಲಿಲ್ಲ. ಆದರೆ ಪವನ್ ಕಲ್ಯಾಣ್‌ಗಿರೋ ರಿಯಲ್ ಹೀರೊ ಇಮೇಜ್ ಅಭಿಮಾನಿಗಳು ಕಮ್ಮಿ ಆಗದಂತೆ ನೋಡಿಕೊಂಡಿತ್ತು. ಪವನ್ ಬರೀ ತೆರೆಮೇಲೆ ಹೀರೊ ಅಲ್ಲ, ನಿಜ ಜೀವನದಲ್ಲೂ ಹೀರೊ ಇಮೇಜ್ ಗಳಿಸಿದ್ದಾರೆ. ಅದೇ ಆತನನ್ನು ಸೋಲು ಗೆಲುವಿನ ಲೆಕ್ಕವಿಲ್ಲದೇ ಸೂಪರ್ ಸ್ಟಾರ್ ಆಗಿ ಮೆರೆಸುತ್ತಿದೆ.

  ಬಾಕ್ಸಾಫೀಸ್ ಶೇಕ್ ಮಾಡಿದ 'ಗಬ್ಬರ್ ಸಿಂಗ್'

  ಬಾಕ್ಸಾಫೀಸ್ ಶೇಕ್ ಮಾಡಿದ 'ಗಬ್ಬರ್ ಸಿಂಗ್'

  ಸೋತು ಸುಣ್ಣವಾಗಿದ್ದ ಪವರ್ ಕಲ್ಯಾಣ್‌ಗೆ ಕರಿಯರ್‌ಗೆ ಟಾನಿಕ್ ಆಗಿದ್ದು 'ಗಬ್ಬರ್ ಸಿಂಗ್' ಸಿನಿಮಾ. ಪವರ್‌ ಸ್ಟಾರ್ ಕರಿಯರ್ ಮುಗಿದೇ ಹೋಯ್ತು ಅಂದುಕೊಂಡಿದ್ದಾಗ ಬಂದ ಈ ಸಿನಿಮಾ ಹಳೇ ದಾಖಲೆಗಳನ್ನು ಮುರಿದು ಸದ್ದು ಮಾಡಿತ್ತು. 'ಅತ್ತಾರಿಂಟಕಿ ದಾರೇದಿ' ಸಿನಿಮಾ ಕೂಡ ಹಿಟ್ ಆಗಿ ಮತ್ತೆ ಪವರ್ ಸ್ಟಾರ್‌ನ ನಂಬರ್‌ ವನ್ ಸ್ಥಾನಕ್ಕೆ ಏರಿಸಿಬಿಡ್ತು. ಈ ಎರಡು ಸಿನಿಮಾಗಳು ಪವನ್ ಸಿನಿಕರಿಯರ್‌ನಲ್ಲಿ ದೊಡ್ಡ ಮೈಲುಗಲ್ಲಾಗಿದೆ. ಆ ನಂತರ ಮತ್ತೆ ಸೋಲಿನ ಸುಳಿಗೆ ಸಿಲುಕಿದ್ದ ನಟನಿಗೆ 'ವಕೀಲ್ ಸಾಬ್' ಹಾಗೂ 'ಭೀಮ್ಲಾನಾಯಕ್' ರೂಪದಲ್ಲಿ ಹಿಟ್ ಸಿಕ್ತು.

  ಪಾಲಿಟಿಕ್ಸ್‌ನಲ್ಲಿ ಪವನ್ ಕಲ್ಯಾಣ್ ಮೇನಿಯಾ

  ಪಾಲಿಟಿಕ್ಸ್‌ನಲ್ಲಿ ಪವನ್ ಕಲ್ಯಾಣ್ ಮೇನಿಯಾ

  ಚಿರಂಜೀವಿ 'ಪ್ರಜಾರಾಜ್ಯಂ' ಪಕ್ಷ ಕಟ್ಟಿ ಸೋತು ಹೋದರು. ಕಾಂಗ್ರೆಸ್ ಪಕ್ಷದ ಜೊತೆ ತಮ್ಮ ಪಕ್ಷವನ್ನು ವಿಲೀನ ಮಾಡಿದರು. ಇದೇ ಸಮಯದಲ್ಲಿ ಪವನ್ ಕಲ್ಯಾಣ್ 'ಜನಸೇನಾ ಪಕ್ಷ' ಸ್ಥಾಪಿಸಿದರು. ಇದರಿಂದ ಸಾಕಷ್ಟು ಅವಮಾನ, ಟೀಕೆಗಳನ್ನು ಎದುರಿಸುವಂತಾಯಿತು. ಅಣ್ಣನಿಂದಲೇ ಏನು ಕಿಸಿಯಲು ಸಾಧ್ಯವಾಗಲಿಲ್ಲ, ನೀನೇನು ಮಾಡುತ್ತೀಯಾ ಎಂದರು. ಅದರೆ ಯಾವುದಕ್ಕೂ ಜಗ್ಗದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯದ ಜೊತೆ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈ ವರ್ಷ 'ಭೀಮ್ಲಾ ನಾಯಕ್' ಆಗಿ ಅಬ್ಬರಿಸಿದ್ದ ಗೆದ್ದ ಪವನ್ ಕಲ್ಯಾಣ್ ಸದ್ಯ 'ಹರಿಹರ ವೀರಮಲ್ಲು', 'ಭವಧೀಯುಡು ಭಗತ್ ಸಿಂಗ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

  English summary
  Pawan Kalyan turns 51 stars Fans wish Power Star on his birthday. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X