For Quick Alerts
  ALLOW NOTIFICATIONS  
  For Daily Alerts

  ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಖ್ಯಾತ ಕಾಮಿಡಿ ನಟ ಅರೆಸ್ಟ್

  |

  ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಆಂಧ್ರಪ್ರದೇಶದ ವಿಶಾಖಪಟ್ಟಣಂ ಪೊಲೀಸರು ಇಬ್ಬರು ಕಿರುತೆರೆ ಕಾಮಿಡಿ ನಟರು ಸೇರಿದಂತೆ ಒಟ್ಟು 4 ಜನರನ್ನು ಬಂಧಿಸಿದ್ದಾರೆ. ತೆಲುಗಿನ ಪ್ರಸಿದ್ಧ ಕಾಮಿಡಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಜಬರ್ದಸ್ತ್ ಖ್ಯಾತಿಯ ನಟ ಡೋರಾಬಾಬು ಮತ್ತು ಪರದೇಸಿ ಇಬ್ಬರು ನಟರನ್ನು ಪೊಲೀಸರು ಬಂಧಿಸಿದ್ದಾರೆ.

  ಪೊಲೀಸರು ದಿಢೀರನೆ ದಾಳಿ ಮಾಡಿದಾಗ ಅಪಾರ್ಮೆಂಟ್ ನಲ್ಲಿದ್ದ ಡೋರಾಬಾಬು ಮತ್ತು ಸ್ನೇಹಿತ ಪರದೇಶಿ ಇಬ್ಬರು ತಪ್ಪಿಸಿಕೊಂಡು ಓಡಲು ಯತ್ನಿಸಿದ್ದರಂತೆ. ಆದರೆ ಇಬ್ಬರನ್ನು ಪೊಲೀಸರು ಹಿಡಿದು ವಶಕ್ಕೆ ಪಡೆದಿದ್ದಾರೆ. ಡೋರಾಬಾಬು ಜೊತೆ ಜಬರ್ದಸ್ತ್ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದ ಪರದೇಶಿಯನ್ನು ಜೊತೆಗೆ ಸೇರಿಸಿಕೊಂಡಿದ್ದಾರೆ..ಮುಂದೆ ಓದಿ..

  ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ನಟಿಯನ್ನು ರಕ್ಷಿಸಿದ ಪೊಲೀಸರುಹೈಟೆಕ್ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ನಟಿಯನ್ನು ರಕ್ಷಿಸಿದ ಪೊಲೀಸರು

  ಸ್ಥಳಿಯರಿಂದ ಮಾಹಿತಿ ಪಡೆದಿದ್ದ ಪೊಲೀಸರು

  ಸ್ಥಳಿಯರಿಂದ ಮಾಹಿತಿ ಪಡೆದಿದ್ದ ಪೊಲೀಸರು

  ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ವಿಶಾಖಪಟ್ಟಣಂ ಪೊಲೀಸರು ಸ್ಥಳಿಯರಿಂದ ಮಾಹಿತಿ ಪಡೆದು ಕೊಂಡಿದ್ದರಂತೆ. ಮಾಹಿತಿ ಪಡೆದ ಪೊಲೀಸರು ಕಳೆದ ಮಂಗಳವಾರ ರಾತ್ರಿ ದಾಳಿ ನಡೆಸಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿದ್ದ ಡೋರಾಬಾಬು ಮೂವರ ಜೊತೆ ಸೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.

  ಬಂಧಿಸದಂತೆ ಬೇಡಿಕೊಂಡ ಡೋರಾಬಾಬು

  ಬಂಧಿಸದಂತೆ ಬೇಡಿಕೊಂಡ ಡೋರಾಬಾಬು

  ಸ್ಥಳಿಯರಿಂದ ಮಾಹಿತಿ ಪಡೆದ ಪೊಲೀಸರು ವಿಶೇಷ ಕಾರ್ಯ ಪಡೆಯೊಂದಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡೋರಾಬಾಬು ಬಂಧಿಸದಂತೆ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರಂತೆ. ಡೋರಾಬಾಬು ಕಣ್ಣೀರಿಗೆ ಕರಗದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

  ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ದೇಶಕನ ಬಂಧನ: ಇಬ್ಬರು ಹೆಣ್ಣುಮಕ್ಕಳ ರಕ್ಷಣೆವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ದೇಶಕನ ಬಂಧನ: ಇಬ್ಬರು ಹೆಣ್ಣುಮಕ್ಕಳ ರಕ್ಷಣೆ

  ಮಾಹಿತಿ ನೀಡಿದ ಪೊಲೀಸರು

  ಮಾಹಿತಿ ನೀಡಿದ ಪೊಲೀಸರು

  ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಾರ್ಯಪಡೆಯ ಸಹಾಯಕ ಆಯುಕ್ತ ತ್ರೀನಾದ್ ರಾವ್, ಇಬ್ಬರು ಕಾಮಿಡಿ ಕಲಾವಿದರು ಅರೆಸ್ಟ್ ಆಗಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇಬ್ಬರನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುವುದಾಗಿ ಹೇಳಿದ್ದಾರೆ.

  ಪೋರ್ನ್ ಸಿನಿಮಾದಲ್ಲಿ ಅಭಿನಯಿಸಿದ್ದ ಡೋರಾಬಾಬು

  ಪೋರ್ನ್ ಸಿನಿಮಾದಲ್ಲಿ ಅಭಿನಯಿಸಿದ್ದ ಡೋರಾಬಾಬು

  ಡೋರಾಬಾಬು ಪೋರ್ನ್ ನಟ. ಸಾಕಷ್ಟು ಪೋರ್ನ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಸದ್ಯ ಟಿವಿಯಲ್ಲಿ ಮಿಂಚುತ್ತಿರುವ ಡೋರಾಬಾಬು ಜಬರ್ದಸ್ತ್ ಕಾರ್ಯಕ್ರಮದಲ್ಲೂ ಪ್ರೇಕ್ಷಕರಿಗೆ ಮುಜುಗರ ವೊಂಟುಮಾಡುವ ಅತಿರೇಕದ ಕಾಮಿಡಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಂತೆ. ಎರಡು ವರ್ಷಗಳ ಹಿಂದೆ ಡೋರಾಬಾಬು ನಿರೂಪಕಿಯ ಜೊತೆ ಹಸೆಮಣೆ ಏರಿದ್ದಾರೆ.

  English summary
  Prostitution racket: Telugu Comedy Actor Jabardasth fame Dorababu and Paradesi arrested.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X