For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಿಕಿನಿಯಲ್ಲಿ ತೆರೆಮೇಲೆ ಅನುಷ್ಕಾ ಶೆಟ್ಟಿ ಎಂಟ್ರಿ: ಪೇಪರ್ ತೂರಿ, ಶಿಳ್ಳೆ, ಚಪ್ಪಾಳೆ ಹೊಡೆದ ಪಡ್ಡೆ ಹುಡುಗರು!

  |

  ಸೂಪರ್ ಸ್ಟಾರ್‌ಗಳ ಹುಟ್ಟುಹಬ್ಬಕ್ಕೆ ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ರೀ ರಿಲೀಸ್ ಮಾಡುವ ಟ್ರೆಂಡ್ ಟಾಲಿವುಡ್‌ನಲ್ಲಿ ನಡೀತಿದೆ. ಪ್ರಭಾಸ್ ಹುಟ್ಟುಹಬ್ಬಕ್ಕೆ ವಿಶ್ವದಾದ್ಯಂತ 'ಬಿಲ್ಲಾ' ಸಿನಿಮಾ 4K ವರ್ಷನ್ ತೆರೆಗಪ್ಪಳಿಸಿದೆ. ಸಿನಿಮಾ ನೋಡಿ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿ ಅನುಷ್ಕಾ ಶೆಟ್ಟಿ ಬಿಕಿನಿ ತೊಟ್ಟು ದರ್ಶನ ಕೊಟ್ಟಿದ್ದರು. ಸ್ವೀಟಿ ಎಂಟ್ರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

  ಮಹೇಶ್ ಬಾಬು ಹುಟ್ಟುಹಬ್ಬಕ್ಕೆ 'ಪೋಕಿರಿ' ಸಿನಿಮಾ ಹೊಸ ರೂಪದಲ್ಲಿ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಂತರ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬಂದಿದ್ದ 'ಜಲ್ಸಾ' ಸಿನಿಮಾ 'ಪೋಕಿರಿ' ದಾಖಲೆ ಮುರಿದಿತ್ತು. ನಂತರ ಬಾಲಕೃಷ್ಣ ನಟನೆಯ 'ಚೆನ್ನಕೇಶವ ರೆಡ್ಡಿ' ಮತ್ತೆ ತೆರೆಗೆ ಬಂದು ಪ್ರೇಕ್ಷಕರ ಗಮನ ಸೆಳೆದಿತ್ತು. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬಕ್ಕೆ 13 ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿದ್ದ 'ಬಿಲ್ಲಾ' ಚಿತ್ರಕ್ಕೆ ಮತ್ತೆ ಪ್ರೇಕ್ಷಕರು ಭವ್ಯ ಸ್ವಾಗತ ಕೋರಿದ್ದಾರೆ. ಥಿಯೇಟರ್‌ಗಳ ಮುಂದೆ ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ ಜೈಕಾರ ಹಾಕಿ ಬರಮಾಡಿಕೊಂಡಿದ್ದಾರೆ.

  Birthday Special: ರಾಜಮನೆತನದ ಕುಡಿ.. ಸಾವಿರಾರು ಕೋಟಿ ಸಂಪತ್ತು: ಆಸ್ತಿ ಮುಂದೆ ಪ್ರಭಾಸ್ ಸಂಪಾದನೆ ಲೆಕ್ಕಕ್ಕಿಲ್ಲ!Birthday Special: ರಾಜಮನೆತನದ ಕುಡಿ.. ಸಾವಿರಾರು ಕೋಟಿ ಸಂಪತ್ತು: ಆಸ್ತಿ ಮುಂದೆ ಪ್ರಭಾಸ್ ಸಂಪಾದನೆ ಲೆಕ್ಕಕ್ಕಿಲ್ಲ!

  ಮೆಹರ್ ರಮೇಶ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಬಿಲ್ಲಾ' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಅನುಷ್ಕಾ ಶೆಟ್ಟಿ ಮಿಂಚಿದ್ದರು. ನಮಿತಾ, ಹನ್ಸಿಕಾ ಮೊಟ್ವಾನಿ, ಕೃಷ್ಣಂರಾಜು ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ಮಣಿಶರ್ಮ ಮ್ಯೂಸಿಕ್ ಮತ್ತೊಂದು ಹೈಲೆಟ್. ಪ್ರಭಾಸ್ ಸಿನಿಕರಿಯರ್‌ಗೆ ದೊಡ್ಡ ತಿರುವು ಕೊಟ್ಟ 'ಬಿಲ್ಲಾ' ಸಿನಿಮಾ 4K ವರ್ಷನ್‌ನಲ್ಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.

