For Quick Alerts
  ALLOW NOTIFICATIONS  
  For Daily Alerts

  ದುಲ್ಕರ್ ಸಲ್ಮಾನ್ ತೆಲುಗು ಸಿನಿಮಾಕ್ಕೆ ಕನ್ನಡ ಮೂಲದ ನಟಿ

  |

  ಪ್ರತಿಭಾವಂತ ನಟ ದುಲ್ಕರ್ ಸಲ್ಮಾನ್ ಈಗ ಕೇವಲ ಮಲಯಾಳಂ ಸಿನಿರಂಗದ ನಟರಾಗಿ ಉಳಿದಿಲ್ಲ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಸಿನಿಮಾ ಮಾಡಿರುವ ಅವರಿಗೆ ಮಲಯಾಳಂ ನಷ್ಟೇ ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಇದೆ.

  ದುಲ್ಕರ್ ಸಲ್ಮಾನ್ ಇದೀಗ ತಮ್ಮ ಎರಡನೇಯ ತೆಲುಗು ಸಿನಿಮಾಕ್ಕೆ ಸಹಿ ಹಾಕಿದ್ದು, ದುಲ್ಕರ್ ಎದುರು ಕರ್ನಾಟಕ ಮೂಲದ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ.

  ತೆಲುಗು ಸಿನಿಮಾಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಸ್ಪಷ್ಟನೆ ನೀಡಿದ ಪೂಜಾ ಹೆಗ್ಡೆ

  ತೆಲುಗಿನಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆ ಇದೀಗ ದುಲ್ಕರ್ ಸಿನಿಮಾದಲ್ಲಿಯೂ ನಟಿಸಲಿದ್ದು, ಪ್ರತಿಭಾವಂತ ನಟನ ಎದುರು ಹೇಗೆ ನಟಿಸುತ್ತಾರೆಂಬುದು ಕಾದು ನೋಡಬೇಕಿದೆ.

  ದುಲ್ಕರ್ ಸಲ್ಮಾನ್ ಅವರ ಎರಡನೇ ತೆಲುಗು ಸಿನಿಮಾಕ್ಕೆ 'ಅಂದಾಲ ರಾಕ್ಷಸಿ' ಎಂದು ಹೆಸರಿಟ್ಟಿದ್ದು, ಸಿನಿಮಾ ಒಂದು ಪ್ರೇಮಕತೆಯಾಗಿರಲಿದೆ. ಈ ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶಿಸುತ್ತಿದ್ದಾರೆ.

  ಅಂದಾಲ ರಾಕ್ಷಸಿ ಸಿನಿಮಾಕ್ಕೆ ವೈಜಯಂತಿ ಮೂವಿ ಹಾಗೂ ಸಪ್ನಾ ಮೂವೀಸ್ ಸಂಸ್ಥೆಗಳು ಬಂಡವಾಳ ಹೂಡಿದ್ದು, ವಿಶಾಲ್ ಚಂದ್ರಶೇಖರ್ ಸಂಗೀತ ನೀಡಲಿದ್ದಾರೆ. ಸಿನಿಮಾದಲ್ಲಿ ಸೈನಿಕನ ಪಾತ್ರ ನಿರ್ವಹಿಸಿದ್ದಾರೆ ದುಲ್ಕರ್.

  'ದಕ್ಷಿಣ ಭಾರತ ಸಿನಿಮಾದಲ್ಲಿ ಸೊಂಟ ತೋರಿಸಿದರೆ ಸಾಕು': ಪೂಜಾ ಹೆಗ್ಡೆ ವಿವಾದ

  ಈ ಮೊದಲು 'ಮಹಾನಟಿ' ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು ದುಲ್ಕರ್. ತಮಿಳಿನಲ್ಲಿ ಇತ್ತೀಚೆಗೆ ಬಿಡುಗಡೆ ಆದ 'ಕನ್ನುಂ ಕನ್ನುಂ ಕೊಲಯಾಡಿತ್ತಾಲ್' ಭಾರಿ ಹಿಟ್ ಆಯಿತು. ಅಂದಾಲ ರಾಕ್ಷಸಿ ಜೊತೆಗೆ ತಮಿಳಿನಲ್ಲಿ ವಾನ್ ಹಾಗೂ ಹೇಯ್ ಸಿನಮಿಕಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ನ 'ಕುರ್ಪ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ.

  ಇನ್ನು ನಟಿ ಪೂಜಾ ಹೆಗ್ಡೆಯಂತು ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿ. ಆಕೆಯ ಕೈಲಿ ಮೂರು ಹಿಂದಿ ಸಿನಿಮಾಗಳಿವೆ. ಪ್ರಭಾಸ್ ಜೊತೆಗಿನ ರಾಧೆ-ಶ್ಯಾಂ, ಅಖಿಲ್ ಅಕ್ಕಿನೇನಿ ಜೊತೆಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅಂದಾಲ ರಾಕ್ಷಸಿ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ.

  English summary
  Actress Pooja Hegde acting along with Malayalam star actor Dulquer Salman in his second Telugu movie 'Andala Rakshasi'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X