Don't Miss!
- News
ದೇಶದ 1,000 ಸ್ಮಾರಕಗಳ ಖಾಸಗೀಕರಣಗೊಳಿಸಿದ ಸರ್ಕಾರ
- Sports
Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !
- Technology
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Finance
Padma Awards 2023: ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಯಾರು?
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬು ಹಿಟ್ ಸಿನಿಮಾದಲ್ಲಿ ಪ್ರಕಾಶ್ ರಾಜ್ ಇಷ್ಟವಿಲ್ಲದೆ ನಟಿಸಿದ್ದರಂತೆ!
ಪ್ರಕಾಶ್ ರಾಜ್ ಅಭಿನಯದ ಬಗ್ಗೆ ಯಾರೂ ಚಕಾರ ಎತ್ತುವಂತೆಯೇ ಇಲ್ಲ. ದಕ್ಷಿಣ ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ನಟರಲ್ಲಿ ಕನ್ನಡದ ಪ್ರಕಾಶ್ ರಾಜ್ ಕೂಡ ಒಬ್ಬರು. ಕನ್ನಡಕ್ಕಿಂತ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರಕಾಶ್ ಇತ್ತೀಚೆಗೆ ಸಂದರ್ಶನದಲ್ಲಿ ಒಂದು ಹೇಳಿಕೆ ನೀಡಿದ್ದಾರೆ.
ಪ್ರಕಾಶ್ ಕೆಲವೊಮ್ಮೆ ಭಾರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಅದು ಕೆಲವರಿಗೆ ಇಷ್ಟ ಆಗುತ್ತೆ ಮತ್ತೆ ಕೆಲವರಿಗೆ ಇಷ್ಟ ಆಗುವುದಿಲ್ಲ. ಕಾಮಿಡಿ ಪಾತ್ರದಲ್ಲೂ, ಖಳನಾಯಕ ಪಾತ್ರದಲ್ಲಿಯೂ ಪ್ರಕಾಶ್ ರಾಜ್ ಇಷ್ಟ ಆಗುತ್ತಾರೆ. ಆದರೆ, ಇತ್ತೀಚೆಗೆ ಪ್ರಕಾಶ್ ರಾಜ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಹೇಶ್ ಬಾಬು ಸಿನಿಮಾದ ಪಾತ್ರ ಇಷ್ಟವಿರಲಿಲ್ಲ
ಪ್ರಕಾಶ್ ರಾಜ್ ಎಂತಹದ್ದೇ ಪಾತ್ರದಲ್ಲಿ ನಟಿಸಿದರೂ ಅದು ಮೈನಸ್ ಆಗುವುದಿಲ್ಲ. ಯಾಕೆಂದರೆ, ಎಷ್ಟೇ ದೊಡ್ಡ ಪಾತ್ರ ಸಿಕ್ಕಿದರೂ, ಇಲ್ಲ ಚಿಕ್ಕ ಪಾತ್ರ ಸಿಕ್ಕಿದರೂ ಅದಕ್ಕೆ ಪ್ರಕಾಶ ರಾಜ್ ನ್ಯಾಯ ವದಗಿಸುತ್ತಾರೆ. ಇದೇ ಕಾರಣಕ್ಕೆ ಸಿನಿಪ್ರೇಮಿಗಳಿಗೆ ಪ್ರಕಾಶ್ ರಾಜ್ ಇಷ್ಟ ಆಗುತ್ತಾರೆ.
ಇತ್ತೀಚೆಗೆ ಪ್ರಕಾಶ್ ರಾಜ್ ತಮಗೆ ಇಷ್ಟವಿಲ್ಲದೆ ಒಂದು ಸಿನಿಮಾದಲ್ಲಿ ನಟಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಇಷ್ಟವಿಲ್ಲದೆ ನಟಿಸಿದ್ದೆ ಎಂದು ಪ್ರಕಾಶ್ ರಾಜ್ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಸುಳ್ಳು ಹೇಳುವ ರಾಜಕಾರಣಿ ಪ್ರಕಾಶ್ ರಾಜ್
ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಪ್ರಕಾಶ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಅನ್ಯಾಯದ ಕೆಲಸಗಳನ್ನು ಮಾಡುವ ರಾಜಕಾರಣಿಯಾಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು. ಇದೇ ಪಾತ್ರ ಪ್ರಕಾಶ್ ರಾಜ್‌ಗೆ ಇಷ್ಟವಿರಲಿಲ್ಲವಂತೆ. ಆದರೂ ಕಷ್ಟಪಟ್ಟು ನಟಿಸಿದ್ದೆ ಎಂದಿದ್ದಾರೆ.

ಸುಳ್ಳು ಹೇಳುವ ರಾಜಕಾರಣಿಯ ಪಾತ್ರ ನನಗೆ ಇಷ್ಟವಿರಲಿಲ್ಲ. ಶೂಟಿಂಗ್ ಸಮಯದಲ್ಲಿಯೂ ಇಷ್ಟವಿಲ್ಲದೆ ನಟಿಸಿದ್ದೇನೆ. ನಿಜಕ್ಕೂ ಮಹೇಶ್ ಬಾಬು ಸಿನಿಮಾದಲ್ಲಿ ನನ್ನ ಪಾತ್ರ ನನಗೆ ಇಷ್ಟವಿಲ್ಲ ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್ ಹೇಳಿದ್ದಾರೆ.
ತೆರೆಮೇಲೆ ಪಾತ್ರ ಬೇರೆನೇ ಆಗಿರುತ್ತೆ
ಸಿನಿಮಾ ಒಪ್ಪಿಕೊಳ್ಳುವ ಮುನ್ನ ಅನಿರೀಕ್ಷಿತವಾಗಿ ಏನೇನೋ ಯೋಚಿಸಿ ಗ್ರೀನ್ ಸಿಗ್ನಲ್ ಕೊಟ್ಟಿರುತ್ತೇವೆ. ಆದರೆ ಅದೇ ಪಾತ್ರವನ್ನು ತೆರೆಮೇಲೆ ನೋಡಿದಾಗ ಆ ಪಾತ್ರ ಬೇರೆಯದ್ದೇ ಆಗಿರುತ್ತೆ. ಈ ಕಾರಣ' ಸರಿಲೇರು ನೀಕೆವ್ವರು' ಸಿನಿಮಾ ಪಾತ್ರ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ 'ಬೊಮ್ಮರಿಲ್ಲು' ಮತ್ತು 'ಆಕಾಶಮಂತ' ತಮ್ಮ ಇಡೀ ವೃತ್ತಿ ಜೀವನದಲ್ಲಿ ತೃಪ್ತಿ ನೀಡಿದ ಸಿನಿಮಾಗಳು ಎಂದಿದ್ದಾರೆ.