For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗೆ ದುಬಾರಿ ಉಡುಗೊರೆ ನೀಡಿದ ನಟ ಪ್ರಭಾಸ್

  |

  ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ಪ್ರಭಾಸ್. 'ಬಾಹುಬಲಿ' ಸಿನಿಮಾದ ಬಳಿಕ ಬಳಿಕ ವಿದೇಶದಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಪ್ರಭಾಸ್.

  ತಮ್ಮ ಅಭಿಮಾನಿಗಳನ್ನು ಡಾರ್ಲಿಂಗ್ ಎಂದು ಸಂಬೋಧಿಸುವ ಪ್ರಭಾಸ್ ಅಭಿಮಾನಿಗಳ ಬಗ್ಗೆ ವಿಶೇಷ ಪ್ರೀತಿ ಇರಿಸಿಕೊಂಡಿದ್ದಾರೆ. ಆಗಾಗ್ಗೆ ಅಭಿಮಾನಿಗಳನ್ನು ಭೇಟಿ ಮಾಡಲೆಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಒಮ್ಮೆ ಹೀಗೊಂದು ಕಾರ್ಯಕ್ರಮದಲ್ಲಿ ಅಭಿಮಾನಿಗಳೊಟ್ಟಿಗೆ ವಿಶೇಷ ಫೋಟೊಶೂಟ್ ಆಯೋಜಿಸಿ ಸಾವಿರಾರು ಅಭಿಮಾನಿಗಳಿಗೆ ಫೋಟೊ ನೀಡಿದ್ದರು ಪ್ರಭಾಸ್.

  ಸಿನಿಮಾ ಕಾರ್ಯಕ್ರಮಗಳ ಹೊರತಾಗಿ ಅಭಿಮಾನಿಗಳನ್ನು ಬೇರೆಲ್ಲೂ ಪ್ರಭಾಸ್ ಭೇಟಿಯಾಗುವುದು ಬಹಳ ಅಪರೂಪ. ಆದರೆ ಇದೀಗ ವಿಶೇಷವಾಗಿ ತಮ್ಮ ವೀರಾಭಿಮಾನಿಯೊಬ್ಬನನ್ನು ಪ್ರಭಾಸ್ ಭೇಟಿಯಾಗಿದ್ದು, ಅಭಿಮಾನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

  'ಪ್ರಭಾಸ್' ಹೇರ್‌ಸ್ಟೈಲ್ ಮಾಡಿಸಿಕೊಂಡ ಅಭಿಮಾನಿ

  'ಪ್ರಭಾಸ್' ಹೇರ್‌ಸ್ಟೈಲ್ ಮಾಡಿಸಿಕೊಂಡ ಅಭಿಮಾನಿ

  ಪ್ರಭಾಸ್ ಅಭಿಮಾನಿಯೊಬ್ಬ ತಲೆ ಕೂದಲನ್ನು ತೆಗೆಸಿಕೊಂಡು ತಲೆ ಮೇಲೆ 'ಪ್ರಭಾಸ್' ಎಂದು ಹೇರ್‌ಸ್ಟೈಲ್ ಮಾಡಿಕೊಂಡಿದ್ದ. ಆ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿದ ಪ್ರಭಾಸ್, ಬಹು ಸಮಯ ಆತನೊಂದಿಗೆ ಮಾತನಾಡಿ ಸಮಯ ಕಳೆದಿದ್ದಾರೆ. ಕೊನೆಗೆ ಆತನಿಗೆ ದುಬಾರಿ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಯು ಪ್ರಭಾಸ್ ಜೊತೆಗಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿವೆ.

