For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ್' ಬಿಡುಗಡೆ ಮುಂದೂಡಿಕೆಯಿಂದ 'ಸಲಾರ್'ಗೆ ಸಂಕಷ್ಟ? ಚಿತ್ರರಂಗದಲ್ಲೇನಿದು ಚರ್ಚೆ?

  |

  'ಆದಿಪುರುಷ್' ಸಿನಿಮಾ ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆಗಲೇ ಸಿನಿಮಾ ಪೋಸ್ಟ್‌ ಪೋನ್‌ ಆಗುತ್ತೆ ಅನ್ನೋ ಗುಮಾನಿ ಎದ್ದಿತ್ತು. ಅಂದ್ಕೊಂತೆ ಪ್ರಭಾಸ್ ಅಭಿನಯದ ಪೌರಾಣಿಕ ಸಿನಿಮಾ ಜೂನ್ ತಿಂಗಳಿಗೆ ಮುಂದೂಡಲಾಗಿದೆ.

  ಅಸಲಿಗೆ 'ಆದಿಪುರುಷ್' ಸಂಕ್ರಾಂತಿ ಬಿಡುಗಡೆ ಆಗಬೇಕಿತ್ತು. 2023, ಸಂಕ್ರಾಂತಿಗೆ ರಿಲೀಸ್ ಮಾಡೋದು ಅಂತ ರಿಲೀಸ್ ಡೇಟ್ ಕೂಡ ಅನೌನ್ಸ್ ಕೂಡ ಮಾಡಲಾಗಿತ್ತು. ಆದರೆ, 'ಆದಿಪುರುಷ್' ಟೀಸರ್ ಸಿನಿಪ್ರಿಯರಿಗೆ ಹಿಡಿಸದೆ ಇರೋದ್ರಿಂದ ಗ್ರಾಫಿಕ್ಸ್ ಮೇಲೆ ನಿರ್ದೇಶಕ ಓಂ ರಾವತ್ ವರ್ಕ್‌ ಮಾಡುತ್ತಿದ್ದಾರೆ.

  ಸಿಂಗಲ್ ಆಗಿ ಬರ್ತಿದ್ದಾನೆ 'ಸಲಾರ್': 'ದಂಗಲ್', 'ಬಾಹುಬಲಿ', 'KGF - 2' ಬಾಕ್ಸಾಫೀಸ್ ದಾಖಲೆಗಳಿಗೆ ಜೀವಭಯ!ಸಿಂಗಲ್ ಆಗಿ ಬರ್ತಿದ್ದಾನೆ 'ಸಲಾರ್': 'ದಂಗಲ್', 'ಬಾಹುಬಲಿ', 'KGF - 2' ಬಾಕ್ಸಾಫೀಸ್ ದಾಖಲೆಗಳಿಗೆ ಜೀವಭಯ!

  ಈ ಕಾರಣ 'ಆದಿಪುರುಷ್' ಬಿಡುಗಡೆ ಮತ್ತಷ್ಟು ತಡವಾಗುತ್ತೆ. ಹೀಗಾಗಿಯೇ ಸುಮಾರು ಎಂಟು ತಿಂಗಳು ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಆದ್ರೀಗ ಈ ನಿರ್ಧಾರ ಪ್ರಭಾಸ್ ಅಭಿನಯಿಸುತ್ತಿರುವ ಮತ್ತೊಂದು ಸಿನಿಮಾ 'ಸಲಾರ್'ಗೆ ಸಂಕಷ್ಟ ತಂದೊಡ್ಡಿದೆ ಎನ್ನಲಾಗುತ್ತಿದೆ.

  'ಆದಿಪುರುಷ್' ಮುಂದಕ್ಕೆ.. ಸಲಾರ್‌ಗೆ ಸಂಕಷ್ಟ?

  'ಆದಿಪುರುಷ್' ಮುಂದಕ್ಕೆ.. ಸಲಾರ್‌ಗೆ ಸಂಕಷ್ಟ?

  'ಆದಿಪುರುಷ್' ಸಿನಿಮಾ ಬಿಡುಗಡೆಯನ್ನು ಮುಂದೂಡಿದ್ದು ಟಾಲಿವುಡ್‌ನ ಯಂಗ್ ರೆಬಲ್ ಅಭಿಮಾನಿಗಳಿಗೆ ಅಸಮಧಾನ ತರಿಸಿದೆ. ಜೊತೆಗೆ ಮುಂಬರುವ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತೆ ಅನ್ನೋ ಆತಂಕ ಎದುರಾಗಿದೆ. 'ಆದಿಪುರುಷ್' ಮುಂದೂಡಿಕೆಯಿಂದ ಮೋಸ್ಟ್ ಎಕ್ಸ್‌ಪೆಕ್ಟೆಡ್‌ ಸಿನಿಮಾ 'ಸಲಾರ್' ರಿಲೀಸ್‌ಗೆ ಎಫೆಕ್ಟ್ ಆಗುತ್ತೆ ಅನ್ನೋ ಗೊಂದಲದಲ್ಲಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೇಲೆ ಸಿನಿಪ್ರಿಯರ ನಿರೀಕ್ಷೆ ದೊಡ್ಡದಿದೆ.

  'ಸಲಾರ್' ಸೆಟ್ಟಿನಲ್ಲಿ ಡಾರ್ಲಿಂಗ್ ಪ್ರಭಾಸ್ ರಗಡ್ ಲುಕ್: ಮತ್ತೊಂದು ಫೋಟೊ ಲೀಕ್!'ಸಲಾರ್' ಸೆಟ್ಟಿನಲ್ಲಿ ಡಾರ್ಲಿಂಗ್ ಪ್ರಭಾಸ್ ರಗಡ್ ಲುಕ್: ಮತ್ತೊಂದು ಫೋಟೊ ಲೀಕ್!

