For Quick Alerts
  ALLOW NOTIFICATIONS  
  For Daily Alerts

  ಪಿಲ್ಲೋ ಚಾಲೆಂಜ್ ಆಯ್ತು, ಪೇಪರ್ ಸುತ್ತಿಕೊಂಡ ನಟಿ: ಪತ್ರಿಕೆಯೇ ಉಡುಪಾಯ್ತು!

  |

  ಚತುರ್ಭಾಷಾ ನಟಿ ಪಾಯಲ್ ರಜಪೂತ್ ಲಾಕ್‌ಡೌನ್ ಅವಧಿಯಲ್ಲಿಯೂ ಸತತ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹಳದಿ ದಿಂಬನ್ನೇ ತಮ್ಮ ಉಡುಪನ್ನಾಗಿಸಿಕೊಂಡು ಸದ್ದು ಮಾಡಿದ್ದ ಅವರು, ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

  ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಹುಬಲಿ ಮಾಂತ್ರಿಕ | RRR | Rajmouli | NTR | Ram Charan

  ಸುಮಾರು ಹತ್ತು ದಿನಗಳ ಹಿಂದೆ ಪಾಯಲ್, ಹಳದಿ ದಿಂಬನ್ನು ಮೈಗೆ ಕಟ್ಟಿಕೊಂಡು, ಮನೆಯಲ್ಲಿ ಬೇಸರವಾಗಿದ್ದರಿಂದ ಈ ಹೊಸ ಫ್ಯಾಷನ್ ಮಾಡಿದ್ದೇನೆ ಎಂದಿದ್ದರು. ಇದನ್ನು 'ಪಿಲ್ಲೋ ಚಾಲೆಂಜ್' ಎಂದು ಕರೆದಿದ್ದರು. ಇದರಿಂದ ಪ್ರೇರಣೆಗೊಂಡ ಅನೇಕ ನಟಿಯರು ಇದೇ ರೀತಿ ದಿಂಬು ಕಟ್ಟಿಕೊಂಡು ಹೊಸ ಫ್ಯಾಷನ್‌ನ ಚಾಲೆಂಜ್ ಸ್ವೀಕರಿಸಿದ್ದರು. ನಟಿ ತಮನ್ನಾ ಕೂಡ ಇತ್ತೀಚೆಗೆ ಪಿಲ್ಲೋ ಚಾಲೆಂಜ್‌ನಲ್ಲಿ ಮಾದಕವಾಗಿ ಕಾಣಿಸಿಕೊಂಡಿದ್ದರು. ಮುಂದೆ ಓದಿ...

  ಪಾಯಲ್ ಪೇಪರ್ ಡ್ರೆಸ್

  ಪಾಯಲ್ ಪೇಪರ್ ಡ್ರೆಸ್

  'ಪಿಲ್ಲೋ ಚಾಲೆಂಜ್' ಬಳಿಕ ಪಾಯಲ್ ಮತ್ತೊಂದು ಹೊಸ ಪ್ರಯೋಗ ಮಾಡಿದ್ದಾರೆ. ಆಂಗ್ಲ ಪತ್ರಿಕೆಯೊಂದನ್ನು ಸೊಂಟ ಮತ್ತು ಎದೆಯ ಭಾಗಕ್ಕೆ ಕಟ್ಟಿಕೊಂಡಿದ್ದಾರೆ. ನನ್ನ ಹೊಸ ಔಟ್‌ಫಿಟ್ ಹೇಗಿದೆ. ಪ್ರತಿ ಔಟ್‌ಫಿಟ್‌ಅನ್ನೂ ಲೆಕ್ಕ ಹಾಕಿ ಎಂದಿದ್ದಾರೆ.

  ತಲೆದಿಂಬಿನ ಮರೆಯಲ್ಲಿ ಹಾಟ್ ತಮನ್ನಾ: ಫೋಟೋ ವೈರಲ್ತಲೆದಿಂಬಿನ ಮರೆಯಲ್ಲಿ ಹಾಟ್ ತಮನ್ನಾ: ಫೋಟೋ ವೈರಲ್

  ಮತ್ತಷ್ಟು ಪ್ರಯೋಗ ಮಾಡುತ್ತಾರಾ?

  ಮತ್ತಷ್ಟು ಪ್ರಯೋಗ ಮಾಡುತ್ತಾರಾ?

  ಲಾಕ್‌ಡೌನ್ ಹೀಗೆಯೇ ಮುಂದುವರಿದರೆ ಪಾಯಲ್ ಇನ್ನೂ ಏನೆಲ್ಲ ಹೊಸ ಬಗೆಯ ಸ್ಟೈಲ್‌ಗಳನ್ನು ಕಂಡು ಹಿಡಿಯಲಿದ್ದಾರೋ ಗೊತ್ತಿಲ್ಲ. ಅಭಿಮಾನಿಗಳಂತೂ ಇನ್ನಷ್ಟು ಹೊಸ ಪ್ರಯೋಗ ಮಾಡಿ ಎಂದು ಅವರಿಗೆ ಮನವಿ ಮಾಡುತ್ತಿದ್ದಾರೆ.