  ಅನುಷ್ಕಾ ಶೆಟ್ಟಿ ಎಂಟ್ರಿಗೆ ಶಿಳ್ಳೆ, ಚಪ್ಪಾಳೆ

  ಅನುಷ್ಕಾ ಶೆಟ್ಟಿ ಎಂಟ್ರಿಗೆ ಶಿಳ್ಳೆ, ಚಪ್ಪಾಳೆ

  ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದರು. ಪಾತ್ರಕ್ಕೆ ತಕ್ಕಂತೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. 'ಬಿಲ್ಲಾ' ಚಿತ್ರಕ್ಕಾಗಿ ಗ್ಲಾಮರ್ ಡೋಸ್ ಹೆಚ್ಚಿಸಿ ಬಿಕಿನಿ ತೊಟ್ಟು ಎಲ್ಲರ ಹುಬ್ಬೇರಿಸಿದ್ದರು. ಆ ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ವೀಟಿಗೆ ಮಾಯಾ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ಸದ್ಯ ಪ್ರಭಾಸ್ ಬರ್ತ್‌ಡೇ ಸ್ಪೆಷಲ್ ಆಗಿ ಮತ್ತೆ 'ಬಿಲ್ಲಾ' ಸಿನಿಮಾ ಹೊಸ ರೂಪದಲ್ಲಿ ತೆರೆಗಪ್ಪಳಿಸಿದೆ. ತೆರೆಮೇಲೆ ಅನುಷ್ಕಾ ಶೆಟ್ಟಿ ಬಿಕಿನಿಯಲ್ಲಿ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ಪೇಪರ್ ಹರಿದು ತೂರಿ, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಆ ವಿಡಿಯೋಗಳು ಈಗ ಫುಲ್ ವೈರಲ್ ಆಗಿದೆ.

  'ಸಂಕ್ರಾಂತಿ'ಯಲ್ಲಿ ನಾಲ್ವರು ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್: ಟಾಲಿವುಡ್‌ನಲ್ಲಿ ಬಿಗ್ ಫೈಟ್!'ಸಂಕ್ರಾಂತಿ'ಯಲ್ಲಿ ನಾಲ್ವರು ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್: ಟಾಲಿವುಡ್‌ನಲ್ಲಿ ಬಿಗ್ ಫೈಟ್!

  ಸ್ವೀಟಿ ಬಿಕಿನಿ ಬಾಡಿ ನೋಡಿ ಫ್ಯಾನ್ಸ್ ಫಿದಾ

  ಸ್ವೀಟಿ ಬಿಕಿನಿ ಬಾಡಿ ನೋಡಿ ಫ್ಯಾನ್ಸ್ ಫಿದಾ

  ಬಿಕಿನಿ ತೊಟ್ಟು ಅನುಷ್ಕಾ ಶೆಟ್ಟಿ ಸ್ವಿಮ್ಮಿಂಗ್ ಪೂಲ್‌ನಿಂದ ಎದ್ದು ಬರುವ ಸೀನ್, ಸೊಂಟದ ಹಿಂಭಾಗದಲ್ಲಿ 'ಬಿಲ್ಲಾ' ಎನ್ನುವ ಟ್ಯಾಟು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಲ್ಯಾಕ್ ಕಲರ್ ಬಿಕಿನಿ, ಸ್ವೀಟಿ ಬ್ಯೂಟಿ, ಸ್ವ್ಯಾಗ್, ವಾಕಿಂಗ್ ಸ್ಟೈಲ್ ನೋಡಿ ಕಳೆದು ಹೋಗಿದ್ದಾರೆ. ಪ್ರಭಾಸ್ ಎಂಟ್ರಿ ಸೀನ್‌ಗಿಂತ ಈ ಸೀನ್‌ಗೆ ಹೆಚ್ಚು ಶಿಳ್ಳೆ, ಕೇಕೆ ಹಾಕಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಸ್ವೀಟಿಗೆ ಮನವಿ ಮಾಡುತ್ತಿದ್ದಾರೆ.

  'ಬಿಲ್ಲಾ' ಬಗ್ಗೆ ಅನುಷ್ಕಾ ತಾಯಿ ಏನಂದಿದ್ರು?

  'ಬಿಲ್ಲಾ' ಬಗ್ಗೆ ಅನುಷ್ಕಾ ತಾಯಿ ಏನಂದಿದ್ರು?