  'ಸಲಾರ್' ಸಿನಿಮಾಗ್ಯಾಕೆ ಸಂಕಷ್ಟ?

  'ಸಲಾರ್' ಸಿನಿಮಾಗ್ಯಾಕೆ ಸಂಕಷ್ಟ?

  'ಆದಿಪುರುಷ್' ಹಾಗೂ 'ಸಲಾರ್' ಎರಡೂ ಪ್ರಭಾಸ್ ಸಿನಿಮಾಗಳೇ. ಇವೆರಡೂ ಬೇರೆ ರೀತಿಯ ಸಿನಿಮಾಗಳಾಗಿರೋದ್ರಿಂದ ಬಿಡುಗಡೆಗೆ ದೊಡ್ಡ ಅಂತರ ಬೇಕಿದೆ. 'ಆದಿಪುರುಷ್' ಜೂನ್ ತಿಂಗಳಲ್ಲಿ ರಿಲೀಸ್ ಆದರೆ, ಸೆಪ್ಟೆಂಬರ್‌ ತಿಂಗಳಲ್ಲಿ 'ಸಲಾರ್' ಬಿಡುಗಡೆ ಮಾಡುತ್ತಾರಾ? ಅನ್ನೋ ಅನುಮಾನವಿದೆ. ಏಕೆಂದರೆ, ಈ ಎರಡೂ ಸಿನಿಮಾಗಳ ಅಂತರ ಕೇವಲ ಮೂರು ತಿಂಗಳು ಮಾತ್ರ. ಒಂದು ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿರುವಾಗ ಇನ್ನೊಂದು ಸಿನಿಮಾ ಪ್ರಚಾರ ಅಸಾಧ್ಯ. ಹೀಗಾಗಿ ಕಮ್ಮಿ ಅಂದ್ರೂ 6 ತಿಂಗಳ ಅಂತರ ಬೇಕು ಅನ್ನೋದು ಎಕ್ಸ್‌ಪರ್ಟ್‌ಗಳ ವಾದ. ಈ ಕಾರಣಕ್ಕೆ 'ಸಲಾರ್' ರಿಲೀಸ್ ಬಗ್ಗೆನೂ ಗೊಂದಲ ಶುರುವಾಗಿದೆ.

  ಎರಡೂ ಬಿಗ್ ಬಜೆಟ್ ಸಿನಿಮಾಗಳೇ

  ಎರಡೂ ಬಿಗ್ ಬಜೆಟ್ ಸಿನಿಮಾಗಳೇ

  ಪ್ರಭಾಸ್ ಅಭಿನಯದ 'ಸಲಾರ್' ಹಾಗೂ 'ಆದಿಪುರುಷ್' ಈ ಎರಡೂ ಸಿನಿಮಾಗಳೂ ಬಿಗ್ ಬಜೆಟ್ ಸಿನಿಮಾಗಳು 'ಆದಿಪುರುಷ್' ಬಜೆಟ್ ಸುಮಾರು 500 ಕೋಟಿ ರೂಪಾಯಿ. ಹಾಗೇ 'ಸಲಾರ್' ಕೂಡ ದೊಡ್ಡ ಬಜೆಟ್ ಸಿನಿಮಾ. ಈಗಾಗಲೇ ಎರಡು ಬಿಗ್ ಬಜೆಟ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಈ ಕಾರಣಕ್ಕೆ 'ಸಲಾರ್' ಅನಿವಾರ್ಯವಾಗಿ ಮುಂದೂಡಬೇಕಾಗಿ ಬರಬಹುದು.

  'ಆದಿಪುರುಷ್' ಹಾಲಿವುಡ್ ಸಿನಿಮಾ ಟಕ್ಕರ್

  'ಆದಿಪುರುಷ್' ಹಾಲಿವುಡ್ ಸಿನಿಮಾ ಟಕ್ಕರ್

  'ಆದಿಪುರುಷ್' 2023, ಜೂನ್ 16ಕ್ಕೆ ರಿಲೀಸ್ ಡೇಟ್ ಮುಂದೂಡಿದ್ದೇನೋ ಸರಿ. ಆದರೆ, ಇದೇ ತಿಂಗಳು ಹಾಲಿವುಡ್‌ನ ಮೂರು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಜೂನ್ 2ರಂದು ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ 'ಸೈಡರ್ ಮ್ಯಾನ್: ಎಕ್ರಾಸ್‌ ದಿ ಸ್ಪೈಡರ್ ವರ್ಸ್' ರಿಲೀಸ್ ಆಗುತ್ತಿದೆ. ಜೂನ್ 9ರಂದು 'ಟ್ರಾನ್ಸ್‌ಫಾರ್ಮರ್ಸ್: ರೈಸ್‌ ಆಫ್‌ ದಿ ಬೀಸ್ಟ್', ಹಾಗೇ ಜೂನ್ 23ಕ್ಕೆ 'ದಿ ಫ್ಲ್ಯಾಶ್' ಬಿಡುಗಡೆಯಾಗುತ್ತಿದೆ. ಹೀಗಾಗಿ ಹಾಲಿವುಡ್ ಸಿನಿಮಾ ಜೊತೆ ಸೆಣೆಸಾಡಬೇಕಿದೆ.

  English summary
  Prashanth Neel And Prabhas Movie Salaar May Postpone Due To Adipurush, Know More.
  Tuesday, November 8, 2022, 23:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X