For Quick Alerts
  ALLOW NOTIFICATIONS  
  For Daily Alerts

  ಜೂನಿಯರ್ ಎನ್‌ಟಿಆರ್ ಬಗ್ಗೆ ನೀಚವಾಗಿ ಮಾತನಾಡಿದ್ದರು ಅನುರಾಗ್ ಕಶ್ಯಪ್!

  |

  ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ಈಗ ಜೂನಿಯರ್ ಎನ್‌ ಟಿ ಆರ್ ಹೆಸರು ಎಳೆದು ತಂದಿದ್ದಾರೆ.

  ನಿರ್ದೇಶಕ ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದರು, ದೈಹಿಕವಾಗಿ ನನ್ನ ಬಳಸಿಕೊಳ್ಳಲು ಒತ್ತಡ ಹಾಕಿದ್ದರು ಎಂದು ಪಾಯಲ್ ಘೋಷ್ ದೂರು ದಾಖಲಿಸಿದ್ದಾರೆ. ಇದೇ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಮಾತನಾಡಿರುವ ಪಾಯಲ್, ಜೂನಿಯರ್ ಎನ್‌ಟಿಆರ್ ಬಗ್ಗೆ ಕಶ್ಯಪ್ ಬಹಳ ನೀಚವಾಗಿ ಮಾಡಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

  ಲೈಂಗಿಕ ಕಿರುಕುಳ ಪ್ರಕರಣ: ಎಲ್ಲಾ ಗೊತ್ತಿದ್ದರೂ ಇರ್ಫಾನ್ ಪಠಾಣ್ ಮೌನವಾಗಿರೋದು ಯಾಕೆ ಎಂದ ಪಾಯಲ್ಲೈಂಗಿಕ ಕಿರುಕುಳ ಪ್ರಕರಣ: ಎಲ್ಲಾ ಗೊತ್ತಿದ್ದರೂ ಇರ್ಫಾನ್ ಪಠಾಣ್ ಮೌನವಾಗಿರೋದು ಯಾಕೆ ಎಂದ ಪಾಯಲ್

  ಎನ್‌ಟಿಆರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು

  ಎನ್‌ಟಿಆರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು

  ''ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದ ಅನುರಾಗ್ ಕಶ್ಯಪ್, ಎನ್‌ಟಿಆರ್ ಕುರಿತು ನೀಚವಾಗಿ ಮಾತನಾಡಿದ್ದರು. ಎನ್‌ಟಿಆರ್ ಸಹ ನಿನ್ನನ್ನು ಬಳಸಿಕೊಂಡಿರ್ತಾರೆ, ನೀನು ಸತ್ಯವನ್ ಸಾವಿತ್ರಿ ರೀತಿ ಆಡಬೇಡ'' ಎಂದು ಕಶ್ಯಪ್ ಹೇಳಿದ್ದರಂತೆ.

  ಎನ್‌ಟಿಆರ್ ಜೊತೆ ನಟಿಸಿದ್ದ ಪಾಯಲ್

  ಎನ್‌ಟಿಆರ್ ಜೊತೆ ನಟಿಸಿದ್ದ ಪಾಯಲ್

  2011ರಲ್ಲಿ ತೆರೆಕಂಡಿದ್ದ 'ಊಸರವಳ್ಳಿ' ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಜೊತೆ ಪಾಯಲ್ ಘೋಷ್ ನಟಿಸಿದ್ದರು. ತಮನ್ನಾ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಪಾಯಲ್ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಹಿನ್ನೆಲೆ ಕಶ್ಯಪ್ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಪಾಯಲ್ ಹೇಳಿಕೊಂಡಿದ್ದಾರೆ.

  ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್

  ನಾನು ಕರೆದರೆ ಎಲ್ಲರು ಬರ್ತಾರೆ

  ನಾನು ಕರೆದರೆ ಎಲ್ಲರು ಬರ್ತಾರೆ

  ''ನನ್ನ ಜೊತೆ ಸಿನಿಮಾ ಮಾಡಿದ ಪ್ರತಿಯೊಬ್ಬ ಹೀರೋಯಿನ್ ಸಹ ನಾನು ಕರೆದರೆ ಬರ್ತಾರೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದರು. ಆದ್ರೆ, ಪ್ರಪಂಚಕ್ಕೆ ನಾನೊಬ್ಬಳೆ ಹೇಳಲು ಬಯಸಿದ್ದೇನೆ ಏಕೆ'' ಎಂದು ಪ್ರಶ್ನಿಸಿಕೊಂಡಿದ್ದಾರೆ.

  ಎನ್‌ಟಿಆರ್ ಬಹಳ ಒಳ್ಳೆಯ ವ್ಯಕ್ತಿ

  ಎನ್‌ಟಿಆರ್ ಬಹಳ ಒಳ್ಳೆಯ ವ್ಯಕ್ತಿ

  ಅನುರಾಗ್ ಕಶ್ಯಪ್ ಅವರು ಎನ್‌ಟಿಆರ್ ಬಗ್ಗೆ ಬಹಳ ಕೆಟ್ಟದಾಗಿ ಹೇಳಿದ್ದರು. ಆದ್ರೆ, ನಾನು ಕಂಡಂತೆ ಎನ್‌ಟಿಆರ್ ಬಹಳ ಒಳ್ಳೆಯ ವ್ಯಕ್ತಿ. ಯಾವ ಸಮಯದಲ್ಲೂ ಅವರು ಕೆಟ್ಟದಾಗಿ ನಡೆದುಕೊಂಡಿಲ್ಲ'' ಎಂದು ಪಾಯಲ್ ಘೋಷ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

  English summary
  Actress Payal Ghosh revealed that Anurag Kashyap commented very Badly about jr Ntr. what is that comment made by Anurag Kashyap?.
  Friday, November 6, 2020, 15:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X