  ಚಿತ್ರದಲ್ಲಿ ಬಿಕಿನಿ ತೊಟ್ಟಿದ್ದರ ಬಗ್ಗೆ ತನ್ನ ತಾಯಿಯ ಕಾಮೆಂಟ್ಸ್ ಕೇಳಿ ಶಾಕ್ ಆಗಿತ್ತು ಎಂದು ಅನುಷ್ಕಾ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದರು. " ವೈಯಕ್ತಿಕವಾಗಿ ಆದರೂ ಸರಿ, ವೃತ್ತಿಪರವಾಗಿ ಆದರೂ ಸರಿ, ನಾನು ಕ್ರಮಬದ್ಧವಾಗಿರಬೇಕು ಎಂದು ನಮ್ಮ ತಾಯಿ ಬಯಸುತ್ತಾರೆ. ಆದರೆ 'ಬಿಲ್ಲಾ' ಚಿತ್ರ ನೋಡಿದ ನಂತರ ನಮ್ಮ ತಾಯಿ ಇನ್ನು ಸ್ಟೈಲಿಶ್ ಆಗಿ ಇರಬಹುದಿತ್ತು ಅಲ್ಲವಾ, ಅರ್ಧ ಗ್ಲಾಮರಸ್ ಆಗಿ ಇನ್ನು ಅರ್ಧ ಡೀ ಗ್ಲಾಮರಸ್ ಯಾಕೆ ಎಂದು ಕೇಳಿದ್ದರಂತೆ. ಈ ಮಾತು ಕೇಳಿ ನನಗೆ ಶಾಕ್ ಆಗಿತ್ತು, ಯಾಕೆಂದರೆ ಅವರಿಂದ ಅಂತಹ ಕಾಮೆಂಟ್ಸ್ ನಿರೀಕ್ಷಿರಲಿಲ್ಲ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದರು.

  ದೊಡ್ಡಮಟ್ಟದಲ್ಲಿ 'ಬಿಲ್ಲಾ' ರೀ- ರಿಲೀಸ್

  ದೊಡ್ಡಮಟ್ಟದಲ್ಲಿ 'ಬಿಲ್ಲಾ' ರೀ- ರಿಲೀಸ್

  ವಿಶ್ವದಾದ್ಯಂತ ನೂರಾರು ಸ್ಕ್ರೀನ್‌ಗಳಲ್ಲಿ 'ಬಿಲ್ಲಾ' 4K ವರ್ಷನ್ ರಿಲೀಸ್ ಆಗಿದೆ. 'ಪೋಕಿರಿ' ಹಾಗೂ 'ಜಲ್ಸಾ' ಸಿನಿಮಾಗಳಿಗೆ ಪೈಪೋಟಿ ಎನ್ನುವಂತೆ ಸಿನಿಮಾ ರಿಲೀಸ್ ಮಾಡಲಾಗಿದೆ. ಯುಎಸ್‌ನಲ್ಲಿ 70ಕ್ಕೂ ಅಧಿಕ ಲೊಕೇಶನ್‌ಗಳಲ್ಲಿ ಸಿನಿಮಾ ತೆರೆಗಪ್ಪಳಿಸಿದೆ. ಅದಕ್ಕೆ ತಕ್ಕಂತೆ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ ಹಿಟ್ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  ಥಿಯೇಟರ್‌ ಸೀಟ್‌ಗಳಿಗೆ ಬೆಂಕಿ

  ಥಿಯೇಟರ್‌ ಸೀಟ್‌ಗಳಿಗೆ ಬೆಂಕಿ

  ದೀಪಾವಳಿ ಸಂಭ್ರಮದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗ್ತಿದೆ. ಹಾಗಾಗಿ ಥಿಯೇಟರ್‌ಗಳು ಸಿಗದ ಕಾರಣಕ್ಕೆ ಬೆಳ್ಳಂಬೆಳಗ್ಗೆ 8 ಗಂಟೆಗೆ ಕೆಲವೆಡೆ 'ಬಿಲ್ಲಾ' ಸಿನಿಮಾ ಪ್ರದರ್ಶನ ಶುರುವಾಗಿದೆ. ಅಭಿಮಾನಿಗಳು ಬಹಳ ಜೋರಾಗಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಪಶ್ಚಿಮ ಗೋದಾವರಿಯ ತಾಡೆಪಲ್ಲಿಗೂಂಡದ ವೆಂಕಟ್ರಾಮ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಥಿಯೇಟರ್‌ ಸೀಟ್‌ಗಳ ಮೇಲೆ ಪಟಾಕಿ ಸಿಡಿಸಿದ್ದಾರೆ. ಪರಿಣಾಮ ಸೀಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಪ್ರೇಕ್ಷಕರು ಹೊರ ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

  English summary
  Prabhas Starrer Billa Re Release Theatre Response Fans Goes Crazy For Anushka shetty's Hot Bikini Look. Know More.
  Sunday, October 23, 2022, 15:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X