For Quick Alerts
  ALLOW NOTIFICATIONS  
  For Daily Alerts

  ಮೂವರು ಅನಾಥ ಮಕ್ಕಳನ್ನು ದತ್ತು ಪಡೆದ ತೆಲುಗು ನಿರ್ಮಾಪಕ ದಿಲ್ ರಾಜು

  |

  ಸುಮಾರು ಎರಡು ತಿಂಗಳ ಹಿಂದಷ್ಟೇ ಎರಡನೆಯ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದ ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ದಿಲ್ ರಾಜು, ಮೂವರು ಅನಾಥ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  ಮದುವೆಗೂ ಮುಂಚೆ ಅಪ್ಪನಾದ ಹಾರ್ದಿಕ್ ಪಾಂಡ್ಯ | Hardik Pandya

  ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅಟ್ಮಕುರಿ ಗ್ರಾಮದ ಮನೋಹರ್, ಲಾಸ್ಯಾ ಮತ್ತು ಯಶವಂತ್ ಎಂಬ ಒಂದೇ ಕುಟುಂಬ ಮೂವರು ಅನಾಥ ಮಕ್ಕಳನ್ನು ದಿಲ್ ರಾಜು ದತ್ತು ತೆಗೆದುಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಈ ಕಾರ್ಯಕ್ಕೆ ಪ್ರೇರಣೆ ನೀಡಿರುವುದು ವಲಸಿಗ ಕಾರ್ಮಿಕರ ಬದುಕಿಗೆ ಆಧಾರವಾದ ನಟ ಸೋನು ಸೂದ್. ಈ ಮೂವರೂ ಮಕ್ಕಳ ಬದುಕು, ಶಿಕ್ಷಣದ ಖರ್ಚು ವೆಚ್ಚಗಳನ್ನು ತಾವೇ ಭರಿಸುವುದಾಗಿ ದಿಲ್ ರಾಜು ಹೇಳಿದ್ದಾರೆ. ಮುಂದೆ ಓದಿ...

  ಸಹಾಯ ಮಾಡುವ ಭರವಸೆ ನೀಡಿದ್ದ ಸೋನು

  ಸಹಾಯ ಮಾಡುವ ಭರವಸೆ ನೀಡಿದ್ದ ಸೋನು

  ಈ ಮೂವರು ಮಕ್ಕಳು ಒಬ್ಬರಿಗೊಬ್ಬರು ಸಹಾಯ ಮಾಡುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಮೂಲವನ್ನು ತಿಳಿದ ಸೋನು ಸೂದ್, ಆ ಅನಾಥ ಮಕ್ಕಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.

  ಮದ್ವೆ ಸಂಭ್ರಮದ ನಂತರ ಭಾರಿ ನಷ್ಟದ ಭೀತಿಯಲ್ಲಿ ದಿಲ್ ರಾಜುಮದ್ವೆ ಸಂಭ್ರಮದ ನಂತರ ಭಾರಿ ನಷ್ಟದ ಭೀತಿಯಲ್ಲಿ ದಿಲ್ ರಾಜು

  ಈ ಮೂವರೂ ಇನ್ನು ಅನಾಥರಲ್ಲ. ಅವರ ಜೀವನ ಇನ್ನು ನನ್ನ ಹೊಣೆ ಎಂದು ಸೋನು ಸೂದ್ ಹೇಳಿದ್ದರು. ಈ ಮಕ್ಕಳ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರೆ, ಕೆಲವು ದಿನಗಳ ಹಿಂದೆ ತಾಯಿ ಕೂಡ ಮೃತಪಟ್ಟಿದ್ದರು.

  ಟ್ರಸ್ಟ್ ಮೂಲಕ ಮಕ್ಕಳಿಗೆ ನೆರವು

  ಟ್ರಸ್ಟ್ ಮೂಲಕ ಮಕ್ಕಳಿಗೆ ನೆರವು

  ಈ ಮಕ್ಕಳ ಕುರಿತು ತಿಳಿದ ತೆಲಂಗಾಣ ರಾಜ್ಯ ಪಂಚಾಯತ್ ರಾಜ್ಯ ಸಚಿವ ಎರ್ರಬೆಳ್ಳಿ ದಯಾಕರ ರಾವ್, ಶಾಸಕರೊಂದಿಗೆ ಮಾತನಾಡಿ ಅವರ ವಿವರ ಪಡೆದುಕೊಂಡಿದ್ದರು. ಬಳಿಕ ನಿರ್ಮಾಪಕ ದಿಲ್ ರಾಜು ಅವರಿಗೆ ಕರೆ ಮಾಡಿ ಸಹಾಯಕ್ಕಾಗಿ ಕೋರಿದ್ದರು. ತಮ್ಮ ಕುಟುಂಬದ ಟ್ರಸ್ಟ್ 'ಮಾ ಪಳ್ಳೆ' ಮೂಲಕ ಮೂರೂ ಮಕ್ಕಳನ್ನು ದಿಲ್ ರಾಜು ದತ್ತು ತೆಗೆದುಕೊಂಡಿದ್ದಾರೆ.