  ವಿಜಯ್ ದೇವರಕೊಂಡ ಜತೆ ಸಿನಿಮಾ ಬಯಕೆ

  ವಿಜಯ್ ದೇವರಕೊಂಡ ಜತೆ ಸಿನಿಮಾ ಬಯಕೆ

  ಆರ್ಎಸ್ 100 ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ಪಾಯಲ್ ಅವರು ಮತ್ತೆ ಟಾಲಿವುಡ್‌ಗೆ ಬರಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಪಾಯಲ್, ಅಭಿಮಾನಿಗಳೊಂದಿಗೆ ಹರಟಿದರು. ಮುಂದಿನ ಸಿನಿಮಾ ಯಾರ ಜತೆ ಮಾಡಲು ಬಯಸಿದ್ದಾಗ ಎಂಬ ಪ್ರಶ್ನೆಗೆ 'ವಿಜಯ್ ದೇವರಕೊಂಡ' ಎಂದು ಥಟ್ಟನೆ ಉತ್ತರಿಸಿದರು.

  ಈ ನಟಿಗೆ ದಿಂಬೇ ಬಟ್ಟೆಯಂತೆ!: ಹೊಸ 'ಫ್ಯಾಷನ್' ಕಂಡುಹಿಡಿದ ಪಾಯಲ್ಈ ನಟಿಗೆ ದಿಂಬೇ ಬಟ್ಟೆಯಂತೆ!: ಹೊಸ 'ಫ್ಯಾಷನ್' ಕಂಡುಹಿಡಿದ ಪಾಯಲ್

  ಕಾರ್ತಿಕೇಯ ಜತೆ ಡೇಟಿಂಗ್?

  ಕಾರ್ತಿಕೇಯ ಜತೆ ಡೇಟಿಂಗ್?

  ಆರ್ಎಕ್ಸ್ 100 ನಾಯಕ ಕಾರ್ತಿಕೇಯ ಜತೆ ಡೇಟಿಂಗ್ ಮಾಡುತ್ತಿದ್ದೀರಾ? ಎಂಬ ಕುತೂಹಲಕ್ಕೆ ಪಾಯಲ್, ತಾವಿಬ್ಬರೂ ಬಹಳ ಉತ್ತಮ ಸ್ನೇಹಿತರು. ಆ ಸ್ನೇಹವನ್ನು ಹಾಗೆಯೇ ಚೆನ್ನಾಗಿ ಇರಿಸಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.

  ಪಾರುಲ್ ಯಾದವ್ ಪೋಸ್

  ಪಾರುಲ್ ಯಾದವ್ ಪೋಸ್

  ಪಾಯಲ್ ರಜಪೂತ್ ಅವರ ಪಿಲ್ಲೋ ಚಾಲೆಂಜ್‌ಅನ್ನು ಸ್ವೀಕರಿಸಿದ್ದ ನಟಿ ಪಾರುಲ್ ಯಾದವ್ ಕೂಡ ತಮ್ಮ ದೇಹಸಿರಿಯನ್ನು ದಿಂಬಿನ ಹಿಂದೆ ಬಚ್ಚಿಟ್ಟುಕೊಂಡು ಪೋಸ್ ನೀಡಿದ್ದರು. ಪಾಯಲ್ ಒಂದು ದಿಂಬಿನಲ್ಲಿ ಪೋಸ್ ನೀಡಿದ್ದರೆ, ಪಾರುಲ್ ಬೇರೆ ಬೇರೆ ದಿಂಬುಗಳಲ್ಲಿ ಕಾಣಿಸಿಕೊಂಡಿದ್ದರು.

  ಪಿಲ್ಲೋ ಚಾಲೆಂಜ್‌ನಲ್ಲಿ ತಮನ್ನಾ

  ಪಿಲ್ಲೋ ಚಾಲೆಂಜ್‌ನಲ್ಲಿ ತಮನ್ನಾ

  ಮಿಲ್ಕ್ ಬ್ಯೂಟಿ ತಮನ್ನಾ ಸಹ ಬಿಳಿ ಬಣ್ಣದ ದಿಂಬನ್ನು ಬೆಲ್ಟ್ ಮೂಲಕ ಕಟ್ಟಿಕೊಂಡು ಮಾದಕವಾಗಿ ಪೋಸ್ ನೀಡಿದ್ದರು. ಈ ತಲೆದಿಂಬಿನ ಉಡುಪು ದಕ್ಷಿಣ ಭಾರತದಲ್ಲಿಯೂ ಟ್ರೆಂಡ್ ಆಗುತ್ತಿದೆ. ಮತ್ತಷ್ಟು ನಟಿಯರೂ ಸಮೂಹಸನ್ನಿಯಂತೆ ಇದರಲ್ಲಿ ತೊಡಗಿಸಿಕೊಂಡರೂ ಅಚ್ಚರಿಯಿಲ್ಲ.

  English summary
  Actress Payal Rajput after pillow challenge now came with an another outfit made out of newspaper.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X