For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನ ಪ್ರಭಾಸ್ ನಟನೆಯ ಎರಡು ಸಿನಿಮಾ ಸೆಟ್‌ನಲ್ಲಿ ಅವಘಡ

  |

  ನಟ ಪ್ರಭಾಸ್ ನಟಿಸುತ್ತಿರುವ ಎರಡು ಸಿನಿಮಾಗಳ ಸೆಟ್‌ಗಳಲ್ಲಿ ಒಂದೇ ದಿನ ಅವಘಡ ಸಂಭವಿಸಿದೆ.

  ಒಂದೇ ದಿನ ಪ್ರಭಾಸ್ ಗೆ ಎರಡು ಕಹಿ ಸುದ್ದಿ | Filmibeat Kannada

  ನಟ ಪ್ರಭಾಸ್ ನಟಿಸುತ್ತಿರುವ ಭಾರಿ ಬಜೆಟ್ ಸಿನಿಮಾ 'ಆದಿಪುರುಷ್' ನ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲವಾದರೂ ಬೆಂಕಿಯಿಂದ ಭಾರಿ ನಷ್ಟವೇ ಉಂಟಾಯಿತು.

  ಮತ್ತೊಂದೆಡೆ ಪ್ರಭಾಸ್ ನಟಿಸಿ, ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾದ ಸೆಟ್‌ನ ಬಳಿಯೂ ಅಪಘಾತವೊಂದು ಸಂಭವಿಸಿದೆ.

  'ಸಲಾರ್' ಚಿತ್ರೀಕರಣವು ಗೋಧಾವತಿಕನಿ ಎಂಬಲ್ಲಿ ನಡೆಯುತ್ತಿದ್ದು, ಚಿತ್ರೀಕರಣ ಮುಗಿಸಿದ ಚಿತ್ರತಂಡದ ಕೆಲವರು ಹೋಟೆಲ್‌ಗೆ ವಾಪಸ್ ಬರುವಾಗ ಚಿತ್ರತಂಡವನ್ನು ಹೊತ್ತು ಬರುತ್ತಿದ್ದ ವಾಹನವು ಲಾರಿಯೊಂದಕ್ಕೆ ಗುದ್ದಿದೆ.

  ಚಿತ್ರತಂಡದ ಸದಸ್ಯರಿಗೆ ಗಾಯಕಗಳಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಮಮತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಬೇಗನೇ ಹುಷಾರಾಗಿ ಎಂದು ಪ್ರಭಾಸ್ ಹಾಗೂ ಶ್ರುತಿ ಹಾಸನ್ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.

  ಗೋಧಾವರಿ ಗಣಿಯಲ್ಲಿ ಕೆಲವು ದಿನಗಳಿಂದಲೂ ಸಲಾರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ನಿನ್ನೆಯೇ (ಜನವರಿ 02) ರಂದು ನಟ ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾ ಸೆಟ್‌ನಲ್ಲೂ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಮುಂಬೈನ ಗೊರೆಗಾಂವ್ ಪ್ರದೇಶದ ಇನೋರ್ಬಿಟ್ ಮಾಲ್ ನ ಹಿಂಭಾಗದ ರೆಟ್ರೊ ಮೈದಾನದಲ್ಲಿ ಆದಿಪುರುಷ್ ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿತ್ತು. ಸೆಟ್‌ನಲ್ಲಿ 60-70 ಜನರಿದ್ದರು. ಸಂಜೆ 4:15 ಕ್ಕೆ ಬೆಂಕಿ ಅವಘಡ ಸಂಭವಿಸಿತು. ಆದರೆ ಅಲ್ಲಿ ಯಾರಿಗೂ ಗಾಯ ಅಥವಾ ಪ್ರಾಣ ಹಾನಿ ಆಗಲಿಲ್ಲ.

  English summary
  Pabhas's Salaar movie team met with an accident near Godavarikani on January 02. Same day Prabhas's Adipurush movie set also caught fire.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X