  ಉಡುಗೊರೆ ನೀಡುವ ಹವ್ಯಾಸ ಪ್ರಭಾಸ್‌ಗಿದೆ

  ಉಡುಗೊರೆ ನೀಡುವ ಹವ್ಯಾಸ ಪ್ರಭಾಸ್‌ಗಿದೆ

  ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಅಭ್ಯಾಸ ಪ್ರಭಾಸ್‌ಗೆ ಹೆಚ್ಚಿದೆ. ತಾವು ಕೆಲಸ ಮಾಡುವ ನಿರ್ದೇಶಕ, ನಿರ್ಮಾಪಕ, ಸಹ ನಟ-ನಟಿಯರಿಗೆ ಏನಾದರೂ ಉಡುಗೊರೆಯನ್ನು ಪ್ರಭಾಸ್ ನೀಡುತ್ತಿರುತ್ತಾರೆ. ತೆಲುಗು ಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವಾಗ ಸೆಟ್‌ಗೆ ಆಂಧ್ರ ಬಿರಿಯಾನಿ ತರಿಸುವುದು ಪ್ರಭಾಸ್‌ರ ಇಷ್ಟದ ಕಾರ್ಯಗಳಲ್ಲಿ ಒಂದು. ಕೆಲವು ದಿನಗಳ ಹಿಂದೆ ಹಿಂದಿಯ 'ಆದಿಪುರುಷ್' ಸಿನಿಮಾದ ಚಿತ್ರೀಕರಣದ ವೇಳೆ ಸೆಟ್‌ನವರಿಗೆ ಹೈದರಾಬಾದ್ ಬಿರಿಯಾನಿ ತರಿಸಿ ಕೊಟ್ಟಿದ್ದರು. ಸೈಫ್ ಅಲಿ ಖಾನ್ ಮನೆಗೂ ಬಿರಿಯಾನಿ ಕಳಿಸಿದ್ದರು. ಆ ವಿಷಯವನ್ನು ಕರೀನಾ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದರು.

  'ರಾಧೆ-ಶ್ಯಾಮ್' ಬಿಡುಗಡೆ ಆಗಲಿದೆ

  'ರಾಧೆ-ಶ್ಯಾಮ್' ಬಿಡುಗಡೆ ಆಗಲಿದೆ

  ಪ್ರಭಾಸ್ ಪ್ರಸ್ತುತ ದೇಶದ ಅತ್ಯಂತ ದುಬಾರಿ ಮತ್ತು ಬ್ಯುಸಿಯೆಸ್ಟ್ ನಟ. ಪ್ರಭಾಸ್ ನಟಿಸಿರುವ 'ರಾಧೆ-ಶ್ಯಾಮ್' ಸಿನಿಮಾ ಜನವರಿ 14 ರಂದು ಬಿಡುಗಡೆ ಆಗಲಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಮಯ, ಭವಿಷ್ಯ, ವರ್ತಮಾನಗಳನ್ನು ಒಳಗೊಂಡ ಕುತೂಹಲಕಾರಿ ಕತೆ ಇದೆ. ಇದರ ಬಳಿಕ ಈಗ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ. ಇದರ ಜೊತೆಗೆ ಹಿಂದಿಯ 'ಆದಿಪುರುಷ್' ಸಿನಿಮಾದಲ್ಲಿಯೂ ಪ್ರಭಾಸ್ ನಟಿಸುತ್ತಿದ್ದಾರೆ. 'ಆದಿಪುರುಷ್' ಸಿನಿಮಾ ರಾಮಾಯಣದ ಕತೆ ಆಗಿದ್ದು ಭಾರತದ ಅತಿ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿರಲಿದೆ. ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸುತ್ತಿದ್ದಾರೆ.

  ಮುಂಬರುವ ಸಿನಿಮಾಗಳು

  ಮುಂಬರುವ ಸಿನಿಮಾಗಳು

  ಇವುಗಳ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಅತಿಮಾನುಷ ಕತೆಯುಳ್ಳ ಫ್ಯಾಂಟಸಿ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಅಮಿತಾಬ್ ಬಚ್ಚನ್ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಕತೆಯನ್ನು ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಹಾಗೂ ನಾಗ್ ಅಶ್ವಿನ್ ಒಟ್ಟಿಗೆ ರಚಿಸಿದ್ದಾರೆ. ಅದರ ಬಳಿಕ ಹಿಂದಿಯ ಜನಪ್ರಿಯ ಆಕ್ಷನ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಅದರ ಬಳಿಕ 'ಅರ್ಜುನ್ ರೆಡ್ಡಿ' ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ಇದೆ.

  English summary
  Actor Prabhas gifted a luxury watch to his fan. Prabhas acting in 'Salaar' and 'Adipurush' movie. Prabhas's 'Radhe Shyam' movie will release in January month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X