For Quick Alerts
  ALLOW NOTIFICATIONS  
  For Daily Alerts

  ಬೊಂಬಾಟ್ ಅಪ್‌ಡೇಟ್ ಕೊಟ್ಟ ಸಿನಿಮಾಟೋಗ್ರಫರ್: ಶೇಷಾಚಲದಿಂದ ಥಾಯ್ಲೆಂಡ್‌ವರೆಗೆ 'ಪುಷ್ಪ'ರಾಜ್ ಸ್ಮಗ್ಲಿಂಗ್ ಕಥೆ?

  |

  'ಪುಷ್ಪ'- 2 ಅಖಾಡಕ್ಕೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಬಾಕ್ಸಾಫೀಸ್ ಶೇಕ್ ಮಾಡಿದ್ದ 'ಪುಷ್ಪ' ಸೀಕ್ವೆಲ್‌ಗಾಗಿ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಸಿನಿಮಾ ಫೋಟೊಶೂಟ್ ಮಾಡುತ್ತಿರುವುದಾಗಿ ಚಿತ್ರತಂಡ ಮಾಹಿತಿ ಕೊಟ್ಟಿತ್ತು. ಸುಕುಮಾರ್ ಪಕ್ಕಾ ಸ್ಕ್ರಿಪ್ಟ್ ಹಿಡಿದು ಶೂಟಿಂಗ್‌ಗೆ ಅಣಿಯಾಗಿದ್ದಾರೆ. ಇದೀಗ ಚಿತ್ರದ ಛಾಯಾಗ್ರಾಹಕ ಫೋಟೊವೊಂದು ಶೇಕ್ ಮಾಡಿದ್ದಾರೆ.

  ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ 'ಪುಷ್ಪ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಧೂಳೆಬ್ಬಿಸಿತ್ತು. ಹಿಂದಿ ಬೆಲ್ಟ್‌ನಲ್ಲೂ ಸದ್ದು ಮಾಡಿ ಎಲ್ಲರ ಹುಬ್ಬೇರಿಸಿತ್ತು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದರೆ ಫಹಾದ್ ಫಾಸಿಲ್ ನೆಗೆಟೀವ್ ಶೇಡ್ ರೋಲ್‌ನಲ್ಲಿ ಅಬ್ಬರಿಸಿದ್ದರು. ರಕ್ತಚಂದನದ ಸ್ಮಗ್ಲರ್ ಆಗಿ ಅಲ್ಲು ಅರ್ಜುನ್ ದರ್ಬಾರ್ ನಡೆಸಿದ್ದರು. ಫಸ್ಟ್ ಪಾರ್ಟ್ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಸಹಜವಾಗಿಯೇ ಸೆಕೆಂಡ್ ಪಾರ್ಟ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  ಬಹಳ ಹಿಂದೆಯೇ ಸೀಕ್ವೆಲ್ ಶೂಟಿಂಗ್ ಶುರುವಾಗಬೇಕಿತ್ತು. ಆದರೆ 'ಪುಷ್ಪ' ದಿ ರೈಸ್ ಸೂಪರ್ ಹಿಟ್ ಆದ ಕಾರಣ 'ಪುಷ್ಪ' ದಿ ರೂಲ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಸುಕುಮಾರ್ ಅಂಡ್ ಟೀಂ ಕಥೆಯನ್ನು ತಿದ್ದಿ ತೀಡಿ ಪಕ್ಕಾ ಆದಮೇಲೆ ಶೂಟಿಂಗ್‌ಗೆ ಮುಂದಾಗಿದ್ದಾರೆ. ಈಗಾಗಲೇ ಸೆಟ್‌ಗಳ ನಿರ್ಮಾಣ ಶುರುವಾಗಿದೆ.

  ಫೋಟೊ ಶೇರ್ ಮಾಡಿದ ಮಿರೋಸ್ಲಾ

  ಫೋಟೊ ಶೇರ್ ಮಾಡಿದ ಮಿರೋಸ್ಲಾ

  ಸದ್ಯ ರಿವೀಲ್ ಆಗಿರುವ ಫೋಟೋದಲ್ಲಿ ಅಲ್ಲು ಅರ್ಜುನ್ ಲುಕ್ ಬೇರೆ ಲೆವಲ್‌ನಲ್ಲಿದೆ. ಸ್ಟೈಲಿಶ್ ಬಿಯರ್ಡ್‌ನೊಂದಿಗೆ ಕ್ಲಾಸ್ ಅಂಡ್ ಮಾಸ್ ಲುಕ್‌ನಲ್ಲಿ ಕಮಾಲ್ ಮಾಡಿದ್ದಾರೆ. ಫೋಟೋದಲ್ಲಿ ಚಿತ್ರದ ಸಿನಿಮಾಟೋಗ್ರಫರ್ ಮಿರೋಸ್ಲಾ ಕುಬಾ ಬ್ರೋಜೆಕ್, ಅಲ್ಲು ಅರ್ಜುನ್‌ಗೆ ಸೀನ್ ವಿವರಿಸುತ್ತಿರುವುದನ್ನು ನೋಡಬಹುದು. ಫೋಟೊ ವೈರಲ್ ಆಗಿದ್ದು, 'ಪುಷ್ಪ'ರಾಜ್ ಶೂಟ್‌ಗೆ ಎಂಟ್ರಿ ಕೊಟ್ಟಿರುವುದು ಗೊತ್ತಾಗುತ್ತದೆ.

