Don't Miss!
- News
ವಿಧಾನಸಭಾ ಚುನಾವಣೆ: ಮತ್ತೆ ರಾಜ್ಯಕ್ಕೆ ಅಮಿತ್ ಶಾ, ಮತ ಬೇಟೆಗೆ ಕುಂದಗೋಳದಲ್ಲಿ ಬೃಹತ್ ಸಾರ್ವಜನಿಕ ಸಭೆ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್
'ಬಾಲಿವುಡ್‌ನಲ್ಲಿ ಅತಿ ಹೆಚ್ಚು ರೂಮರ್ ಹರಡಿಸುವವರು ಯಾರು?' ಹೀಗೊಂದು ಪ್ರಶ್ನೆಯನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಮುಂದಿಟ್ಟಾಗ ನಟಿ ಕಂಗನಾ ರಣಾವತ್ ಉತ್ತರಿಸಿದ್ದು 'ನೀವೇ ಕರಣ್' ಎಂದು. ಪ್ರಚಾರದ ಸಲುವಾಗಿ ಬಾಲಿವುಡ್‌ನಲ್ಲಿ ಎಲ್ಲರಿಗಿಂತ ಹೆಚ್ಚು ರೂಮರ್‌ಗಳನ್ನು ಹರಡಿಸಿ ಮಜಾ ತೆಗೆದುಕೊಳ್ಳುವುದು ಕರಣ್ ಜೋಹರ್ ಎನ್ನುವುದು ಬಹಿರಂಗವಾಗಿರುವ ಸಂಗತಿ. ಬಾಲಿವುಡ್ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
Recommended Video
ಆದರೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇಂತಹ ರೂಮರ್‌ಗಳು ಹೆಚ್ಚು ಸದ್ದು ಮಾಡುತ್ತವೆ. ಮತ್ತು ಕಲಾವಿದರು ಅದನ್ನು ವೈಯಕ್ತಿಕವಾಗಿ ಗಂಭೀರವಾಗಿ ಪರಿಗಣಿಸುತ್ತಾರೆ. ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ತಾರಾ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಇಬ್ಬರ ನಡುವೆ ಏನೋ ಇದೆ ಎಂಬ ಗುಸು ಗುಸು ಹರಿದಾಡುತ್ತಲೇ ಇದೆ. ಇದನ್ನು ಇಬ್ಬರೂ ನಿರಾಕರಿಸುತ್ತಲೇ ಇದ್ದಾರೆ. ಆದರೆ ಇದರ ಬಗ್ಗೆ ಕರಣ್ ಜೋಹರ್ ಕೂಡ ಮೂಗು ತೂರಿಸಿದ್ದರು. ಇದು ಪ್ರಭಾಸ್ ಅವರನ್ನು ಕೆರಳಿಸಿತ್ತು.
ಪ್ರಭಾಸ್
ಜತೆಗಿನ
ಸಂಬಂಧದ
ಬಗ್ಗೆ
ಕೊನೆಗೂ
ಬಾಯ್ಬಿಟ್ಟ
ಅನುಷ್ಕಾ
ಶೆಟ್ಟಿ
ಹೇಳಿದ್ದೇನು?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‌ನ ಸ್ವಜನಪಕ್ಷಪಾತದ ವಿರುದ್ಧದ ಚರ್ಚೆಯಲ್ಲಿ ಕೇಂದ್ರಬಿಂದುವಾಗಿರುವ ಕರಣ್, ಪ್ರಭಾಸ್-ಅನುಷ್ಕಾ ಬಗ್ಗೆ ಆಡಿದ್ದ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಮುಂದೆ ಓದಿ...

ಡೇಟಿಂಗ್ ಪ್ರಶ್ನೆ
ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಪ್ರಭಾಸ್ ಅವರನ್ನು ಆಹ್ವಾನಿಸಲಾಗಿತ್ತು. ಅವರ ಜತೆ ರಾಣಾ ದಗ್ಗುಬಾಟಿ ಮತ್ತು ನಿರ್ದೇಶಕ ಎಸ್ ಎಸ್ ರಾಜಮೌಳಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕರಣ್ ಜೋಹರ್, ನೀವು ಯಾರ ಜತೆಗಾದರೂ ಡೇಟಿಂಗ್ ನಡೆಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದರು. ಆಗ ಪ್ರಭಾಸ್ 'ಇಲ್ಲ' ಎಂದಿದ್ದರು.

