For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಈಗ 'ವಿಕ್ರಮಾದಿತ್ಯ': ಹುಟ್ಟುಹಬ್ಬಕ್ಕೆ 'ರಾಧೇ ಶ್ಯಾಮ್' ಉಡುಗೊರೆ

  |

  'ಬಾಹುಬಲಿ' ನಂತರ ನ್ಯಾಷನಲ್ ಸ್ಟಾರ್ ಆಗಿರುವ ಪ್ರಭಾಸ್ ಅಕ್ಟೋಬರ್ 23 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 41ನೇ ವಸಂತಕ್ಕೆ ಕಾಲಿಡುತ್ತಿರುವ ಪ್ರಭಾಸ್‌ಗೆ 'ರಾಧೇ ಶ್ಯಾಮ್' ಚಿತ್ರತಂಡ ಎರಡು ದಿನಕ್ಕೂ ಮುಂಚೆಯೇ ಭರ್ಜರಿ ಉಡುಗೊರೆ ನೀಡಿದೆ.

  ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸುತ್ತಿರುವ 'ರಾಧೇ ಶ್ಯಾಮ್' ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಪ್ರಭಾಸ್ ಅವರ ಫಸ್ಟ್ ಲುಕ್ ಮತ್ತು ಪಾತ್ರ ಹೆಸರು ಬಹಿರಂಗಪಡಿಸಿದೆ.

  ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬ: 'ರಾಧೆ ಶ್ಯಾಮ್' ಸಿನಿಮಾದಿಂದ ಭರ್ಜರಿ ಗಿಫ್ಟ್ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬ: 'ರಾಧೆ ಶ್ಯಾಮ್' ಸಿನಿಮಾದಿಂದ ಭರ್ಜರಿ ಗಿಫ್ಟ್

  'ರಾಧೇ ಶ್ಯಾಮ್' ಚಿತ್ರದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಎಂಬ ಪವರ್ ಫುಲ್ ಪಾತ್ರ ನಿರ್ವಹಿಸುತ್ತಿದ್ದು, ಸ್ಟೈಲಿಶ್ ಲುಕ್ ಈಗ ಬಿಡುಗಡೆಯಾಗಿದೆ. ನೇರಳೆ ಬಣ್ಣದ ಟಿ ಶರ್ಟ್ ಧರಿಸಿರುವ ಪ್ರಭಾಸ್ ಅದರ ಮೇಲೆ ನೀಲಿ ಬಣ್ಣದ ಕೋಟ್ ಧರಿಸಿದ್ದಾರೆ. ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಹಳೆಯ ಕಾರಿನ ಮೇಲೆ ಕುಳಿತಿದ್ದಾರೆ. ಪ್ರಭಾಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಕ್ಟೋಬರ್ 13 ರಂದು ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ವಿಶೇಷವಾಗಿ ಪೂಜಾ ಹೆಗ್ಡೆಯ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ರಾಧೇ ಶ್ಯಾಮ್ ಚಿತ್ರದಲ್ಲಿ ಪೂಜಾ ಅವರು ಪ್ರೇರಣಾ ಎಂಬ ಯುವತಿಯ ಪಾತ್ರ ಮಾಡುತ್ತಿದ್ದಾರೆ.

  ರಾಧೇ ಶ್ಯಾಮ್ ಸಿನಿಮಾ ತಂಡ ಸದ್ಯ ಇಟಲಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ರಾಧ ಕೃಷ್ಣ ಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಯುವಿ ಕ್ರಿಯೇಷನ್ಸ್ ಮತ್ತು ಟಿ ಸೀರೀಸ್ ಜಂಟಿ ನಿರ್ಮಾಣ ಮಾಡುತ್ತಿದೆ.

  ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಯಾಗಲಿದೆ. ಭಾಗ್ಯಶ್ರೀ, ಮುರಳಿ ಶರ್ಮಾ, ಸಚಿನ್ ಕೇದೆಡ್ಕರ್, ಪ್ರಿಯಾದರ್ಶಿ, ರಿದ್ಧಿ ಕುಮಾರ್, ಕುನಾಲ್ ರಾಯ್ ಕಪೂರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  English summary
  Prabhas Radhe Shyam First Look Released: Introducing Prabhas as Vikramaditya from RadheShyam

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X