For Quick Alerts
  ALLOW NOTIFICATIONS  
  For Daily Alerts

  ನಟ ಪ್ರಭಾಸ್ ಮನೆ ವಿವಾದ: ನೆಲಸಮ ಮಾಡದಂತೆ ತೆಲಂಗಾಣ ಹೈ ಕೋರ್ಟ್ ಸೂಚನೆ

  |

  ವಿವಾದಿದ ತೋಟದ ಮನೆ ವಿಚಾರವಾಗಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಗೆ ಕೊಂಚ ರಿಲೀಫ್ ಸಿಕ್ಕಿದೆ. ಹೈದರಾಬಾದ್ ಹೊರವಲಯ ರಾಯ್ ದುರ್ಗ ಬಳಿ ಇರುವ ಪ್ರಭಾಸ್ ತೋಟದ ಮನೆಯನ್ನು ನೆಲಸಮ ಮಾಡದಂತೆ ತೆಲಂಗಾಣ ಹೈ ಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೆ ಮನೆಯ ಹಕ್ಕು ಪ್ರಭಾಸ್ ಗೆ ಸಿಕ್ಕಿಲ್ಲ.

  ಅಪ್ಪು ರೀತಿ ನೀವು ಕೂಡ ಮನೆಯಲ್ಲೇ ವರ್ಕ ಔಟ್ ಮಾಡಿ | Puneeth Rajkumar | Filmibeat Kannada

  ಆಂಧ್ರಪ್ರದೇಶದ ರಾಯ್ ದುರ್ಗ ಬಳಿ ಇರುವ ಪ್ರಭಾಸ್ ಫರ್ಮ್ ಹೌಸ್ ವಿವಾದದಲ್ಲಿ ಸಿಲುಕಿದೆ. ಅಕ್ರಮವಾಗಿ ಹೊಂದಿದ ಭೂಮಿ ಇದಾಗಿದ್ದು, ಅಲ್ಲಿಯೆ ಫಾರ್ಮ್ ಹೌಸ್ ನಿರ್ಮಾಣ ಮಾಡಲಾಗಿದೆ ಎಂದು ಪ್ರಭಾಸ್ ವಿರುದ್ಧ ಆರೋಪ ಮಾಡಲಾಗಿದೆ. ಸುಮಾರು 10 ವರ್ಷದಿಂದ ಈ ಭೂಮಿಗಾಗಿ ಪ್ರಭಾಸ್ ಹೋರಾಟ ನಡೆಸುತ್ತಿದ್ದು, ಇನ್ನೂ ಮುಗಿದಿಲ್ಲ. ಮುಂದೆ ಓದಿ...

  ಪ್ರಭಾಸ್ ಗೆ ಕೊಂಚ ರಿಲೀಫ್

  ಪ್ರಭಾಸ್ ಗೆ ಕೊಂಚ ರಿಲೀಫ್

  ಇತ್ತೀಚಿಗೆ ತೆಲಂಗಾಣ ಹೈ ಕೋರ್ಟ್ ನೆಲಸಮ ಮಾಡದಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ. ಅಲ್ಲದೆ ಮನೆಯನ್ನು ತಕ್ಷಣ ಸ್ವಾಧೀನ ಪಡಿಸಲು ಪ್ರಭಾಸ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿದೆ. ಮನೆಯ ಹಕ್ಕು ಸಾಧಿಸಲು ಪ್ರಭಾಸ್ ಗೆ ಸಾಧ್ಯವಾದಗಿಲ್ಲ.

  2018ರಲ್ಲಿ ಅಧಿಕಾರಿಗಳ ವಶಕ್ಕೆ

  2018ರಲ್ಲಿ ಅಧಿಕಾರಿಗಳ ವಶಕ್ಕೆ

  ಪ್ರಭಾಸ್ ಪರ ವಕೀಲರು ರಾಯ್ ದುರ್ಗ ಭೂಮಿಯನ್ನು ಕಾನೂನು ಬದ್ಧವಾಗಿ ಖರೀದಿಸಿದ್ದಾರೆಂದು ನ್ಯಾಯಾಲದಲ್ಲಿ ವಾದ ಮಂಡಿಸಿದ್ದಾರೆ. ಇನ್ನೂ 2018ರ ಡಿಸೆಂಬರ್ ನಲ್ಲಿ ಈ ಫಾರ್ಮ್ ಹೌಸ್ ಅನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ತಕ್ಷಣ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

  ಏನಿದು ವಿವಾದ?

  ಏನಿದು ವಿವಾದ?

  2005ರಲ್ಲಿ 2,083 ಎಕೆರೆ ಭೂಮಿಯನ್ನು ಖರೀದಿಸಿದ್ದಾರೆ. ಕೃಷಿ ಭೂಮಿಯನ್ನು ಖರೀದಿಸಿ ಬಂಗಲೆ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳಿಯರು ಆರೋಪ ಮಾಡಿದ್ದಾರೆ. ನಂತರ ಸರ್ಕಾರ ಮನೆ ಖಾಲಿ ಮಾಡುವಂತೆ ಸೂಚಿಸಿದೆ. ಅಲ್ಲದೆ ಸಬಂಧಪಟ್ಟ ದಾಖಲೆ ನೀಡುವಂತೆ ನೋಟೀಸ್ ನೀಡಿದೆ. ನೋಟೀಸ್ ಪ್ರಶ್ನಿಸಿ ಪ್ರಭಾಸ್ ಸೆಷನ್ ಕೋರ್ಟ್ ಮೊರೆ ಹೋಗಿದ್ದಾರೆ. ನೆಷನ್ ಕೋರ್ಟ್ ಮನೆ ಖಾಲಿ ಮಾಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ. ನಂತರ ಸರ್ಕಾರ ಹೈ ಕೋರ್ಟ್ ಮೆಟ್ಟಿಲೇರಿದೆ.

  ಕಾನೂನು ಹೋರಾಟ ಮುಂದುವರೆಸಲು ಪ್ರಭಾಸ್ ನಿರ್ಧಾರ

  ಕಾನೂನು ಹೋರಾಟ ಮುಂದುವರೆಸಲು ಪ್ರಭಾಸ್ ನಿರ್ಧಾರ

  ಈ ಕಾನೂನು ಹೋರಾಟ ಇನ್ನೂ ದೀರ್ಘಕಾಲ ಮುಂದುವರೆಯುವ ಸಾಧ್ಯತೆ ಇದೆ. ಈ ಭೂಮಿ ಐಟಿ ವಲಯಗಳ ಹೃದಯಭಾಗದಲ್ಲಿದ್ದು, ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಈ ಭೂಮಿಯನ್ನು ಭದ್ರಪಡಿಸಿಕೊಳ್ಳಲು ಕಾನೂಬದ್ಧವಾಗಿ ಹೋರಾಡಲು ಪ್ರಭಾಸ್ ನಿರ್ಧರಿಸಿದ್ದಾರಂತೆ.

  ಜಾನ್ ಸಿನಿಮಾದಲ್ಲಿ ಪ್ರಭಾಸ್

  ಜಾನ್ ಸಿನಿಮಾದಲ್ಲಿ ಪ್ರಭಾಸ್

  ಪ್ರಭಾಸ್ ಸದ್ಯ ಜಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ರಾಧ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ನಿರ್ದೇಶಕ ನಾಗ್ ಅಶ್ವಿನ್ ಅವರ ಸಿನಿಮಾದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tollwood Actor Prabhas get bigg relief from Telangana High Court in land Dispute.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X