Don't Miss!
- Automobiles
ಭಾರತದಲ್ಲಿ ಆಕರ್ಷಕ ವಿನ್ಯಾಸದ 2023ರ ಬಿಎಂಡಬ್ಲ್ಯು X1 ಎಸ್ಯುವಿ ಬಿಡುಗಡೆ
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲೀಕ್ ಆಯ್ತು 'ಸಲಾರ್' ಸೆಟ್ಟಿನ ಫೋಟೊ: ಡಾರ್ಲಿಂಗ್ಸ್ ಖುಷ್ ಹುವಾ!
'ಕೆಜಿಎಫ್ 2' ಮೆಗಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಪ್ರಶಾಂತ್ ನೀಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾದ ಅಪ್‌ಡೇಟ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರಭಾಸ್ ಹಾಗೂ ಅವರ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಲೇ ಇದ್ದಾರೆ.
ಈಗ 'ಸಲಾರ್' ಸಿನಿಮಾವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿದ್ದಾರೆ. ಮತ್ತೆ ಸಿನಿಮಾ ಶೂಟಿಂಗ್ ಗ್ರ್ಯಾಂಡ್ ಆಗಿ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಪ್ರಶಾಂತ್ ನೀಲ್ ತಮ್ಮ ತಂಡದೊಂದಿಗೆ ಸಿನಿಮಾಗಾಗಿ ತಯಾರಿ ನಡೆಸಿದ್ದರು. ಈ ಕಾರಣಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಕೆಲವು ದಿನಗಳ ಹಿಂದಷ್ಟೇ ಡಾರ್ಲಿಂಗ್ ಪ್ರಭಾಸ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ.
'KGF
2',
'ಸಲಾರ್',
'NTR
31'
ಈ
3
ಸಿನಿಮಾದ
ಪೋಸ್ಟರ್
ಸ್ಟೈಲ್
ಒಂದೇ:
'ಬಘೀರ'
ಬಿಟ್ಟಿದ್ಯಾಕೆ?
|
'ಸಲಾರ್' ಸೆಟ್ಟಿನಿಂದ ಪ್ರಭಾಸ್ ಪೋಟೊ ಲೀಕ್
ಇತ್ತೀಚೆಗೆ ಪ್ರಶಾಂತ್ ನೀಲ್ 'ಸಲಾರ್' ಶೂಟಿಂಗ್ ಅನ್ನು ಫುಲ್ ಸ್ವಿಂಗ್‌ನಲ್ಲಿ ಆರಂಭಿಸಿದ್ದರು. ಅದೆಷ್ಟೇ ಸ್ಟ್ರಿಕ್ಟ್ ಆಗಿದ್ದರೂ, ಪ್ರತಿ ಬಾರಿ ಶೂಟಿಂಗ್ ಆರಂಭ ಮಾಡಿದಾಗಲೆಲ್ಲಾ ಸೆಟ್ಟಿನಿಂದ ಒಂದಲ್ಲಾ ಒಂದು ಫೋಟೊ ಲೀಕ್ ಆಗುತ್ತಲೇ ಇದೆ. ಈ ಬಾರಿ ಕೂಡ ಪ್ರಭಾಸ್ ಫೋಟೊ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತೆ ಪ್ರಭಾಸ್ ನೋಡಿ ಡಾರ್ಲಿಂಗ್ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ.

'ಸಲಾರ್' ಮೇಲೆ ಪ್ರಭಾಸ್‌ಗೆ ಹೆಚ್ಚಿದ ನಿರೀಕ್ಷೆ
'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾದ ಬಳಿಕ ಪ್ರಭಾಸ್ ಮತ್ತೆ ದೊಡ್ಡ ಮಟ್ಟದ ಸಕ್ಸಸ್ ಬೇಕಾಗಿದೆ. ಎರಡು ಸೋಲುಗಳು ಪ್ರಭಾಸ್ ನಿದ್ದೆ ಕೆಡಿಸಿದ್ದು, ಮತ್ತೊಂದು ಮೆಗಾ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ. ಈ ಕಾರಣಕ್ಕೆ 'ಸಲಾರ್' ತಂಡ ಕೂಡ ಕೆಲಸ ಮಾಡುತ್ತಿದೆ. ಆದರೆ, ಒಂದಲ್ಲ ಒಂದು ಫೋಟೊ ಸಲಾರ್ ತಂಡದಿಂದ ಲೀಕ್ ಆಗುತ್ತಿರುವುದು ಪ್ರಭಾಸ್ ಅಷ್ಟೇ ಅಲ್ಲದೆ, ಚಿತ್ರತಂಡಕ್ಕೂ ದೊಡ್ಡ ತಲೆ ನೋವಾಗಿದೆ.

'ಕೆಜಿಎಫ್ 2'ಗಿಂತ 3 ಪಟ್ಟು ದೊಡ್ಡದ 'ಸಲಾರ್'
'ಸಲಾರ್' ಸಿನಿಮಾ ಬಗ್ಗೆ ಇತ್ತೀಚೆಗೆ ಭುವನ್ ಗೌಡ ನೀಡದ ಹೇಳಿಕೆಯೊಂದು ತುಂಬಾನೇ ವೈರಲ್ ಆಗಿತ್ತು. ಛಾಯಾಗ್ರಾಹಕ ಭುವನ್ ಗೌಡ 'ಸಲಾರ್' ಕನ್ನಡ 'ಕೆಜಿಎಫ್ 2' ಸಿನಿಮಾಗಿಂತ ಎರಡರಿಂದ ಮೂರು ಪಟ್ಟು ದೊಡ್ಡ ಎಂದು ಹೇಳಿದ್ದರು. ಅಲ್ಲದೆ ಈ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಬೇಕು ಎಂಬುವ ಮಹದಾಸೆ ಹೊಂದಿದ್ದಾರೆ. ಈ ಕಾರಣಕ್ಕೆ 'ಸಲಾರ್' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ.

ಅಕ್ಟೋಬರ್‌ನಲ್ಲಿ ಶೂಟಿಂಗ್ ಮುಕ್ತಾಯ
'ಸಲಾರ್' ಸಿನಿಮಾದ ಶೂಟಿಂಗ್ ಈಗಾಗಲೇ ಶೇ.30 ರಿಂದ 35ರಷ್ಟು ಮುಗಿದಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾಗಿದೆ. ಅಲ್ಲದೆ ಅಕ್ಟೋಬರ್‌ಗೆ ಸಿನಿಮಾ ಶೂಟಿಂಗ್ ಮುಗಿಯುತ್ತೆ ಅಂತಲೂ ಹೇಳಿದ್ದಾರೆ. ಹೀಗಾಗಿ 'ಸಲಾರ್' ರಿಲೀಸ್ ಯಾವಾಗ ಅನ್ನುವ ಲೆಕ್ಕಾಚಾರಾ ಈಗಾಗಲೇ ಶುರುವಾಗಿದೆ.