  ಲಾಕ್ ಡೌನ್ ನಲ್ಲಿ 2ನೇ ಮದುವೆಯಾದ ತೆಲುಗಿನ ಖ್ಯಾತ ನಿರ್ಮಾಪಕಲಾಕ್ ಡೌನ್ ನಲ್ಲಿ 2ನೇ ಮದುವೆಯಾದ ತೆಲುಗಿನ ಖ್ಯಾತ ನಿರ್ಮಾಪಕ

  ಅಮ್ಮನ ಅಂತ್ಯಸಂಸ್ಕಾರಕ್ಕೂ ಹಣವಿರಲಿಲ್ಲ

  ಅಮ್ಮನ ಅಂತ್ಯಸಂಸ್ಕಾರಕ್ಕೂ ಹಣವಿರಲಿಲ್ಲ

  ಕೆಲವು ದಿನಗಳ ಹಿಂದಷ್ಟೇ ತಾಯಿ ಅನುರಾಧಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಮನೋಹರ್, ಲಾಸ್ಯಾ ಮತ್ತು ಯಶವಂತ ಅನಾಥರಾಗಿದ್ದರು. ಅಮ್ಮನ ಅಂತ್ಯಸಂಸ್ಕಾರ ನಡೆಸಲೂ ಮಕ್ಕಳ ಬಳಿ ಹಣ ಇರಲಿಲ್ಲ. ಕೊನೆಗೆ ಗ್ರಾಮಸ್ಥರೆಲ್ಲ ಸೇರಿ ಅನುರಾಧಾ ಅವರ ಅಂತ್ಯಕ್ರಿಯೆ ನಡೆಸಿದ್ದರು. ದೊಡ್ಡ ಮಗನಾದ ಮನೋಹರ್ ಇನ್ನಿಬ್ಬರ ಆರೈಕೆ ಮಾಡಬೇಕಿತ್ತು. ಈ ಮೂವರ ವಿಡಿಯೋವೊಂದು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಲುಪಿದೆ.

  ಎರಡನೆಯ ಮದುವೆಯಾಗಿದ್ದ ದಿಲ್ ರಾಜು

  ಎರಡನೆಯ ಮದುವೆಯಾಗಿದ್ದ ದಿಲ್ ರಾಜು

  ಇಷ್ಟು ಚಿಕ್ಕ ವಯಸ್ಸಲ್ಲಿ ಪೋಷಕರನ್ನು ಕಳೆದುಕೊಳ್ಳುವುದು ಯಾರಿಗಾದರೂ ತೀವ್ರ ಸಂಕಷ್ಟದ ಸಂಗತಿ. ಇಲ್ಲಿಂದ ನಾನು ಅವರ ಬೆಂಬಲಕ್ಕೆ ಇರುತ್ತೇನೆ ಎನ್ನುವುದು ಖುಷಿಯಾಗುತ್ತಿದೆ ಎಂದು ದಿಲ್ ರಾಜು ಹೇಳಿದ್ದಾರೆ. ನಿರ್ಮಾಪಕ ದಿಲ್ ರಾಜು ಮೇ ತಿಂಗಳಲ್ಲಿ ಎರಡನೆಯ ಮದುವೆಯಾಗಿದ್ದರು. ಅವರ ಪತ್ನಿ ವೈಘಾ ರೆಡ್ಡಿ, ಮೊದಲ ಪತ್ನಿಯ ಮಗಳಿಗಿಂತ ಕೇವಲ ಒಂದು ವರ್ಷ ದೊಡ್ಡವರು ಎನ್ನುವ ಸಂಗತಿ ಚರ್ಚೆಗೆ ಒಳಗಾಗಿತ್ತು.

  2ನೇ ಮದುವೆಯಾದ ಖ್ಯಾತ ನಿರ್ಮಾಪಕ: ಅಪ್ಪನಿಗೆ ಮಗಳ ಹೃದಯಸ್ಪರ್ಶಿ ಸಂದೇಶ2ನೇ ಮದುವೆಯಾದ ಖ್ಯಾತ ನಿರ್ಮಾಪಕ: ಅಪ್ಪನಿಗೆ ಮಗಳ ಹೃದಯಸ್ಪರ್ಶಿ ಸಂದೇಶ

  English summary
  Telugu producer Dil Raju has adopted three orphan children after a request from minister Errabelli Dayakar Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X