  ಹುಲಿ ಎದುರು 'ಪುಷ್ಪ'ರಾಜ್ ಅಬ್ಬರ

  ಹುಲಿ ಎದುರು 'ಪುಷ್ಪ'ರಾಜ್ ಅಬ್ಬರ

  ಫಸ್ಟ್ ಪಾರ್ಟ್‌ನಲ್ಲಿ 'ಪುಷ್ಪ'ರಾಜ್ ರಕ್ತಚಂದನದ ಸ್ಮಗ್ಲರ್ ಹೇಗೆ ಆದ ಎನ್ನುವುದನ್ನಷ್ಟೆ ತೋರಿಸಲಾಗಿದೆ. ಶೇಷಾಚಲದಿಂದ ರಕ್ತಚಂದನ ಸಾಗಿಸುತ್ತಿದ್ದ ಸಿಂಡಿಕೇಟ್‌ನ ತನ್ನ ಹತೋಟಿಗೆ ತೆಗೆದುಕೊಂಡಿದ್ದಾನೆ. ಇಲ್ಲಿಂದ ಮುಂದೆ ದೊಡ್ಡ ಸ್ಮಗ್ಲರ್ ಆಗಿ ಹೇಗೆ ಆರ್ಭಟ ನಡೆಸುತ್ತಾನೆ ಅನ್ನುವುದನ್ನು ಹೇಳಲಾಗ್ತಿದೆ. ಹಾಗಾಗಿ ಕಥೆ ಶೇಷಾಚಲದಿಂದ ಥಾಯ್ಲೆಂಡ್‌ವರೆಗೆ ಸಾಗುತ್ತದೆ ಎನ್ನಲಾಗ್ತಿದೆ. ಥಾಯ್ಲೆಂಡ್ ಕಾಡಿನಲ್ಲಿ 'ಪುಷ್ಪ'ರಾಜ್ ಹುಲಿ ಜೊತೆ ಕಾದಾಡುವ ಸನ್ನಿವೇಶವೂ ಇರುತ್ತೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

  ₹350 ಕೋಟಿ ಬಾಚಿದ್ದ 'ಪುಷ್ಪ'

  ₹350 ಕೋಟಿ ಬಾಚಿದ್ದ 'ಪುಷ್ಪ'

  ಕಳೆದ ವರ್ಷ ಡಿಸೆಂಬರ್ 17ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಭಾರೀ ಸದ್ದು ಮಾಡಿತ್ತು. ಪಕ್ಕಾ ಮಾಸ್ ಮಸಾಲಾ ಎಂಟರ್‌ಟೈನರ್ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅಲ್ಲು ಅರ್ಜುನ್ ಲುಕ್ಕು, ಮ್ಯಾನರಿಸಂ, ಪರ್ಫಾರ್ಮೆನ್ಸ್ ಸಖತ್ ಕಿಕ್ ಕೊಟ್ಟಿತ್ತು. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಮತ್ತಷ್ಟು ಬಲ ತುಂಬಿತ್ತು. ಸಮಂತಾ ಐಟಂ ಸಾಂಗ್ ಮತ್ತೊಂದು ಹೈಲೆಟ್. ಪರಿಣಾಮ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು. 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

  1000 ರೂ. ಕೋಟಿ ಕಲೆಕ್ಷನ್ ಟಾರ್ಗೆಟ್

  1000 ರೂ. ಕೋಟಿ ಕಲೆಕ್ಷನ್ ಟಾರ್ಗೆಟ್


  'ಪುಷ್ಪ'- 2 ಬಗ್ಗೆ ಭಾರೀ ಕ್ರೇಜ್ ಇದೆ. ಅದಕ್ಕೆ ತಕ್ಕಂತೆ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಪ್ರಯತ್ನ ನಡೀತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡುತ್ತಿದೆ. ಅದಕ್ಕೆ ತಕ್ಕಂತೆ ಸ್ಕೇಲ್, ಕ್ಯಾನ್ವಾಸ್, ಕಲಾವಿದರು ಹಾಗೂ ತಂತ್ರಜ್ಞರ ಸಂಭಾವೆ ಡಬಲ್ ಆಗಿದೆ. ಮುಂದಿನ ವರ್ಷದ ಕೊನೆಗೆ ಮತ್ತೆ ತೆರೆಮೇಲೆ 'ಪುಷ್ಪ'ರಾಜ್ ದರ್ಬಾರ್ ನಡೆಯಲಿದೆ.

  English summary
  Preparations for Allu Arjun Starrer Pushpa the Rule underway. cinematographer of the film, Kuba Brozek, shared a picture on Instagram.
  Sunday, October 30, 2022, 20:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X