ಶುರು ಮಾಡಿದ್ದು ನೀವೇ..
ನೀವು ಅನುಷ್ಕಾ ಜತೆ ಡೇಟಿಂಗ್ ನಡೆಸುತ್ತಿದ್ದೀರಿ ಎಂಬ ರೂಮರ್‌ಗಳು ಇವೆಯಲ್ಲವೇ? ಎಂದು ಕರಣ್ ಮತ್ತೊಂದು ಇಟ್ಟಿದ್ದರು. ಇದಕ್ಕೆ ಕೂಡಲೇ ಪ್ರಭಾಸ್ 'ಅದನ್ನು ಶುರುಮಾಡಿದ್ದು ನೀವೇ' ಎಂದು ಖಡಕ್ ಆಗಿ ಮತ್ತು ಚುಟುಕಾಗಿ ಪ್ರತಿಕ್ರಿಯಿಸಿದ್ದರು. ಇದು ಅನೇಕರನ್ನು ದಂಗುಬಡಿಸಿತ್ತು.
ನಿರ್ದೇಶಕರ
ಜೊತೆ
ಅನುಷ್ಕಾ
ಮದುವೆ:
ಸ್ವೀಟಿ
ಹೇಳಿದ್ದೇನು?

ಹೆಚ್ಚಿನ ಸಂಭಾವನೆ ಕೇಳಿದ್ದ ಪ್ರಭಾಸ್?
'ಬಾಹುಬಲಿ'ಯ ಯಶಸ್ಸಿನ ನಂತರ ಬಾಲಿವುಡ್ ನಟ ಪ್ರಭಾಸ್‌ಗೆ ಗಾಳ ಹಾಕಿತ್ತು. ಅದರಲ್ಲಿ ಮುಂಚೂಣಿಯಲ್ಲಿದ್ದ ಇದ್ದವರು ಕರಣ್ ಜೋಹರ್. ಬಾಲಿವುಡ್‌ಗೆ ಪ್ರಭಾಸ್ ಅವರನ್ನು ಪರಿಚಯಿಸುವ ಸಿನಿಮಾ ಮಾಡಲು ಮುಂದಾಗಿದ್ದ ಕರಣ್‌ಗೆ ಪ್ರಭಾಸ್ 30 ಕೋಟಿ ರೂ ಸಂಭಾವನೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ಹೊಂದಾಣಿಕೆ ಬಾರದೆ ಸಿನಿಮಾ ಸೆಟ್ಟೇರಲಿಲ್ಲ. ಈ ಸಂಗತಿಯನ್ನು ಪ್ರಭಾಸ್ ನಿರಾಕರಿಸಿದ್ದರು.

ಕರಣ್ ಮಾಡಿದ್ದ ವಿಚಿತ್ರ ಟ್ವೀಟ್
ಆದರೆ ಕರಣ್ ಮಾಡಿದ್ದ ಟ್ವೀಟ್ ಒಂದು ಪ್ರಭಾಸ್ ಅವರತ್ತ ಬಿಟ್ಟ ಬಾಣ ಎಂದೇ ವ್ಯಾಖ್ಯಾನಿಸಲಾಗಿತ್ತು. 'ಆತ್ಮೀಯ ಮಹಾತ್ವಾಕಾಂಕ್ಷೆಯೇ... ನೀನು ನಿನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಬೇಕೆಂದಿದ್ದರೆ ನಿನ್ನ ಶತ್ರುಗಳಿಂದ ದೂರ ಇರು.. ಹೋಲಿಕೆ!' ಎಂದು ಕರಣ್ ವಿಕ್ಷಿಪ್ತ ಟ್ವೀಟ್ ಮಾಡಿದ್ದರು.

ಎರಡನೆಯ ಆಫರ್ ರಿಜೆಕ್ಟ್
ಕರಣ್ ಜೋಹರ್ ಕಡೆಯಿಂದ ಬಂದ ಎರಡನೆಯ ಆಫರನ್ನು ಕೂಡ ಪ್ರಭಾಸ್ ತಿರಸ್ಕರಿಸಿದ್ದರು. 'ಸಾಹೋ' ಚಿತ್ರದಲ್ಲಿ ಬಿಜಿಯಾಗಿರುವುದರಿಂದ ಮುಂದಿನ ಎಂಟು-ಒಂಬತ್ತು ತಿಂಗಳು ಸಾಧ್ಯವಿಲ್ಲ ಎಂದು ಪ್ರಭಾಸ್ ಹೇಳಿದ್ದರು. ಆದರೆ ಇದುವರೆಗೂ ಪ್ರಭಾಸ್-ಕರಣ್ ಜೋಹರ್ ಜೋಡಿಯಿಂದ ಯಾವುದೇ ಸಿನಿಮಾ ಘೋಷಣೆಯಾಗಿಲ್ಲ.
ಸುಶಾಂತ್
ಸಿಂಗ್
ರಜಪೂತ್
ಸಾವಿನ
ಬಗ್ಗೆ
ಅನುಷ್ಕಾ
ಶೆಟ್ಟಿ
ಭಾವನಾತ್ಮಕ
ಬರಹ